ಸುಶಾಂತ್​ ಸಿಂಗ್​ ಅನಾರೋಗ್ಯದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ನಿರ್ದೇಶಕ ರೂಮಿ ಜೆಫ್ರಿ

Sushant-Singh
Published on

ಸುಶಾಂತ್​ ಸಿಂಗ್​ ಆತ್ಮಹತ್ಯೆ ಬಗ್ಗೆ ಬಾಲಿವುಡ್​ ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ 30ಕ್ಕೂ ಅಧಿಕ ಮಂದಿಯನ್ನು ಮುಂಬೈ ಪೊಲೀಸ್​ ಮಾಹಿತಿ ಕಲೆಹಾಕುವಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ಜತಗೆ ಮಾನಸಿಕ ಖಿನ್ನತೆಯಿಂದ ಸುಶಾಂತ್​ ಆತ್ಮಹತ್ಯೆಗೆ ಶರಣಾಗಿದ್ದರು ಎಂಬ ಸುದ್ದಿ ಹರಿದಾಡಿದ್ದೇ ತಡ, ಹಲವು ಮನೋವೈದ್ಯರನ್ನೂ ವಿಚಾರಣೆ ಮಾಡಲಾಗಿತ್ತು. ಇತ್ತೀಚೆಗಷ್ಟೇ ಆ ಮನೋವೈದ್ಯರು ಸುಶಾಂತ್​ಗಿದ್ದ ಬೈಪೋಲಾರ್ ಕಾಯಿಲೆ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ್ದರು. ಇದೀಗ ಸುಶಾಂತ್​ ಬಗ್ಗೆ ನಿರ್ದೇಶಕ ರೂಮಿ ಜೆಫ್ರಿ ಒಂದಷ್ಟು ಮಾಹಿತಿ ನೀಡಿದ್ದಾರೆ.

ನಿರ್ದೇಶಕ ರೂಮಿ ಜೆಫ್ರಿ ಕಲೆದ ಹಲವು ವರ್ಷಗಳಿಂದ ಸುಶಾಂತ್​ ಆಪ್ತರಲ್ಲಿ ಒಬ್ಬರು. ಅವರೊಂದಿಗೆ ಸಾಕಷ್ಟು ಒಡನಾಟವೂ ಅವರಿಗಿತ್ತು. ಇದೀಗ ಅದೇ ರೂಮಿ ಸುಶಾಂತ್​ ಬಗ್ಗೆ ಈವರೆಗೂ ಎಲ್ಲಿಯೂ ಬಹಿರಂಗವಾಗದ ಮಾಹಿತಿಯನ್ನು ಶೇರ್​ ಮಾಡಿಕೊಂಡಿದ್ದಾರೆ.

‘2019ರ ನವೆಂಬರ್​ನಲ್ಲಿಯೇ ಸುಶಾಂತ್​ ಖನ್ನತೆಗೆ ಒಳಗಾಗಿದ್ದರು. ನಟಿ ರಿಯಾ ಸುಶಾಂತ್ ಖಿನ್ನತೆಯಲ್ಲಿದ್ದಾನೆ ಎಂದು ಮಾಹಿತಿ ನೀಡಿದ್ದರು. ಅದರಂತೆ ನಾನು ಸುಶಾಂತ್​ನನ್ನು ಭೇಟಿಯಾಗಿದ್ದೆ. ಒಟ್ಟಿಗೆ ಕುಳಿತು ಮಾತನಾಡಿದ್ದೆ. ಅರೇ ಸುಶಾಂತ್​ ನೀನು ನನಕ್ಕಿಂತ ಚಿಕ್ಕವನು. ಅದರಲ್ಲೂ ನೀನು ಒಬ್ಬ ಸ್ಟಾರ್ ನಟ. ಈ ಹೊತ್ತಲ್ಲಿ ನಿನಗ್ಯಾಕೆ ಖಿನ್ನತೆ ಎಂದಿದ್ದೆ. ಅದಾದ ಬಳಿಕ ಖಿನ್ನತೆ ನಿವಾರಣೆಗೆ ಹಲವು ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ರೂಮಿ ಮಾಹಿತಿ ನೀಡಿದ್ದಾರೆ.

ಇನ್ನು ಈ ಮೊದಲು ಮನೋವೈದ್ಯರೂ ಸುಶಾಂತ್​ ಆರೊಗ್ಯದ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ್ದರು. ಬೈಪೋಲಾರ್ ಕಾಯಿಲೆ ಇರುವ ಬಗ್ಗೆ ತಿಳಿಸಿದ್ದರು. ಈ ಕಾಯಿಲೆಗೆ ತುತ್ತಾದರೆ, ಖಿನ್ನತೆಯ ಪ್ರಮಾಣ ಮತ್ತು ಆರೋಗ್ಯದಲ್ಲಿ ತೀವ್ರ ಸ್ವರೂಪದ ಏರಿಳಿತ ಕಂಡುಬರುತ್ತದೆ. ಇದಕ್ಕೆ ಮ್ಯಾನಿಕ್​ ಡಿಪ್ರೆಷನ್​ ಎಂದೂ ಕರೆಯುತ್ತಾರೆ. ಈ ಕಾಯಿಲೆ ಬಗ್ಗೆ ಸುಶಾಂತ್​ಗೆ ಗೊತ್ತಿದ್ದರೂ, ಕೇವಲ ಎರಡರಿಂದ ಮೂರು ಸಲ ಮಾತ್ರ ಚಿಕಿತ್ಸೆಗೆ ಬಂದಿದ್ದರು ಎಂದು ವೈದ್ಯರು ಸುಶಾಂತ್​ ಹೆಲ್ತ್ ಕಂಡಿಷನ್​ ಬಗ್ಗೆ ಮಾಹಿತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net