ರೆಬೆಲ್​ ರಾಗಿಣಿ : ಪಂಚ ಭಾಷೆಗಳಲ್ಲೂ ಬಿಜಿಯಾದ ಕನ್ನಡದ ಹುಡುಗಿ

1 (4)
Published on

| ಹರ್ಷವರ್ಧನ್​ ಬ್ಯಾಡನೂರು

ನಟಿ ರಾಗಿಣಿ ದ್ವಿವೇದಿ ಸದ್ಯ ಕನ್ನಡ, ಹಿಂದಿ, ತೆಲುಗು, ತಮಿಳು ಜತೆಗೆ ಮಲಯಾಳಂ ಭಾಷೆಗಳಲ್ಲೂ ಬಿಜಿಯಾಗಿದ್ದಾರೆ. ಅವರು ನಟಿಸಿರುವ ಮಲಯಾಳಂ ಮತ್ತು ಕನ್ನಡದಲ್ಲಿ ಮೂಡಿಬಂದಿರುವ "ಶೀಲ' ಇಂದು ರಾಜ್ಯಾದ್ಯಂತ ರಿಲೀಸ್​ ಆಗುತ್ತಿದೆ. ಜತೆಗೆ ನಂದಕಿಶೋರ್​ ನಿರ್ದೇಶಿಸುತ್ತಿರುವ "ವೃಷಭ', ಒಂದು ತೆಲುಗು, ತಲಾ ಎರಡು ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಬಿಜಿಯಿದ್ದಾರೆ. ಸದ್ಯದ ಸಿನಿಮಾ ಪಯಣದ ಬಗ್ಗೆ ರಾಗಿಣಿ ವಿಜಯವಾಣಿ ಜತೆ ಮನಬಿಚ್ಚಿ ಮಾತನಾಡಿದ್ದಾರೆ.

  • "ಶೀಲ' ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ?
    ನಿರ್ದೇಶಕ ಬಾಲು ನಾರಾಯಣ್​ ಒನ್​ಲೈನ್​ ಹೇಳಿದರು. ತಕ್ಷಣ ುಲ್​ ನರೇಷನ್​ ಮಾಡಿ ಎಂದೆ. ಪಾತ್ರ ಅಷ್ಟು ತೀಕ್ಷ$್ಣವಾಗಿತ್ತು. ಗ್ಲಾಮರಸ್​, ಡಿಗ್ಲಾಮರಸ್​, ಕ್ಯಾರಕ್ಟರ್​ ರೋಲ್​, ಆ್ಯಕ್ಷನ್​ ಹೀಗೆ ಹಲವಾರು ಪಾತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಈ ಪಾತ್ರದ ಬಗ್ಗೆ ಕೇಳಿ ಎಕ್ಸೈಟ್​ ಆದೆ. ಒಂದೇ ಚಿತ್ರದಲ್ಲಿ ಹಲವು ರೀತಿಗಳಲ್ಲಿ ಪರ್ಫಾರ್ಮ್​ ಮಾಡಲು ಸಿಗುವುದು ಕಲಾವಿದರಿಗೆ ಜಾಕ್​ಪಾಟ್​ ಸಿಕ್ಕಂತೆ. "ಶೀಲ' ಪಾತ್ರಕ್ಕೆ ಹಲವು ಶೇಡ್​ಗಳಿವೆ.
  • ನಿಮ್ಮ ಪಾತ್ರದ ಬಗ್ಗೆ…
    ತುಂಬ ಚಾಲೆಂಜಿಂಗ್​ ಆಗಿತ್ತು. ದ್ವೀತಿಯಾರ್ಧದಲ್ಲಿ ಹೆಚ್ಚು ಬೆಳಕು ಹಾಗೂ ಡೈಲಾಗ್ಸ್​ ಎರಡೂ ಇರುವುದಿಲ್ಲ. ಟಾರ್ಚ್​ ಲೈಟ್​, ಲೈಟರ್​, ಬೆಂಕಿ ಕಡ್ಡಿ ಬೆಳಕು ಅಷ್ಟೇ. ಒಬ್ಬಳೇ ಆ ಸನ್ನಿವೇಶಗಳನ್ನು ಕ್ಯಾರಿ ಮಾಡಬೇಕು. ನಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಡಬೇಕು. ನಾನು ನನ್ನ ಪಾತ್ರವನ್ನು ಸರಿಯಾಗಿ ನಿಭಾಯಿಸಿಲ್ಲ ಅಂದರೆ, ಬಂದು ನಮ್ಮ ಸಿನಿಮಾ ನೋಡಿ ಎಂದು ಹೇಳಲೂ ಆಗುವುದಿಲ್ಲ. ಒಂದು ಪ್ರಯೋಗಾತ್ಮಕ ಚಿತ್ರ ಎನ್ನಬಹುದು. "ಕಾಂತಾರ', "ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಹೀಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಬಗೆಯ ಚಿತ್ರಗಳು, ವಿಭಿನ್ನ ರೀತಿಯ ಕಂಟೆಂಟ್​ಗಳು ಬರುತ್ತಿವೆ.
  • ಶೂಟಿಂಗ್​ ವೇಳೆ ನೀವು ಎದುರಿಸಿದ ಸವಾಲು?
    ದ್ವೀತಿಯಾರ್ಧದಲ್ಲಿ ತುಂಬ ಚಳಿಯಲ್ಲಿ, ಚಪ್ಪಲಿ, ಶೂ ಇಲ್ಲದೇ ಬರಿಗಾಲಿನಲ್ಲಿ ಓಡಾಡಬೇಕಿತ್ತು. ಐದಾರು ಅದ್ಭುತ ಆ್ಯಕ್ಷನ್​ ಸನ್ನಿವೇಶಗಳಿವೆ, ಅವುಗಳ ಚಿತ್ರೀಕರಣದ ವೇಳೆ ಗಾಯಗಳಾದವು. ಭಾವನಾತ್ಮಕವಾಗಿಯೂ ತುಂಬ ಕಷ್ಟದ ಪಾತ್ರ. ಪಾತ್ರವನ್ನು ಅರ್ಥ ಮಾಡಿಕೊಂಡು ಅನುಭವಿಸಿ ನಟಿಸಬೇಕಿತ್ತು. ಕೇರಳದ ಒಂದು ಟೀ ಎಸ್ಟೇಟ್​ನಲ್ಲಿ ಒಂದೇ ತಿಂಗಳಲ್ಲಿ ಶೂಟ್​ ಮಾಡಿದೆವು.
  • ಮಲಯಾಳಂನಲ್ಲಿ "ಶೀಲ' ಚಿತ್ರ ಕಳೆದ ಶುಕ್ರವಾರವೇ ಬಿಡುಗಡೆಯಾಗಿದೆ.
    ಹೌದು, ಚಿತ್ರಕ್ಕೆ ಮಲಯಾಳಂನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನನಗೆ ಸ್ಟಾರ್​ಡಂನ ಹಸಿವಿಲ್ಲ. ರಾತ್ರೋ ರಾತ್ರಿ ಸ್ಟಾರ್​ ಆಗುವ ಆಸೆಯೂ ಇಲ್ಲ. ಹೀಗಾಗಿಯೇ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ಇದೀಗ ಕನ್ನಡದಲ್ಲಿ ರಿಲೀಸ್​ ಆಗುತ್ತಿದೆ. ಇಲ್ಲೂ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀೆಯಿದೆ.
  • "ವೃಷಭ' ಚಿತ್ರಕ್ಕಾಗಿ ಸಿದ್ಧತೆ ಹೇಗೆ ನಡೆಯುತ್ತಿದೆ?
    ಮೋಹನ್​ ಲಾಲ್​ ಸರ್​ ಜತೆ ಎರಡನೇ ಬಾರಿ ನಟಿಸಲಿದ್ದೇನೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ತುಂಬ ಒಳ್ಳೆಯ ಪಾತ್ರ. ಆ್ಯಕ್ಷನ್​ ಪ್ರಧಾನವಾಗಿದ್ದು ನಾನೂ ಸಮರಕಲೆ ತರಬೇತಿ ಪಡೆಯುತ್ತಿದ್ದೇನೆ.
  • ಮುಂದಿನ ಸಿನಿಮಾಗಳು...
    ತೆಲುಗಿನ ಸ್ಟಾರ್​ ಜತೆ ಒಂದು ಸಾಂಗ್​ ಮಾಡಿದ್ದೇನೆ. ಹಿಂದಿಯಲ್ಲಿ ಒಂದು ಚಿತ್ರದ ಚಿತ್ರೀಕರಣ ಮುಗಿದಿದೆ. ಅಕ್ಟೋಬರ್​ನಲ್ಲಿ ಮತ್ತೊಂದು ಸಿನಿಮಾ ಪ್ರಾರಂಭವಾಗಲಿದೆ. ತಮಿಳಿನಲ್ಲಿ ಎರಡು ಚಿತ್ರ ಮಾಡಿದ್ದೇನೆ. ಕನ್ನಡದಲ್ಲಿ "ಬಿಂಗೋ' ಶೂಟಿಂಗ್​ ಮುಗಿದಿದೆ. ಇನ್ನೂ ಒಂದೆರಡು ಸಿನಿಮಾಗಳಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net