ಅಡಲ್ಟ್​ ಹಾರರ್​ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ: ಹಸಿ-ಬಿಸಿ ದೃಶ್ಯಗಳಿಗೆ ಓಕೆ ಎಂದ ನಟಿ ತಮನ್ನಾ! Tamannaah Bhatia

Tamannaah Bhatia
Published on

Tamannaah Bhatia : ತಮನ್ನಾ ಭಾಟಿಯಾ ಕಳೆದ ಎರಡು ದಶಕಗಳಿಂದ ಸ್ಟಾರ್​ ನಾಯಕಿಯಾಗಿ ಸಿನಿಮಾ ರಂಗದಲ್ಲಿ ಮಿಂಚು ಹರಿಸುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಮತ್ತು ಇತರ ಭಾಷೆಗಳಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದು, ಬಹುಭಾಷಾ ನಾಯಕಿ ಎನಿಸಿಕೊಂಡಿದ್ದಾರೆ. ಆದರೆ, ಕನ್ನಡದಲ್ಲಿ ಒಂದೇ ಒಂದು ಚಿತ್ರದಲ್ಲಿ ನಟನೆ ಮಾಡದಿದ್ದರೂ ನಿಖಿಲ್​ ಕುಮಾರಸ್ವಾಮಿ ನಟನೆಯ ಮೊದಲ ಸಿನಿಮಾ ಜಾಗ್ವಾರ್​ ಮತ್ತು ಯಶ್​ ನಟನೆಯ ಕೆಜಿಎಫ್​ 1 ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ಸಿನಿಮಾಗಳಲ್ಲಿ ಪ್ರಮುಖ ನಾಯಕಿಯಾಗಿ ನಟಿಸುವುದರ ನಡುವೆ ವಿಶೇಷ ಹಾಡುಗಳು ಹಾಗೂ ಐಟಂ ಸಾಂಗ್​ಗಳಲ್ಲೂ ಸೊಂಟ ಬಳುಕಿಸುತ್ತಿದ್ದಾರೆ. ಇದು ಅವರ ವೃತ್ತಿಜೀವನಕ್ಕೆ ಪ್ಲಸ್ ಕೂಡ ಆಗಿದ್ದು, ಯಾವುದೇ ನಷ್ಟವನ್ನು ತಂದಿಲ್ಲ. ಮತ್ತೊಂದೆಡೆ, ಅವರಿಗೆ ಇನ್ನೂ ನಾಯಕಿಯಾಗಿ ಅವಕಾಶಗಳು ಸಿಗುತ್ತಿರುವುದು ಗಮನಾರ್ಹ.

ಅಂದಹಾಗೆ ತಮನ್ನಾ ಅವರನ್ನು ಬಹಳ ಸಮಯದಿಂದ ಎಲ್ಲರೂ ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಿದ್ದಾರೆ. ಅದಕ್ಕೆ ಸೂಕ್ತವಾದ ಗ್ಲಾಮರ್ ಕೂಡ ಅವರಲ್ಲಿದೆ. ನೋಡಲು ಹಾಲಿನಂತೆ ಬೆಳ್ಳಗ್ಗೆ ಇರುವ ತಮನ್ನಾರನ್ನು ಮಿಲ್ಕಿ ಬ್ಯೂಟಿ ಎಂದರೇ ತಪ್ಪಾಗಲಾರದು. ಗ್ಲಾಮರ್​ನಲ್ಲೂ ಒಂದು ಕೈ ಮೇಲಿದ್ದಾರೆ. ಲಿಪ್ ಕಿಸ್ಸಿಂಗ್ ಮತ್ತು ವಯಸ್ಕರ ದೃಶ್ಯಗಳಿಂದ ದೂರವಿದ್ದ ತಮನ್ನಾ, ತಮ್ಮ ಒಪ್ಪಂದವನ್ನು ತಾವೇ ಮುರಿದು, ಕೆಲವು ಸಮಯದಿಂದ ಹಾಟ್ ದೃಶ್ಯಗಳ ಮೂಲಕ ಮನರಂಜನೆ ನೀಡುತ್ತಿದ್ದಾರೆ. ಇದರೊಂದಿಗೆ, ಬಾಲಿವುಡ್‌ನಲ್ಲಿ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಇತ್ತೀಚಿನ ಬಾಲಿವುಡ್ ಮಾಹಿತಿಯ ಪ್ರಕಾರ, ತಮನ್ನಾ ವಯಸ್ಕ ಹಾರರ್ ಚಿತ್ರದ ಮುಂದುವರಿದ ಭಾಗದಲ್ಲಿ ನಟಿಸಲಿದ್ದಾರೆ.

ಹೌದು, ಬಾಲಿವುಡ್​ನ ವಯಸ್ಕರ ಅಥವಾ ಅಡಲ್ಟ್​ ಹಾರರ್ ಸಿನಿಮಾಗಳಲ್ಲಿ ರಾಗಿಣಿ ಎಂಎಂಎಸ್ ಮತ್ತು ರಾಗಿಣಿ ಎಂಎಂಎಸ್ 2 ವಿಶೇಷ ಸ್ಥಾನವನ್ನು ಪಡೆದಿವೆ. ಈ ಎರಡೂ ಸಿನಿಮಾಗಳು ಉತ್ತಮ ಯಶಸ್ಸನ್ನು ಗಳಿಸಿವೆ. ಹಾರರ್ ಜೊತೆಗೆ, ಈ ಸಿನಿಮಾಗಳಲ್ಲಿ ಸಾಕಷ್ಟು ವಯಸ್ಕರ ದೃಶ್ಯಗಳಿವೆ. ಮೊದಲ ಭಾಗದಲ್ಲಿ ಕೈನಾಜ್ ಮೋತಿವಾಲಾ ಮುಖ್ಯ ಪಾತ್ರದಲ್ಲಿ ನಟಿಸಿದರೆ, ಎರಡನೇ ಭಾಗದಲ್ಲಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಆ ಪಾತ್ರವನ್ನು ನಿರ್ವಹಿಸಿದರು. ಈ ಸಿನಿಮಾದೊಂದಿಗೆ ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಸ್ಟಾರ್​ ನಾಯಕಿ ಎನಿಸಿಕೊಂಡರು.

ಇದೀಗ ರಾಗಿಣಿ ಎಂಎಂಎಸ್ 3 ಚಿತ್ರದ ಬಗ್ಗೆ ಬಾಲಿವುಡ್​ನಲ್ಲಿ ಚರ್ಚೆಯಾಗುತ್ತಿದೆ. ಮೂರನೇ ಭಾಗದಲ್ಲಿ ನಟಿ ತಮನ್ನಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಂದರೆ, ಈ ಚಿತ್ರದಲ್ಲಿ ಅನೇಕ ಅಡಲ್ಟ್​ ದೃಶ್ಯಗಳನ್ನು ಮಾಡಲು ತಮನ್ನಾ ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ, ತಮನ್ನಾ ಲಸ್ಟ್ ಸ್ಟೋರೀಸ್ ಮತ್ತು ಜೀ ಕರ್ದಾ ವೆಬ್​ ಸರಣಿಯಲ್ಲಿ ನಟಿಸಿದರು. ಈ ಎರಡು ಸರಣಿಯಲ್ಲಿ ಮಾದಕ ದೃಶ್ಯಗಳಲ್ಲಿ ತಮನ್ನಾ ಮೈ ಚಳಿ ಬಿಟ್ಟು ನಟಿಸಿದರು. ಅರೆಬೆತ್ತಲೆ ದೃಶ್ಯಗಳಲ್ಲಿ ಕಾಣಿಸಿಕೊಂಡರು. ತಮನ್ನಾರ ಈ ಅವತಾರವನ್ನು ಕಂಡು ಆಗ ಎಲ್ಲರೂ ಆಶ್ಚರ್ಯಚಕಿತರಾದರು. ಈಗ, ವಯಸ್ಕ ಹಾರರ್ ಚಿತ್ರವಾದ ಎಂಎಂಎಸ್‌ನ ಮುಂದುವರಿದ ಭಾಗದಲ್ಲಿ ತಮನ್ನಾ ಅವರು ಮತ್ತೊಂದು ಹಂತದಲ್ಲಿ ಮಾದಕತೆ ತೋರಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net