

ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಸೂಪರ್ಸ್ಟಾರ್ ರಜಿನಿಕಾಂತ್. "ಅನ್ನಾತೆ' ರಿಲೀಸ್ ಆದ ಎರಡು ವರ್ಷಗಳ ನಂತರ ಅವರು ನಟಿಸಿರುವ ಚಿತ್ರ "ಜೈಲರ್'. ಟೈಗರ್ ಮುತ್ತುಸ್ವಾಮಿ ಪಾಂಡಿಯನ್ ಎಂಬ ನಿವೃತ್ತ ಜೈಲರ್ ಪಾತ್ರದಲ್ಲಿ ರಜಿನಿ ನಟಿಸಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಿದು. ಈಗಾಗಲೇ ಪೋಸ್ಟರ್ ಮತ್ತು ಶೋಕಾಸ್ ವಿಡಿಯೋ ಮೂಲಕ ಚಿತ್ರದ ಬಗ್ಗೆ ಎಲ್ಲಿಲ್ಲದ ಕುತೂಹಲ ಮೂಡಿಸಿರುವ ಚಿತ್ರ "ಜೈಲರ್'. ಜತೆಗೆ "ಕಾವಾಲಯ್ಯ…' ಹಾಡು ಕೂಡ ಹಿಟ್ ಲಿಸ್ಟ್ ಸೇರಿದ್ದು, ಸಿನಿಮಾ ಮೇಲಿನ ನಿರೀೆ ಹೆಚ್ಚಿಸಿದೆ.
ಇದೀಗ ಈ ಚಿತ್ರಕ್ಕಾಗಿ ರಜಿನಿಕಾಂತ್ ಪಡೆದಿರುವ ಸಂಭಾವನೆ ಎಲ್ಲರ ಹುಬ್ಬೇರುವಂತೆ ಮಾಡಿದೆ. 225 ಕೋಟಿ ರೂ. ಬಜೆಟ್ನಲ್ಲಿ "ಜೈಲರ್' ಮೂಡಿಬಂದಿದ್ದು, ಅದರಲ್ಲಿ ರಜಿನಿಕಾಂತ್ ಬರೋಬ್ಬರಿ 110 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಅರ್ಥಾತ್ ಚಿತ್ರದ ಬಜೆಟ್ನ ಶೇಕಡಾ 48ರಷ್ಟು ಹಣ ರಜಿನಿಕಾಂತ್ ಜೇಬು ಸೇರಿದೆ. ಇನ್ನು ಚಿತ್ರದಲ್ಲಿ ಶಿವರಾಜಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್, ವಿನಾಯಕನ್, ರಮ್ಯಕೃಷ್ಣ, ತಮನ್ನಾ ಭಾಟಿಯಾ ತಾರಾಗಣದಲ್ಲಿದ್ದಾರೆ.
ಆ. 10ರಂದು "ಜೈಲರ್' ವಿಶ್ವಾದ್ಯಂತ ರಿಲೀಸ್ ಆಗಲಿದೆ. ತಮಿಳುನಾಡು ರಾಜ್ಯದ ಥಿಯೇಟರ್ ಮಾಲೀಕರ ಸಂ, ರಾಜ್ಯಾದ್ಯಂತ ಕೇವಲ "ಜೈಲರ್' ಚಿತ್ರವನ್ನು ಪ್ರದರ್ಶಿಸಲು ಥಿಯೇಟರ್ ಮಾಲೀಕರಿಗೆ ಮನವಿ ಮಾಡಿದ್ದು, ಈಗಾಗಲೇ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆ. 11ರಂದು ಬಾಲಿವುಡ್ನಲ್ಲಿ ಸನ್ನಿ ಡಿಯೋಲ್ ಅಭಿನಯದ "ಗದರ್ 2' ಹಾಗೂ ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ನಟಿಸಿರುವ "ಓ ಮೈ ಗಾಡ್ 2' ಎರಡು ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಬಾಲಿವುಡ್ನ ಸ್ಟಾರ್ ಸಿನಿಮಾಗಳಿಗೆ ದಣದ ಸೂಪರ್ಸ್ಟಾರ್ ಬಾಕ್ಸಾಫಿಸಿನಲ್ಲಿ ಮುಖಾಮುಖಿಯಾಗಲಿದ್ದಾರೆ.
-ಏಜೆನ್ಸೀಸ್