ಶ್ರೀಮುರಳಿ ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಘೋಷಣೆ; ಮುಂದಿನ ವರ್ಷ ಪ್ರಾರಂಭ

Murali
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಶ್ರೀಮುರಳಿ ಇತ್ತೀಚೆಗೆ (ಡಿ.17) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ 'ಬಘೀರ' ಚಿತ್ರದ ಹೊಸ ಪೋಸ್ಟರ್​ ಬಿಡುಗಡೆಯಾಗಿದೆ.

ಈ ಮಧ್ಯೆ, ಮುರಳಿ ಅಭಿನಯದಲ್ಲಿ ಹೊಸ ಚಿತ್ರವೊಂದು ಘೋಷಣೆಯಾಗಿದೆ. ಅಷ್ಟೇ ಅಲ್ಲ, ಚಿತ್ರದ ಕಾನ್ಸೆಪ್ಟ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಶಾಸಕ ಶಾಮನೂರು ಶಿವಶಂಕರಪ್ಪ ಅವರು ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದ್ದಾರೆ.

ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಹಾಲೇಶ ಕೊಗುಂಡಿ. ಬ್ರಾಂಡ್ - ಕಾರ್ಪೊರೇಟ್ ಪ್ರೊಡಕ್ಷನ್ಸ್​ ಎಂಬ ಸಂಸ್ಥೆಯಡಿ ದಾವಣಗೆರೆಯ ಯುವಕರ ತಂಡವು ಈ ಚಿತ್ರವನ್ನು ನಿರ್ಮಿಸುತ್ತಿದೆ. ಮೊದಲ ಬಾರಿಗೆ ಶ್ರೀಮುರಳಿ ಅಭಿನಯದ ಚಿತ್ರವೊಂದನ್ನು ನಿರ್ಮಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದೆ. ಸದ್ಯಕ್ಕೆ ಈ ಚಿತ್ರದ ಘೋಷಣೆಯಷ್ಟೇ ಆಗಿದ್ದು, ಮುಂದಿನ ವರ್ಷದಿಂದ ಚಿತ್ರ ಪ್ರಾರಂಭವಾಗಲಿದೆ.

ಅಂದ ಹಾಗೆ, ಶ್ರೀಮುರಳಿ ಅಭಿನಯದ 'ಬಘೀರ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಅದು ಸಹ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್​ ನಿರ್ಮಿಸಿ, ಡಾ.ಸೂರಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರುಕ್ಮಿಣಿ ವಸಂತ್​ ನಾಯಕಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net