ನಾನು ಅವನಪ್ಪ ಅಂತ ಗೊತ್ತಾದ್ಮೇಲೂ ಯಾಕೆ ಪ್ರತಿಕ್ರಿಯಿಸಲಿಲ್ಲ? ರಿಯಾಗೆ ಪ್ರಶ್ನೆ

Sushant - Final
Published on

ಬಾಲಿವುಡ್​​ನ ಜನಪ್ರಿಯ ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ಇನ್ನೊಂದು ರೂಪ ಪಡೆದುಕೊಂಡಿದೆ. ಸುಶಾಂತ್​ ಚಿಕಿತ್ಸೆ ಬಗ್ಗೆ ಅವರ ತಂದೆ ಕೆ.ಕೆ. ಸಿಂಗ್​ಗೆ ಗೊತ್ತಿದ್ದು, ಅವರು ಕಳೆದ ನವೆಂಬರ್​ನಲ್ಲೇ ಈ ವಿಷಯವಾಗಿ ರಿಯಾಗೆ ವಾಟ್ಸಪ್​ ಮಾಡಿದ್ದಾರೆ ಎಂಬ ವಿಷಯ ಇದೀಗ ತಿಳಿದುಬಂದಿದೆ.

ಇಡಿ ವಿಭಾಗದವರು ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದವರನ್ನು ಕೆಲವು ದಿನಗಳಿಂದ ಸಾಕಷ್ಟು ವಿಚಾರಣೆ ಮಾಡಿದ್ದು, ವಿಚಾರಣೆ ವೇಳೆ ಈ ವಿಷಯ ಪತ್ತೆಯಾಗಿದೆ.

ಅದರ ಪ್ರಕಾರ, ಸುಶಾಂತ್​ ಅವರ ತಂದೆ ಕಳೆದ ನವೆಂಬರ್​ನಲ್ಲೇ ರಿಯಾಗೆ ಒಂದು ವಾಟ್ಸಪ್​ ಸಂದೇಶ ಕಳಿಸಿದ್ದಾರೆ. 'ನಾನು ಸುಶಾಂತ್​ ತಂದೆ ಎಂದು ಗೊತ್ತಿದ್ದರೂ, ನೀನ್ಯಾಕೆ ನನ್ನ ಜತೆಗೆ ಮಾತಾಡುತ್ತಿಲ್ಲ. ನೀನು ನನ್ನನ್ನು ಅವಾಯ್ಡ್​ ಮಾಡುತ್ತಿರುವುದಕ್ಕೆ ಕಾರಣವೇನು. ನೀನು ಸ್ನೇಹಿತೆಯಾಗಿ ಸುಶಾಂತ್​ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದೀಯ. ತಂದೆಯಾಗಿ ನನಗೂ ಒಂದಿಷ್ಟು ಜವಾಬ್ದಾರಿಗಳಿವೆ. ಹಾಗಾಗಿ ನನಗೆ ಕಾಲ್​ ಮಾಡಿ, ಸುಶಾಂತ್​ ಏನು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ವಿಷಯವನ್ನು ಹೇಳು' ಎಂದು ಅವರು ಮೆಸೇಜ್​ ಮಾಡಿದ್ದಾರೆ.

ಇದಲ್ಲದೆ ಅವರು ಶ್ರುತಿ ಮೋದಿಗೆ ಸಹ ವಾಟ್ಸಪ್​ನಲ್ಲೇ ಸಂದೇಶವೊಂದನ್ನು ಕಳಿಸಿದ್ದಾರೆ. 'ನೀನು ಸುಶಾಂತ್​ನ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತೀಯ ಎಂಬ ವಿಷಯ ನನಗೆ ಗೊತ್ತಿದೆ.ಅದೇ ಕಾರಣಕ್ಕೆ ನಾನು ನಿನ್ನ ಜತೆಗೆ ಮಾತನಾಡುವುದಕ್ಕೆ ಬಯಸುತ್ತಿದ್ದೇನೆ. ಅವನ ಕಂಡೀಷನ್​ ಹೇಗಿದೆ ಎಂಬುದು ನನಗೆ ಗೊತ್ತಿಲ್ಲ. ನಿನ್ನೆ ಅವನ ಜತೆಗೆ ಫೋನ್​ನಲ್ಲಿ ಮಾತನಾಡಿದೆ. ಆಗ ಅವನು ಸ್ವಲ್ಪ ಡಿಸ್ಟರ್ಬ್ಡ್​ ಆಗಿರುವುದಾಗಿ ಹೇಳಿದ. ಒಮ್ಮ ತಂದೆಯಾಗಿ, ನನ್ನ ಮಗನ ಬಗ್ಗೆ ನಾನು ಎಷ್ಟು ಯೋಚನೆ ಮಾಡುತ್ತಿರಬಹುದು ಎಂದು ನಿನಗೆ ಅರ್ಥವಾಗಿರಬೇಕು. ಅದೇ ಕಾರಣಕ್ಕೆ ನಾನು ನಿನ್ನ ಜತೆಗೆ ಮಾತನಾಡುವುದಕ್ಕೆ ಮುಂದಾದೆ. ಆದರೆ, ನೀನು ನನ್ನ ಜತೆ ಮಾತನಾಡುತ್ತಿಲ್ಲವಾದ್ದರಿಂದ, ನಾನೇ ಮುಂಬೈಗೆ ಬಂದು ಏನಾಗುತ್ತಿದೆಯೋ ನೋಡಬೇಕೆಂದಿದ್ದೇನೆ. ಈಗಲೇ ಫ್ಲೈಟ್​ ಟಿಕೆಟ್​ ಬುಕ್​ ಮಾಡಿಸು' ಎಂದು ಸಂದೇಶ ಕಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net