ಅಂತೆಯೇ, ಇದೀಗ ವರ್ಮಾ ಅವರ 'ಡೇಂಜರಸ್' ಎಂಬ ಟೈಟಲ್ ಹಾಗೂ 'ಮಾ ಇಷ್ಟಂ' ಎಂಬ ಕ್ಯಾಪ್ಷನ್ ಹೊಂದಿರುವ ಸಿನಿಮಾ ರಿಲೀಸ್ ಆಗಲು ರೆಡಿಯಾಗಿದೆ. ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸಿದ್ಧತೆಗಳನ್ನು ನಡೆಸಿರುವ ನಿರ್ದೇಶಕ ಆರ್.ಜಿ.ವಿ ಅವರು ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ ನಗರಗಳಲ್ಲಿ ಪ್ರಚಾರವನ್ನು ಮಾಡಿದ್ದಾರೆ. ಇನ್ನು, ಈ ಸಿನಿಮಾ ಏಪ್ರಿಲ್ 08 ಅಂದರೆ ಇಂದು ತೆರೆಗಪ್ಪಳಿಸಬೇಕಿತ್ತು. ಆದರೆ, ಸದ್ಯ ಈ ಸಿನಿಮಾದ ರಿಲೀಸ್ ಮುಂದೂಡಲ್ಪಟ್ಟಿದೆ. ಇದಕ್ಕೆ, ಕಾರಣ ಏನು ಅಂತೀರಾ...? ನಿರ್ದೇಶಕ ವರ್ಮಾ ಅವರ ಈ 'ಡೇಂಜರಸ್' ಎಂಬ ಸಿನಿಮಾವನ್ನು ಚಿತ್ರಮಂದಿರಗಳ ಮಾಲೀಕರು ಪ್ರದರ್ಶನ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ, ಈ ಸಿನಿಮಾದ ಬಿಡುಗಡೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗಾದರೆ, ಚಿತ್ರಮಂದಿರದ ಮಾಲೀಕರು ಯಾಕೆ ಈ ಸಿನಿಮಾವನ್ನು ಪ್ರದರ್ಶನ ಮಾಡುವುದಿಲ್ಲ ಎಂದಿದ್ದಾರೆ? ಈ ಪ್ರಶ್ನೆಗೆ ಉತ್ತರವೇ, ಈ ಚಿತ್ರದಲ್ಲಿ ಇಬ್ಬರು ಯುವತಿಯರು ಪರಸ್ಪರ ಪ್ರೇಮಿಸುವ, ಅವರಿಗೆ ವಿಲನ್ಗಳಿಂದ ಸಮಸ್ಯೆ ಆಗುವ ಮತ್ತು ವಿಲನ್ಗಳನ್ನು ಎದುರಿಸಿ ಅವರ ಪ್ರೀತಿಯನ್ನು ಉಳಿಸಿಕೊಳ್ಳುವ ಕಥೆ.