ಇಷ್ಟಪಟ್ಟವಳನ್ನು ವರಿಸಲು ಸುಶಾಂತ್​ಗೆ ಸಿಕ್ಕಿತ್ತು ಹಸಿರು ನಿಶಾನೆ! ಯಾರವಳು?

Untitled
Published on

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇನ್ನು ಕೆಲ ತಿಂಗಳಲ್ಲಿ ಬಾಲಿವುಡ್​ನ ಸುಂದರಾಂಗ ಸುಶಾಂತ್​ ಸಿಂಗ್​ ರಜಪೂತ್​ ಭಾಳ ಬಂಧನಕ್ಕೆ ಅಡಿ ಇಡುತ್ತಿದ್ದರು. ಆದರೆ, ವಿಧಿ ಮಾತ್ರ ಅದ್ಯಾವುದಕ್ಕೆ ಅವಕಾಶ ನೀಡದೆ, ದುರಂತಕ್ಕೆ ನಾಂದಿ ಹಾಡಿತು.

ಹೌದು, ಮದುವೆಯಾಗುವ ಬಗ್ಗೆ ಸ್ವತಃ ತಂದೆ ಕೆಕೆ ಸಿಂಗ್​ ಜತೆಗೆ ಸುಶಾಂತ್​ ಮಾತನಾಡಿದ್ದರಂತೆ. ಅಷ್ಟೇ ಅಲ್ಲ ಅಪ್ಪನ ಕಡೆಯಿಂದಲೂ ಮದುವೆಗೆ ಗ್ರೀನ್​ ಸಿಗ್ನಲ್​ ಸಹ ಸಿಕ್ಕಿತ್ತಂತೆ. ಈ ವಿಚಾರ ಕೆಕೆ ಸಿಂಗ್​ ಅವರ ಆಪ್ತ ವಲಯಕ್ಕೆ ಗೊತ್ತಿತ್ತು. ಇದೀಗ ಈ ಸುದ್ದಿ ಪೊಲೀಸ್​ ಇಲಾಖೆ ಗಮನಕ್ಕೂ ಬಂದಿದೆ. ಆದರೆ, ಆ ಹುಡುಗಿ ಯಾರು ಎಂಬದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಕೆಲ ಮೂಲಗಳ ಪ್ರಕಾರ ಸುಶಾಂತ್​ ಮದುವೆಯಾಗಬೇಕಿದ್ದ ಹುಡುಗಿ  ಬೆಂಗಾಲಿ ಮೂಲದವರು ಎನ್ನಲಾಗುತ್ತಿದೆ.

ಅಂದಹಾಗೆ, ಸುಶಾಂತ್​ ತಾನಿಷ್ಟಪಟ್ಟ ಹುಡುಗಿಯನ್ನು ಮದುವೆಯಾಗುವುದಾಗಿ ಮನೆಯವರೊಂದಿಗೆ ಚರ್ಚೆ ಮಾಡಿ ಅವರಿಂದ ಒಪ್ಪಿಗೆ ಪಡೆದುಕೊಂಡಿದ್ದರು. ಖುಷಿಯಲ್ಲಿಯೇ ಮದುವೆ ತಯಾರಿ ಮಾಡಿಕೊಳ್ಳಲು ಪ್ಲ್ಯಾನ್​ ಮಾಡಿತ್ತು ಕುಟುಂಬ. ನವೆಂಬರ್​ಗೆ ಮದುವೆ ಫಿಕ್ಸ್ ಎಂದೂ ದಿನಾಂಕ ನಿಗದಿ ಮಾಡಿಕೊಂಡಿತ್ತು. ಆದರೆ, ಅಷ್ಟರಲ್ಲಾಗಲೇ ವಿಧಿಯ ಆಟವೇ ಬೇರೆಯದಾಗಿತ್ತು. ಖಿನ್ನತೆಗೆ ಜೋತು ಬಿದ್ದು, ಕೋಣೆಯಲ್ಲಿನ ಬೆಡ್​ಶೀಟ್​ಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net