ಸಿನಿಮಾ ಆಗುತ್ತಿದೆ ವೈಶಂಪಾಯನ ತೀರ; 12ರಿಂದ ಶೂಟಿಂಗ್ ಆರಂಭ

Vyshampayana
Published on

ಬೆಂಗಳೂರು: ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಜನಪ್ರಿಯ ಕಥೆಗಳಲ್ಲೊಂದಾದ ‘ವೈಶಂಪಾಯನ ತೀರ’ ಇದೀಗ ಸಿನಿಮಾ ಆಗುತ್ತಿದೆ. ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ 12ರಿಂದ ಬೆಂಗಳೂರಿನಲ್ಲಿ ಶೂಟಿಂಗ್ ಶುರುವಾಗಲಿದ್ದು, ಆ ನಂತರ ಶೃಂಗೇರಿಯ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ‘ವೈಶಂಪಾಯನ ತೀರ’ ಕಥೆಯನ್ನು ಅದೇ ಹೆಸರಿನಲ್ಲಿ ಸಿನಿಮಾ ಮಾಡುವುದಕ್ಕೆ ಹೊರಟವರು ಮಲೆನಾಡ

ಸಾಂಸ್ಕೃತಿಕ ಸಂಘಟಕ ರಮೇಶ್ ಬೇಗಾರ್. ಯಕ್ಷಗಾನ, ನಾಟಕ, ಹರಿಕಥೆ, ಜಾನಪದ, ಭಕ್ತಿ ಸಂಗೀತ ಸೇರಿ ವಿವಿಧ ಕಲಾ ಪ್ರಕಾರಗಳ ಕ್ಯಾಸೆಟ್​ಗಳನ್ನು ಬಿಡುಗಡೆ ಮಾಡಿರುವ ಸ್ವರಸಂಗಮ ಎಂಟರ್​ಟೈನ್​ವೆುಂಟ್ ಸಂಸ್ಥೆಯು ಈ ಚಿತ್ರವನ್ನು ನಿರ್ವಿುಸುತ್ತಿದೆ. ಯಕ್ಷಗಾನ ಕಲಾವಿದರ ಜೀವನದ ಜತೆಗೆ ಮಲೆನಾಡಿನ ಪ್ರಕೃತಿ ನಾಶದ ಕಥನವನ್ನು ಸಮೀಕರಿಸಿ ನೋಡುವ ಪ್ರಯತ್ನ ಈ ಚಿತ್ರದ ಮೂಲಕ ಆಗುತ್ತಿದೆ ಎನ್ನುವ ಬೇಗಾರ್, ‘ಇಂದಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು 30 ವರ್ಷಗಳ ಹಿಂದಿನ ಕಥೆಯ ಮೂಲ ದ್ರವ್ಯಕ್ಕೆ ವ್ಯತ್ಯಯವಾಗದಂತೆ ಚಿತ್ರಕಥೆಯನ್ನು ರಚಿಸಲಾಗಿದೆ’ ಎನ್ನುತ್ತಾರೆ. ಚಿತ್ರದಲ್ಲಿ ರಮೇಶ್ ಭಟ್, ರಮೇಶ್ ಪಂಡಿತ್, ಬಾಬು ಹಿರಣ್ಣಯ್ಯ, ಪ್ರಮೋದ್ ಶೆಟ್ಟಿ, ವೈಜಯಂತಿ ಅಡಿಗ, ಬಿ ಎಲ್. ರವಿಕುಮಾರ್, ರವೀಶ್ ಹೆಗ್ಡೆ, ಪ್ರಸನ್ನ ಶೆಟ್ಟಿಗಾರ್ ಮುಂತಾದವರು ನಟಿಸಿದ್ದು, ಶ್ರೀನಿಧಿ ಕೊಪ್ಪ ಸಂಗೀತ ಸಂಯೋಜಿಸಿದರೆ, ಶಶಿರ ಛಾಯಾಗ್ರಹಣ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net