ಸೂರ್ಯವಂಶಿ: ಮೂರು ದಿನಗಳಲ್ಲಿ 80 ಕೋಟಿ ರೂಪಾಯಿ!

Sooryavamshi
Published on

ರೋಹಿತ್ ಶೆಟ್ಟಿ ನಿರ್ದೇಶನದ, ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ. ಮೂರೇ ದಿನಗಳಲ್ಲಿ ಬರೋಬ್ಬರಿ 80 ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ನಿರ್ವಿುಸಿದೆ. ಬಾಲಿವುಡ್​ನಲ್ಲಿ ಕರೊನಾ ಬಳಿಕ ಹಲವು ಸಿನಿಮಾಗಳು ತೆರೆಕಂಡರೂ, ಗಳಿಕೆ ವಿಚಾರದಲ್ಲಿ ಸೋಲನ್ನೊಪ್ಪಿಕೊಂಡಿದ್ದವು.

ಆದರೆ, ‘ಸೂರ್ಯವಂಶಿ’ ವಿಚಾರದಲ್ಲಿ ಅದು ಸುಳ್ಳಾಗಿದೆ. ವಿಶ್ವದಾದ್ಯಂತ 1300 ಪರದೆಗಳು, ಭಾರತದಲ್ಲಿ ಎರಡು ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ಚಿತ್ರ ಬಿಡುಗಡೆ ಆಗಿದೆ. ಮೊದಲ ದಿನವೇ ನಿವ್ವಳ 26 ಕೋಟಿ ರೂ. ಬಾಕ್ಸ್ ಆಫೀಸ್​ನಲ್ಲಿ ಕಮಾಯಿ ಮಾಡಿದರೆ, ಶನಿವಾರ 24 ಕೋಟಿ ರೂ. ಕಬಳಿಸಿದೆ. ಭಾನುವಾರ 30 ಕೋಟಿ ರೂ. ಗಳಿಸುವ ಮೂಲಕ ಮೂರೇ ದಿನಗಳಲ್ಲಿ 80 ಕೋಟಿ ರೂ. ಬಾಚಿಕೊಂಡಿದೆ.

2019ರಲ್ಲಿ ಅಕ್ಷಯ್ ನಟಿಸಿದ ‘ಕೇಸರಿ’ (78 ಕೋಟಿ), ‘ಹೌಸ್​ಫುಲ್ 4’ (53 ಕೋಟಿ), ‘ಗುಡ್ ನ್ಯೂಸ್’ (66 ಕೋಟಿ) ಮೂರು ದಿನಗಳಲ್ಲಿ ಕಲೆಕ್ಷನ್ ಮಾಡಿದ್ದವು. ಇದೀಗ ಆ ಎಲ್ಲ ದಾಖಲೆಗಳನ್ನು ‘ಸೂರ್ಯವಂಶಿ’ ಮುರಿದಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net