'ತಾರೆ ಜಮೀನ್ ಪರ್' ಬಾಲನಟ ದರ್ಶೀಲ್​ಗೆ 25ನೇ ಹುಟ್ಟು ಹಬ್ಬದ ಸಂಭ್ರಮ! ಈಗ ಹೇಗಿದ್ದಾರೆ ಗೊತ್ತಾ?

Published on
2007ರ ಡಿಸೆಂಬರ್ 21 ರಂದು ರಿಲೀಸ್ ಆದ ‘ತಾರೆ ಜಮೀನ್ ಪರ್’ ಸಿನಿಮಾ ಆ ವರ್ಷದಲ್ಲಿ ಸೂಪರ್ ಟೂಪರ್ ಹಿಟ್ ಎನಿಸಿಕೊಂಡ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿತ್ತು. ಗಲ್ಲಾ ಪಟ್ಟಿಗೆಯಲ್ಲಿ ಸಹ ಬರೋಬ್ಬರಿ 130 ಕೋಟಿ ರೂ. ಕಲೆಕ್ಷಣ್ ಮಾಡಿತು. ಇನ್ನು, ಈ ಚಿತ್ರದಲ್ಲಿ ನಟ ಅಮಿರ್ ಖಾನ್ ಮತ್ತು ಬಾಲನಟ ದರ್ಶೀಲ್ ಸಫಾರಿ ಅವರ ಅಭಿನಯವನ್ನು ಸಿನಿಪ್ರೇಕ್ಷಕರು ಇಂದಿಗೂ ಮರೆಯಲು ಸಾಧ್ಯವಿಲ್ಲ.
‘ತಾರೆ ಜಮೀನ್ ಪರ್’ ಸಿನಿಮಾ ನೋಡಿದ ಬಹುತೇಕ ಎಲ್ಲಾ ಜನರು ಅಮಿರ್ ಖಾನ್ ಮತ್ತು ದರ್ಶೀಲ್ ಸಫಾರಿಯ ಅಭಿಮಾನಿಗಳು ಆಗಿದ್ದು ಉಂಟು. ಆಗ, ಬಾಲ ನಟ ದರ್ಶೀಲ್ ಸಫಾರಿ ಅವರು ಕೇವಲ 9 ವರ್ಷದ ಹಾಗೂ ನಾಲ್ಕು ಅಡಿ ಬಾಲಕನಾಗಿದ್ದರು. ಹೀಗಿದ್ದರೂ ಅವರ ನಟನೆ ಮಾತ್ರ ಸೂಪರ್ ಎಂದೇ ಹೇಳಬೇಕು. ಆದರೆ, ಈಗ ನಟ ದರ್ಶೀಲ್ ಸಫಾರಿ ಹೇಗಿದ್ದಾರೆ ಗೊತ್ತಾ...?
ಆ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡು ಅಪಾರ ಮೆಚ್ಚುಗೆ ಗಳಿಸಿದ್ದ ದರ್ಶೀಲ್ ಸಫಾರಿ ಅವರು ನೆನ್ನೆಯೇ (ಮಾರ್ಚ್ 9 ರಂದು) ತಮ್ಮ 25 ನೇ ವಸಂತಕ್ಕೆ ಕಾಲಿಟ್ಟರು. ನಟ ಈಗ 5.8 ಅಡಿ ಉದ್ದ ಇದ್ದಾರೆ. ‘ತಾರೆ ಜಮೀನ್ ಪರ್’ ಸಿನಿಮಾದ ನಂತರ ದರ್ಶೀಲ್ ‘ಬಮ್ ಬಮ್ ಬೋಲೆ’ ಎಂಬ ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡರು.
2012 ರಲ್ಲಿ ‘ಝಲಕ್ ದಿಖ್ಲಾ ಝಾ’ ಡಾನ್ಸಿಂಗ್ ಶೋನಲ್ಲಿ ಸ್ಪರ್ದಿಯಾಗಿ ಭಾಗವಹಿಸಿ ಬಹಳಷ್ಟು ಖ್ಯಾತಿ ಪಡೆದರು. ಬಳಿಕ ನಟ ದರ್ಶೀಲ್ ಕಿರುತೆರೆಯಲ್ಲಿ ನಟಿಸುವುದು ಆರಂಭಿಸಿದರು. ಇತ್ತೀಚೆಗೆ, 2020ರಲ್ಲಿ ದರ್ಶೀಲ್ ಸಫಾರಿ ಮ್ಯೂಸಿಕ್ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಮನಸ್ಸು ಗೆದ್ದರು. ಸದ್ಯ, ದೊಡ್ಡವರಾಗಿರುವ ದರ್ಶೀಲ್ ಅವರ ಹೊಸ ಯಂಗ್ ಲುಕ್​ಗೂ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net