ಹೈದರಾಬಾದ್​ನಲ್ಲಿ ರಸ್ತೆ ಅಪಘಾತ; ಟಾಲಿವುಡ್​ನ ಉದಯೋನ್ಮುಖ ನಟ ಭರತ್ ಕಾಂತ್ ನಿಧನ, ತಾರೆಯರಿಂದ ಸಂತಾಪ..Telugu actor dies

Telugu Actor K Bharat Kanth Dies
Telugu Actor K Bharat Kanth Dies
Published on
ಹೈದರಾಬಾದ್: ಇಲ್ಲಿನ ಆದಿ ಬಟ್ಲಾ ಎನ್ನುವ ಪ್ರದೇಶದ ಹೊರ ವರ್ತುಲ ರಸ್ತೆಯಲ್ಲಿ ಅಪಘಾತ ನಡೆದು, ತೆಲುಗು ಉದಯೋನ್ಮುಖ ನಟ ಕೆ ಭರತ್ ಕಾಂತ್​ (31) ಎಂಬುವವರು ಮೃತಪಟ್ಟಿದ್ದಾರೆ. ಇವರು ಆಂಧ್ರಪ್ರದೇಶದ ನೆಲ್ಲೂರು ನಿವಾಸಿ ಎನ್ನಲಾಗಿದೆ. ​
ನಿಂತಿದ್ದ ಕಂಟೇನರ್​ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಅದರ ತೀವ್ರತೆಗೆ ಕಂಟೇನರ್ ಲಾರಿಯ ಹಿಂದಿನ ಚಕ್ರಗಳು ಕಳಚಿ ಬಿದ್ದವು. ಕಾರು ತೀವ್ರವಾಗಿ ಹಾನಿಗೊಳಗಾಗಿತ್ತು. ವಾಹನದಲ್ಲಿದ್ದ ಭರತ್​ ಕಾಂತ್ . ಕೆ.ಭರತ್ ಕಾಂತ್ ಮತ್ತು ಜಿ.ಸಾಯಿ ತ್ರಿಲೋಕ್ ಮೃತ್ತಪಟ್ಟಿದ್ದಾರೆ ಎನ್ನಲಾಗಿದೆ. 31 ವರ್ಷದ ನಟನ ಸಾವಿಗೆ ಸೋಶಿಯಲ್​ ಮೀಡಿಯಾ ಫಾಲೋವರ್​ಗಳು ಕಂಬನಿ ಮಿಡಿದ್ದಿದ್ದಾರೆ.

ಪೊಲೀಸರು ಏನಂದ್ರು?

ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಆದಿಬಟ್ಲಾ ಇನ್ಸ್‌ಪೆಕ್ಟರ್ ಬಿ ರವಿ ಕುಮಾರ್ ಮಾತನಾಡಿ ನಿರ್ಗಮನ ಸಂಖ್ಯೆ 12ರ ಬಳಿಗೆ ಕಾರು ತಲುಪುತ್ತಿದ್ದಂತೆ ಭರತ್ ಕಾಂತ್, ಕಂಟೇನರ್ ಟ್ರಕ್‌ಗೆ ಡಿಕ್ಕಿ ಹೊಡೆದರು. ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು" ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಭರತ್ ಕಾಂತ್ ಯಾರು?

ಭರತ್​ ಕಾಂತ್​​ ಡ್ಯಾನ್ಸರ್​, ಕಾಂಟೆಂಟ್​ ಕ್ರಿಯೇಟರ್​ ಆಗಿ ಹೆಸರು ಮಾಡಿದ್ದರು. ಸಾಮಾಜಿಕ ಮಾಧ್ಯಮ ಬೆಳೆಯುತ್ತಿರುವ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 40,000 ಅನುಯಾಯಿಗಳು ಮತ್ತು ಯೂಟ್ಯೂಬ್‌ನಲ್ಲಿ ಸುಮಾರು 30,000 ಚಂದಾದಾರರನ್ನು ಹೊಂದಿದ್ದರು.
ಭರತ್​ ಕಾಂತ್​ ಇತ್ತೀಚೆಗೆ ಕಿರುಚಿತ್ರದಲ್ಲಿಯೂ ಕೆಲಸ ಮಾಡಿದ್ದಾರೆ ಚೆನ್ನ ನಾರಾಯಣ ನಿರ್ದೇಶನದ ಗ್ರಾಮಂ ಚಿತ್ರದಲ್ಲಿ ನಟಿ ರೂಪಾ ಶ್ರೀದೇವಿ ಜೊತೆಗೆ ಕಾಣಿಸಿಕೊಂಡರು. 2024 ರ ತೆಲುಗು ಚಿತ್ರ ಟೆನೆಂಟ್ ನಲ್ಲಿಯೂ ಅವರು ನಟಿಸಿದ್ದರು.

ಯಾರೆಲ್ಲ ಸಂತಾಪ ಸೂಚಿಸಿದ್ರು?

ಕಿರುತರೆ ನಟಿ ಚಾಂದಿನಿ ಕೌರ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಭರತ್ ಕಾಂತ್ ಯಾವಾಗಲೂ ತನ್ನ ಜೀವನದ ಭಾಗವಾಗಿ ಉಳಿಯುತ್ತಾರೆ ಎಂದು ಹೇಳಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net