More

    ‘ಬಾಲಿವುಡ್​​ನಲ್ಲಿನ ಕ್ರೂರತನವೇ ಸುಶಾಂತ್​ ಸಾವಿಗೆ ಕಾರಣ’; ನಟನ ಸಹೋದ್ಯೋಗಿಗಳ ನೇರ ಮಾತು ಇದು…

    ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಬಾಲಿವುಡ್‌ನಲ್ಲಿರುವವರು ನಟ-ನಟಿಯರನ್ನು ಎಷ್ಟು ನಿರ್ದಯವಾಗಿ ನಡೆಸಿಕೊಳ್ಳುತ್ತಾರೆ ಎಂಬ ಸತ್ಯವನ್ನು ಆತನ ಸಹೋದ್ಯೋಗಿಗಳೇ ತೆರೆದಿಟ್ಟಿದ್ದಾರೆ.

    ಹಿರಿಯ ನಟ ಧರ್ಮೇಂದ್ರ, ನಟಿ ಮೀರಾ ಚೋಪ್ರಾ, ನಟ- ನಿರ್ಮಾಪಕ ನಿಖಿಲ್ ದ್ವಿವೇದಿ, ನಿರ್ದೇಶಕರಾದ ಅನುಭವ್ ಸಿನ್ಹಾ, ಹನ್ಸಲ್ ಮೆಹ್ತಾ, ಸೆಲೆಬ್ರಿಟಿ ಹೇರ್‌ಸ್ಟೈಲಿಸ್ಟ್ ಸಪ್ನಾ ಭಾವ್ನಾನಿ ಮುಂತಾದವರು ಬಾಲಿವುಡ್ ಮಂದಿಯ ಕ್ರೂರ ವರ್ತನೆಯೇ ಸುಶಾಂತ್ ಸಾವಿಗೆ ಕಾರಣ ಎಂಬುದನ್ನು ಕಠಿಣ ಶಬ್ದಗಳಲ್ಲಿ ಪರೋಕ್ಷವಾಗಿ ಹೇಳಿದ್ದಾರೆ.

    ಹಿರಿಯ ನಟ ಧರ್ಮೇಂದ್ರ ತಮ್ಮ ಸಂದೇಶದಲ್ಲಿ, ‘‘ಪ್ರಿಯ ಸುಶಾಂತ್, ನಾನು ನಿನ್ನೊಂದಿಗೆ ಕೆಲಸ ಮಾಡಿಲ್ಲ. ಆದರೆ ಇಷ್ಟು ಬೇಗ ನೀನು ಅಗಲಿರುವುದನ್ನು ನೋಡಿ ಆಘಾತವಾಯಿತು. ಈ ‘ಶೋ ಬಿಸಿನೆಸ್’ ಬಹಳ ಕ್ರೂರಿಯಾಗಿದೆ. ಬದುಕಿದ್ದಾಗ ನೀನೆಷ್ಟು ನೋವು ಅನುಭವಿಸಿರಬಹುದು ಎಂಬುದನ್ನು ನಾನು ಕಲ್ಪನೆ ಮಾಡಿಕೊಳ್ಳಬಲ್ಲೆ…’’ ಎಂದು ಕಣ್ಣೀರುಗರೆದಿದ್ದಾರೆ. ಇದನ್ನೂ ಓದಿ: ಕೊನೆಗೂ ಈಡೇರಲಿಲ್ಲ ಸುಶಾಂತ್​ ಸಿಂಗ್​ ರಾಜಪೂತ್​ ಅವರ 50 ಬಯಕೆಗಳು!

    ಹೇರ್‌ಸ್ಟೈಲಿಸ್ಟ್ ಮತ್ತು ನಿರ್ದೇಶಕಿ ಸಪ್ನಾ ಭಾವ್ನಾನಿ ಟ್ವಿಟರ್‌ನಲ್ಲಿ ತಮ್ಮ ನೋವು ತೋಡಿಕೊಂಡಿದ್ದು, ‘‘ಸುಶಾಂತ್‌ನ ಮಾನಸಿಕ ಆರೋಗ್ಯ ಸರಿಯಿರಲಿಲ್ಲ ಎಂಬುದು ಬಾಲಿವುಡ್‌ನಲ್ಲಿ ಎಲ್ಲರಿಗೂ ಗೊತ್ತಿತ್ತು. ಕೆಲವು ವರ್ಷಗಳಿಂದ ಆತ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದ ಎಂಬುದೂ ಗೊತ್ತಿತ್ತು. ಯಾರೂ ಅವನ ಪರವಾಗಿ ಧ್ವನಿ ಎತ್ತಲಿಲ್ಲ, ಸಹಾಯಹಸ್ತವನ್ನೂ ಚಾಚಲಿಲ್ಲ. ಆತ ಸತ್ತ ಮೇಲೆ ಸಾಕಷ್ಟು ಜನ ಬಹಿರಂಗವಾಗಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಬದುಕಿದ್ದಾಗ ಯಾರೂ ಕೇರ್ ಮಾಡಲಿಲ್ಲ. ಬಾಲಿವುಡ್‌ನಲ್ಲಿ ಯಾರೇ ಎಷ್ಟೇ ಕ್ಲೋಸ್ ಆಗಿದ್ದರೂ, ಯಾರೂ ನಮ್ಮ ಸ್ನೇಹಿತರಲ್ಲ’’ ಎಂದಿದ್ದಾರೆ.

    ‘‘ಬಾಲಿವುಡ್‌ನಲ್ಲಿ ಅನೇಕ ಯುವ ಪ್ರತಿಭಾವಂತರಿದ್ದಾರೆ. ಅವರಲ್ಲಿ ಬಹುತೇಕರು ‘ಹೊರಗಿನವರು’. ಇಲ್ಲಿಯವರಿಗೆ ನೀವು ಎಲ್ಲಿಯವರೆಗೆ ಬೇಕಾಗಿರುತ್ತೀರೋ ಅಲ್ಲಿಯವರೆಗೆ ನಿಮ್ಮನ್ನು ತಲೆ ಮೇಲಿಟ್ಟುಕೊಂಡು ಮೆರೆಸುತ್ತಾರೆ. ಒಮ್ಮೆ ನೀವು ಸೋತಿರೋ, ಸಡನ್ನಾಗಿ ನೆಲದ ಮೇಲೆ ಎಸೆದು ದೂರ ಹೋಗಿಬಿಡುತ್ತಾರೆ. ಅಷ್ಟೇ ಅಲ್ಲ, ದೂರ ನಿಂತು ನಿಮ್ಮನ್ನು ನೋಡಿ ನಗುತ್ತಾರೆ. ನಿಮ್ಮ ಸೋಲನ್ನೂ ಸಂಭ್ರಮಿಸುತ್ತಾರೆ’’ ಎಂದು ಹನ್ಸಲ್ ಮೆಹ್ತಾ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮಾಜಿ ಪ್ರೇಯಸಿಯ ನಿಶ್ಚಿತಾರ್ಥ ಸುಶಾಂತ್​ ನೋವಿಗೆ ಕಾರಣ? ಇವರ ಸಾವಿನ ಸುದ್ದಿ ಕೇಳಿ ಫೋನ್​ ಕೆಳಗಿಟ್ಟ ಅಂಕಿತಾ

    ‘‘ಆದ್ದರಿಂದ ಯುವ ನಟ-ನಟಿಯರು ತಮ್ಮ ಪ್ರತಿಭೆ, ಶ್ರಮವನ್ನೇ ನೆಚ್ಚಿಕೊಂಡು ಬದುಕಬೇಕು. ಯಾರೋ ಕೈಹಿಡಿಯುತ್ತಾರೆ ಎಂಬ ಆಸೆ- ನಂಬಿಕೆ ಒಳ್ಳೆಯದಲ್ಲ. ನಿಮ್ಮ ಕಲೆ ಮತ್ತು ಅಭಿಮಾನಿಗಳೊಂದಿಗೆ ಮಾತ್ರ ಇಂತಹ ಕನೆಕ್ಷನ್ ಇಟ್ಟುಕೊಳ್ಳಿ. ಜಗತ್ತು ನೀವು ಕಲ್ಪಿಸಿಕೊಳ್ಳುವುದಕ್ಕಿಂತಲೂ ದೊಡ್ಡದಿದೆ. ನೀವು ಗಟ್ಟಿಯಾಗಿ ನಿಂತುಕೊಂಡರೆ ಎಲ್ಲರೂ ನಿಮ್ಮವರೇ. ಇಲ್ಲದಿದ್ದರೆ ಯಾರೂ ನಿಮ್ಮವರಲ್ಲ’’ ಎಂದು ಅವರು ತಿಳಿಹೇಳಿದ್ದಾರೆ.

    ನಿರ್ದೇಶಕ ಅನುಭವ್ ಸಿನ್ಹಾ, ‘‘ಸುಶಾಂತ್ ಸಾವಿನ ನಂತರವಾದರೂ ‘ಬಾಲಿವುಡ್‌ನ ಪ್ರಿವಿಲೆಜ್ ಕ್ಲಬ್’ ಒಮ್ಮೆ ಕುಳಿತು ಯೋಚಿಸಬೇಕು. ಈ ಕ್ಲಬ್‌ನಲ್ಲಿ ಯಾರ‌್ಯಾರಿದ್ದಾರೆ ಅಂತ ನನ್ನನ್ನು ಕೇಳಬೇಡಿ. ಅದು ಎಲ್ಲರಿಗೂ ಅರ್ಥವಾಗುವಂತಹದ್ದು’’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

    ಫಿಲ್ಮ್ ಇಂಡಸ್ಟ್ರಿಯ ಬೂಟಾಟಿಕೆಯನ್ನು ಕಠಿಣ ಪದಗಳಲ್ಲಿ ವಿವರಿಸಿರುವ ನಿರ್ಮಾಪಕ ನಿಖಿಲ್ ದ್ವಿವೇದಿ, ‘‘ಸುಶಾಂತ್ ಜತೆ ಕೆಲಸ ಮಾಡಿದವರು ಕೂಡ ಆತ ಇತ್ತೀಚೆಗೆ ತಮ್ಮ ಸಂಪರ್ಕದಲ್ಲಿರಲಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಆತನ ಕರಿಯರ್ ಚೆನ್ನಾಗಿದ್ದಾಗ ನೀವೇ ಆತನ ಸಂಪರ್ಕದಲ್ಲಿರಲಿಲ್ಲವೇ? ಇಮ್ರಾನ್‌ಖಾನ್, ಅಭಯ್ ಡಿಯೋಲ್‌ನಂಥವರ ಜತೆಗಾದ್ರೂ ಸಂಪರ್ಕದಲ್ಲಿದ್ದಿರಾ? ಇಲ್ಲ! ಅವರೆಲ್ಲ ಚೆನ್ನಾಗಿದ್ದಾಗ ನೀವು ಟಚ್‌ನಲ್ಲಿದ್ದಿರಿ, ಅಲ್ಲವೆ?’’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನದ್ದು ಕೊಲೆ; ತನಿಖೆಯಾಗಬೇಕು ಎಂದ ಕುಟುಂಬ

    ನಟಿ ಮೀರಾ ಚೋಪ್ರಾ ಹೇಳಿಕೆಗಳಲ್ಲೂ ಆಕ್ರೋಶ ಎದ್ದು ಕಾಣುತ್ತಿದೆ. ‘‘ಬಾಲಿವುಡ್ ಒಂದು ಕುಟುಂಬ ಇದ್ದಂತೆ ಎಂದು ಎಲ್ಲರೂ ಹೇಳುತ್ತಾರೆ. ನಿಜ. ಆದರೆ, ಯಾವಾಗ ನಿಮಗೆ ಅವಶ್ಯಕತೆ ಇರುತ್ತೋ ಆಗ ಆ ಕುಟುಂಬ ನಿಮ್ಮ ಜತೆಗಿರುವುದಿಲ್ಲ. ಇಷ್ಟು ದೊಡ್ಡ ‘ಕುಟುಂಬ’ದ ಜತೆಗಿರುವಾಗಲೂ ಎಷ್ಟೋ ನಟ-ನಟಿಯರು ‘ಏಕಾಂಗಿತನ’ ಅನುಭವಿಸುತ್ತಾರೆ. ಸುಶಾಂತ್‌ಗೆ ಖಿನ್ನತೆ ಕಾಡುತ್ತಿದೆ ಎಂಬುದು ಬಹುಕಾಲದಿಂದಲೂ ಎಲ್ಲರಿಗೂ ಗೊತ್ತಿತ್ತು. ಆತನೊಂದಿಗೆ ನಟಿಸಿದವರು, ಆತನ ಚಿತ್ರಗಳು ನಿರ್ದೇಶಕರು- ನಿರ್ಮಾಪಕರು ಏನು ಮಾಡಿದರು? ಯಾಕೆ ಯಾರೂ ಬಂದು ಸಹಾಯ ಮಾಡಲಿಲ್ಲ? ಯಾಕೆಂದರೆ ಇಲ್ಲಿ ಯಾರೂ ಯಾರನ್ನೂ ಕೇರ್ ಮಾಡುವುದಿಲ್ಲ…’’ ಎಂದು ವಿವರಿಸಿದ್ದಾರೆ.

    ಹೀಗಾಗುತ್ತಿರುವುದು ಇದು ಮೊದಲೇನಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts