ನನಗೆ ಬೇಕಾಗಿರುವುದು ಸಾವು; ಮತ್ತೆ ಅಳಲು ತೋಡಿಕೊಂಡ ನಟಿ ಜಯಶ್ರೀ

Ullasa-2
Published on

ಬೆಂಗಳೂರು: ಖಿನ್ನತೆಯಿಂದ ಬಳಲುತ್ತಿರುವ ಸ್ಯಾಂಡಲ್​ವುಡ್ ನಟಿ ಜಯಶ್ರೀ ರಾಮಯ್ಯ ಶನಿವಾರ ಫೇಸ್​ಬುಕ್ ಲೈವ್ ಬಂದು ಮತ್ತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

‘ನಾನು ಯಾರ ಬಳಿಯೂ ಧನಸಹಾಯ ಕೇಳಿಲ್ಲ. ಸುದೀಪ್ ಅವರ ಹತ್ತಿರವೂ ಕೇಳಿಲ್ಲ. ನನಗೆ ಹಣದ ಸಮಸ್ಯೆ ಏನೂ ಇಲ್ಲ. ನನಗೀಗ ಬೇಕಾಗಿರುವುದು ಒಂದೇ ಅದು ನನ್ನ ಸಾವು. ನಾನು ತುಂಬ ಖಿನ್ನತೆಯಲ್ಲಿದ್ದೇನೆ. ನನ್ನ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.

‘ನನಗೆ ತುಂಬ ಮೋಸ ಮಾಡಿದ್ದಾರೆ. ಚಿಕ್ಕ ವಯಸ್ಸಲ್ಲಿ ನನ್ನ ಜೀವನದಲ್ಲಿ ಮರೆಯಲಾರದ ಘಟನೆಗಳು ನಡೆದಿವೆ. ಫೇಸ್​ಬುಕ್​ನಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿರುವುದು ಬೇಸರ ತರಿಸಿದೆ. ನಾನು ನಿರೀಕ್ಷೆ ಮಾಡುತ್ತಿರುವುದೊಂದೆ, ನನಗೆ ದಯಾಮರಣ ನೀಡಿ, ನಾನು ಒಳ್ಳೆಯ ಹುಡುಗಿಯಲ್ಲ’ ಎಂದಿದ್ದಾರೆ. ಶುಕ್ರವಾರ ಲೈವ್​ನಲ್ಲಿ ಇದೆ ಮಾತನ್ನು ಜಯಶ್ರೀ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net