ತಾಪ್ಸಿ ಜತೆಗೆ ಬೋಲ್ಡ್​ ದೃಶ್ಯಗಳಲ್ಲಿ ನಟಿಸೋಕೆ ಹೀರೋಗಳೇ ಹೆದರಿದ್ದರಂತೆ!

Tapsee Pannu - Final
Published on

ಮುಂಬೈ: ಸಿನಿಮಾಗಳಲ್ಲಿ ಬೋಲ್ಡ್​ ದೃಶ್ಯಗಳಲ್ಲಿ ನಟಿಸುವುದಕ್ಕೆ ಸಾಮಾನ್ಯವಾಗಿ ನಾಯಕಿಯರು ಹಿಂದೇಟು ಹಾಕೋದು, ಮುಜುಗರ ಪಡುವುದು ಇವೆಲ್ಲ ಸರ್ವೇಸಾಮಾನ್ಯ. ಆದರೆ, ನಾಯಕಿ ಧೈರ್ಯ ತುಂಬಿದರೂ, ನಾಯಕರು ಹಿಂದೇಟು ಹಾಕುವುದು ಬಹಳ ಅಪರೂಪವಿರಬಹುದೇನೋ? ಅಂಥದ್ದೊಂದು ಅಪರೂಪದ ವಿಷಯ 'ಹಸೀನ್​ ದಿಲ್​ರುಬಾ' ಚಿತ್ರದಲ್ಲಿ ನಡೆದಿದೆಯಂತೆ.

'ಹಸೀನ್​ ದಿಲ್​ರುಬಾ' ಚಿತ್ರವು ನೆಟ್​ಫ್ಲಿಕ್ಸ್​ನಲ್ಲಿ ಜುಲೈ 02ರಂದು ಸ್ಟ್ರೀಮ್​ ಆಗಲಿದೆ. ಈ ಚಿತ್ರದಲ್ಲಿ ತಾಪ್ಸಿ ಪನ್ನು ಜತೆಗೆ ವಿಕ್ರಾಂತ್​ ಮಸ್ಸೆ ಮತ್ತು ಹರ್ಷವರ್ಧನ್​ ರಾಣೆ ಸಹ ನಟಿಸಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಬೋಲ್ಡ್​ ದೃಶ್ಯಗಳಿದ್ದು, ಆ ದೃಶ್ಯಗಳಲ್ಲಿ ನಟಿಸುವುದಕ್ಕೆ ಇಬ್ಬರು ಹೀರೋಗಳ ಸಹ ಬಹಳ ಹಿಂದೇಟು ಹಾಕಿದ್ದರು ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಚಿತ್ರದಲ್ಲಿ ಒಂದಿಷ್ಟು ಬೋಲ್ಡ್​ ದೃಶ್ಯಗಳಿವೆ. ವಿಕ್ರಾಂತ್​ ಮತ್ತು ಹರ್ಷವರ್ಧನ್​ ಇಬ್ಬರ ಜತೆಗೂ ಇಂತಹ ದೃಶ್ಯಗಳಿದ್ದು, ಇಬ್ಬರೂ ನನ್ನ ಹತ್ತಿರ ಬರುವುದಕ್ಕೂ ಹೆದರುತ್ತಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ಬಹಳ ಮುಜುಗರಕೊಳಗಾಗಿದ್ದ ಇಬ್ಬರೂ, ಟೇಕ್​ ಮೇಲೆ ಟೇಕ್​ ತೆಗೆದುಕೊಂಡಿದ್ದಾರೆ. ಕೊನೆಗೆ ನಿರ್ದೇಶಕರು ಇಬ್ಬರಿಗೂ ಒಂದಿಷ್ಟು ಅರ್ಥ ಮಾಡಿಸಿದ ಮೇಲೆ, ದೃಶ್ಯಗಳ ಚಿತ್ರೀಕರಣ ಸರಾಗವಾಗಿ ಆಯಿತು' ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net