ಯುವರಾಜನ ಹುಟ್ಟುಹಬ್ಬಕ್ಕೆ ಟೀಸರ್​ ಗಿಫ್ಟ್​ ...

Rider - Final
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್​ ಕುಮಾರ್​ ಅವರ ಹುಟ್ಟುಹಬ್ಬ ಇಂದು. ಕಳೆದ ವರ್ಷದ ಹುಟ್ಟುಹಬ್ಬಕ್ಕೆ ನಿಖಿಲ್​ ಅಭಿನಯದ ನಾಲ್ಕು ಚಿತ್ರಗಳ ಘೋಷಣೆಯಾಗಿತ್ತು. ಈ ಬಾರಿ ಯಾವುದೇ ಹೊಸ ಚಿತ್ರದ ಘೋಷಣೆಯಾಗದಿದ್ದರೂ, 'ರೈಡರ್​' ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

ಲಹರಿ ಫಿಲಂಸ್​ ನಿರ್ಮಾಣದ ಚಿತ್ರ 'ರೈಡರ್​'. ಚಂದ್ರು ಮನೋಹರ್​ ನಿರ್ಮಿಸುತ್ತಿರುವ ಈ ಚಿತ್ರವನ್ನು ತೆಲುಗಿನ ವಿಜಯ್​ಕುಮಾರ್​ ಕೊಂಡ ನಿರ್ದೇಶಿಸಿದ್ದು, ಈ ಚಿತ್ರದ ಒಂದು ಸ್ಟೈಲಿಶ್​ ಟೀಸರ್​ ನಿಖಿಲ್​ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಿಡುಗಡೆಯಾಗಿದೆ.

ಸಖತ್​ ಆಕ್ಷನ್​ ದೃಶ್ಯಗಳಿರುವ ಈ ಟೀಸರ್​ ಶುಕ್ರವಾರ ಬೆಳಿಗ್ಗೆ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆಯುತ್ತಿದೆ. ಅದರಲ್ಲೂ ಟೀಸರ್​ಗೆ ಸಂಯೋಜಿಸಲಾಗಿರುವ ಹಿನ್ನೆಲೆ ಸಂಗೀತದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದುಲ, ಆಕ್ಷನ್​ ದೃಶ್ಯಗಳ ಜತೆಗೆ, ಬ್ಯಾಕ್​ಗ್ರೌಂಡ್​ ಮ್ಯೂಸಿಕ್​ ಸಹ ಹೈಲೈಟ್​ ಎಂದು ಹೇಳಲಾಗುತ್ತಿದೆ.

'ರೈಡರ್​' ಚಿತ್ರವು ಏಕಕಾಲದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುದು ವಿಶೇಷ. ಈಗಾಗಲೇ ಚಿತ್ರದ ಶೇ. 30ರಷ್ಟು ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಚಿತ್ರದ ಉಳಿದ ಭಾಗದ ಚಿತ್ರೀಕರಣ ಪ್ರಾರಂಭವಾಲಿದೆ.

ಈ ಚಿತ್ರದಲ್ಲಿ ನಿಖಿಲ್​ ಕುಮಾರ್​ 'ರೈಡರ್​' ಆಗಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ಕಾಶ್ಮೀರಾ ಪರದೇಶಿ ಅಭಿನಯಿಸುತ್ತಿದ್ದಾರೆ. ಮಿಕ್ಕಂತೆ ದತ್ತಣ್ಣ, ಅಚ್ಯುತ್​ ಕುಮಾರ್​, ಚಿಕ್ಕಣ್ಣ, ಶಿವರಾಜ್​ ಕೆಆರ್​ ಪೇಟೆ, ರಾಜೇಶ್​ ನಟರಂಗ, ಶೋಭರಾಜ್​ ಮುಂತಾದವರು ನಟಿಸುತ್ತಿದ್ದಾರೆ.

ಚಿತ್ರಕ್ಕೆ ಅರ್ಜುನ್​ ಜನ್ಯ ಅವರ ಸಂಗೀತವಿದ್ದು, ಶ್ರೀಷ ಕೂದುವಳ್ಳಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದ ಉಳಿದ ಭಾಗದ ಚಿತ್ರೀಕರಣ ಮುಂದಿನ ಕೆಲವು ದಿನಗಳಲ್ಲಿ ಮುಕ್ತಾಯವಾಗುವ ನಿರೀಕ್ಷೆ ಇದ್ದು, ಇದೇ ವರ್ಷ 'ರೈಡರ್​' ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net