

ಭಾನುವಾರ ಆತ್ಮಹತ್ಯೆಯಿಂದ ನಿಧನರಾದ ಬಾಲಿವುಡ್ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಂತ್ಯಕ್ರಿಯೆ ಮುಗಿದಿದೆ.
ಮುಂಬೈನ ವಿಲೆ ಪಾರ್ಲೆ ಚಿತಾಗಾರದಲ್ಲಿ ಸುಶಾಂತ್ ಅವರ ಅಂತ್ಯಕ್ರಿಯೆ ನಡೆದಿದ್ದು, ಈ ಸಂಧರ್ಭದಲ್ಲಿ ಅವರ ಕುಟುಂಬದ ಸದಸ್ಯರ ಜತೆಗೆ ಬಾಲಿವುಡ್ನ ಕೆಲವು ಜನಪ್ರಿಯ ಸೆಲೆಬ್ರಿಟಿಗಳು ಸಹ ಹಾಜರಿದ್ದರು. ನಟಿಯರಾದ ಶ್ರದ್ಧಾ ಕಪೂರ್, ಕೃತಿ ಸಾನನ್, ರಾಜಕುಮಾರ್ ರಾವ್, ನಿರ್ದೇಶಕರಾದ ಅಭಿಷೇಕ್ ಕಪೂರ್, ಮುಕೇಶ್ ಚಾಬ್ರ, ವಿವೇಕ್ ಒಬೆರಾಯ್, ರಣವೀರ್ ಶೌರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದಕ್ಕೂ ಮೊದಲು ಸುಶಾಂತ್ ಅವರ ಪಾರ್ಥೀವ ಶರೀರವನ್ನು ಪೋಸ್ಟ್ ಮಾರ್ಟಂಗಾಗಿ ಕೂಪರ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಆ ನಂತರ ಅವರನ್ನು ವಿಲೆ ಪಾರ್ಲೆ ಚಿತಾಗಾರಕ್ಕೆ ಕರೆದುಕೊಂಡು ಬರಲಾಯಿತು. ಈ ಸಂದರ್ಭದಲ್ಲಿ ಮಳೆ ಇದ್ದರೂ, ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸುಶಾಂತ್ ಅವರ ಅಂತಿಮ ದರ್ಶನವನ್ನು ಪಡೆದರು.