ಸೀರಿಯಲ್​ ನಟನಿಗೆ ಕರೊನಾ ಪಾಸಿಟಿವ್​; ಧಾರಾವಾಹಿಗಳ ಶೂಟಿಂಗ್​ ರದ್ದು!

collage (23)
Published on

ಧಾರಾವಾಹಿಗಳ ಶೂಟಿಂಗ್​ಗೆ ಅನುಮತಿ ಸಿಕ್ಕು ಒಂದು ತಿಂಗಳಾಯಿತು. ಎಲ್ಲಿಯೂ ಒಂದೇ ಒಂದು ಕರೊನಾ ಪಾಸಿಟಿವ್​ ವರದಿಯಾದ ಪ್ರಕರಣ ಕಂಡು ಬಂದಿರಲಿಲ್ಲ. ಆದರೆ, ಇದೀಗ ಅದೂ ನಡೆದೇ ಬಿಟ್ಟಿದೆ. ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ, ಕರೊನಾ ಮಾರಿ ಸೀರಿಯಲ್​ ರಂಗವನ್ನೂ ಪ್ರವೇಶಿಸಿ, ಎರಡು ಸೀರಿಯಲ್​ಗಳ ಶೂಟಿಂಗ್​ ಅನ್ನೇ ರದ್ದು ಮಾಡಿದೆ.

ಹೌದು, ಇದು ನಡೆದಿರುವುದು ಪಕ್ಕದ ಹೈದರಾಬಾದ್​ನಲ್ಲಿ. ಅಲ್ಲಿನ ಖ್ಯಾತ ಧಾರಾವಾಹಿಯೊಂದರ ನಟನಿಗೆ ಕರೊನಾ ಪಾಸಿಟಿವ್​ ವರದಿಯಾಗಿದ್ದು, ಇಡೀ ತಂಡವನ್ನು ಸಂಕಷ್ಟಕ್ಕೆ ದೂಡಿದೆ. ಅಷ್ಟೇ ಅಲ್ಲ ಪಾಸಿಟಿವ್ ಬಂದ ನಟ ಮತ್ತೆರಡು ಸೀರಿಯಲ್​ಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಆ ತಂಡಗಳೂ ತಮ್ಮೆಲ್ಲ ಟೀಮ್​ ಸದಸ್ಯರಿಗೆ ಕೋವಿಡ್​ ಪರೀಕ್ಷೆ ಮಾಡಿಸಿದೆ.

ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ. ತೆಲುಗು ಕಿರುತೆರೆಯ ನಿರ್ಮಾಪಕ ಸಂಘದ ಖಜಾಂಚಿಯಾಗಿರುವ ಕೆ. ರಮೇಶ್​ ಬಾಬು, ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಎಲ್ಲ ಧಾರಾವಾಹಿ ತಂಡಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. ಕೆಲ ಮೂಲಗಳ ಪ್ರಕಾರ, ಸೋಂಕಿಗೆ ಒಳಗಾಗಿರುವ ನಟ, ಇತ್ತೀಚೆಗಷ್ಟೇ ಹೈದರಾಬಾದ್​ನಿಂದ ತಿರುಪತಿ ಟ್ರೇನ್​ ಮೂಲಕ ಪ್ರಯಾಣಿಸಿದ್ದರು ಎನ್ನಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net