ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನದ್ದು ಕೊಲೆ; ತನಿಖೆಯಾಗಬೇಕು ಎಂದ ಕುಟುಂಬ

sushant singh rajput1
Published on

ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಾಜಪೂತ್​ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದು ಕೊಲೆ. ಈ ಕುರಿತು ಸಮರ್ಪಕ ತನಿಖೆಯಾಗಬೇಕು ಎಂದು ಮೃತ ಸುಶಾಂತ್​ ಅವರ ಸಹೋದರ ಮಾವ ಆರ್​.ಸಿ. ಸಿಂಗ್​ ಹೇಳಿದ್ದಾರೆ.

ಸುಶಾಂತ್​ ಸಿಂಗ್​ ರಾಜಪೂತ್​ ಅವರ ಅಂತ್ಯಕ್ರಿಯೆ ನೆರವೇರಿಸಲು ಬಿಹಾರದ ಪಟನಾದಿಂದ ಹೊರಡುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅವನು ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವದವನಲ್ಲ. ಆತನನ್ನು ಯಾರೋ ಕೊಲೆ ಮಾಡಿ, ನೇಣಿನ ಕುಣಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.

ಉಸಿರುಗಟ್ಟಿ ಸಾವು: ಮುಂಬೈನಲ್ಲಿ ಸುಶಾಂತ್​ ಅವರ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಬಂದಿದ್ದು, ಉಸಿರುಗಟ್ಟಿದ್ದರಿಂದಲೇ ಸುಶಾಂತ್​ ಅವರ ಮರಣ ಸಂಭವಿಸಿದೆ. ಬಹುಶಃ ನೇಣಿನ ಕುಣಿಕೆ ಬಲಗೊಂಡಿದ್ದರಿಂದ ಅವರು ಉಸಿರುಗಟ್ಟಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net