ಅಂದಹಾಗೆ, ಸನ್ನಿ ಹೆಸರಿನಲ್ಲಿ ಎರಡು ಸಾವಿರ ರೂಪಾಯಿ ಲೋನ್ ಪಡೆಯಲಾಗಿದೆಯಂತೆ. ಹೌದು, ಈ ವಿಚಾರವನ್ನು ಕೇಳಿ ಸ್ವತಃ ಸನ್ನಿ ಲಿಯೋನ್ ಶಾಕ್ ಆಗಿದ್ದು, ಈ ವಿಚಾರದ ಬಗ್ಗೆ ಅವರು ಟ್ವೀಟ್ ಸಹ ಮಾಡಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಇನ್ನು, ಸನ್ನಿ ಅವರ ಟ್ವೀಟ್ ಬೆನ್ನಲ್ಲೇ, ತಮಗೂ ಇದೇ ರೀತಿ ಮೋಸ ಆಗಿದೆ ಎಂದು ಅನೇಕರು ಟ್ವೀಟ್ ಮಾಡಿದ್ದಾರೆ. ನಟಿ ಸನ್ನಿ ಲಿಯೋನ್ ಅವರ ಹೆಸರಿನಲ್ಲಿ ಒಂದು ನಕಲಿ ಪಾನ್ ಕಾರ್ಡ್ ಮಾಡಿಸಿ, ಅದನ್ನು ಬಳಸಿ ಲೋನ್ ತೆಗೆದುಕೊಳ್ಳಲಾಗಿದೆ. ಇನ್ನು, ಈ ಲೋನ್ ದೋಖಾ ಧಾನಿ ಸ್ಟಾಕ್ ಲಿಮಿಟೆಡ್ ಪ್ಲಾಟ್ಫಾರ್ಮ್ನಲ್ಲಿ ನಡೆದಿದೆ ಎಂದು ನಟಿ ತಿಳಿಸಿದ್ದಾರೆ.