ತಮಿಳಿನ ಖ್ಯಾತ ನಟನ ವಿರುದ್ಧ ಗಂಭೀರ ಆರೋಪ! ಯುವರತ್ನ ಹೀರೋಯಿನ್ ಪತಿಯ ಮೌನಕ್ಕೆ ಅರ್ಥವೇನು?

arya sayyeshha
Published on

ಚೆನ್ನೈ: ತಮಿಳಿನ ಖ್ಯಾತ ನಟ ಆರ್ಯ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದೆ. ಆತ ಮದುವೆಯಾಗುವುದಾಗಿ ನಂಬಿಸಿ ವಿದೇಶಿ ಮಹಿಳೆಯಿಂದ ಸುಮಾರು 70 ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ದೂರು ನೀಡಲಾಗಿದೆ.

ಜರ್ಮನ್ ಮೂಲದ ವಿದ್ಜಾ ಹೆಸರಿನ ಮಹಿಳೆ ಆರ್ಯ ವಿರುದ್ಧ ಇಂತದ್ದೊಂದು ದೂರನ್ನು ದಾಖಲಿಸಿದ್ದಾರೆ. ಆರ್ಯ ನನ್ನನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿದ. ಅದೇ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ನನ್ನಿಂದ 70 ಲಕ್ಷ ರೂಪಾಯಿ ಪಡೆದು ನಂತರ ವಂಚಿಸಿದ ಎಂದು ಮಹಿಳೆ ದೂರು ನೀಡಿದ್ದಾರೆ. ವಕೀಲರ ಸಹಾಯದಿಂದ ದೂರು ನೀಡಲಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಯುತ್ತಿರುವುದಾಗಿ ಹೇಳಲಾಗಿದೆ. ಆರ್ಯ ಜತೆಗಿನ ವಾಟ್ಸ್​ಆ್ಯಪ್ ಚಾಟ್ ಸ್ಕ್ರೀನ್​ಶಾಟ್​ ಅನ್ನೂ ಮಹಿಳೆ ಪೊಲೀಸರಿಗೆ ನೀಡಿದ್ದಾಳೆ ಎನ್ನಲಾಗಿದೆ.

ಆದರೆ ಈ ವಿಚಾರವಾಗಿ ಆರ್ಯ ಇನ್ನೂ ಯಾವುದೇ ಹೇಳಿಕೆ ಕೊಟ್ಟಿಲ್ಲ. ಈ ವಿಚಾರ ಸಾಕಷ್ಟು ಚರ್ಚೆಯಾಗಿದ್ದರೂ ಒಂದೂ ಮಾತನಾಡಿಲ್ಲ. ಪ್ರಕರಣಕ್ಕೆ ಸಂಬಂಧ ಪಟ್ಟ ಕೆಲ ಸುದ್ದಿಗಳಿಗೆ ಲೈಕ್ ಅನ್ನೂ ಒತ್ತಿದ್ದಾರೆ ಎನ್ನಲಾಗಿದೆ. ಈ ರೀತಿಯ ಮೌನ ಅಪರಾಧವನ್ನು ಸಾಬೀತು ಪಡಿಸುತ್ತದೆ ಎಂದು ಕೆಲವರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.

ಆರ್ಯ ಕೆಲ ವರ್ಷಗಳ ಹಿಂದೆ ನಟಿ ಸಾಯೇಷಾ ಸೈಗಲ್​ನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿ ಇತ್ತೀಚೆಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಾಯೇಷಾ ಕನ್ನಡದ ಯುವರತ್ನ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಜತೆಯಾಗಿ ನಟಿಸಿ ಕನ್ನಡಿಗರ ಮನಸ್ಸು ಗೆದ್ದಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net