ಮದುವೆಯಾದರೂ ನಟಿ ಪ್ರಿಯಾಮಣಿಗೆ ಬೇಡಿಕೆ ಕಡಿಮೆಯಾಗಿಲ್ಲ... ಒಂದು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು?

Published on
ಖ್ಯಾತ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ನಟಿ ಪ್ರಿಯಾಮಣಿ ಅವರು ಮದುವೆಯ ನಂತರವೂ ಒಳ್ಳೊಳ್ಳೆಯ ಸಿನಿಮಾ ಮತ್ತು ಬೇರೆ ಬೇರ ಉತ್ತಮ ಪ್ರಾಜೆಕ್ಟ್​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬೇಕು. ನಟಿ ಪ್ರಿಯಾಮಣಿ ಅವರಿಗೆ ಮದುವೆಯ ನಂತರವೂ ಇನ್ನೂ ಬೇಡಿಕೆ ಕಡಿಮೆಯಾಗಿಲ್ಲ ಅಂದರೆ ತಪ್ಪಿಲ್ಲ. ಈಗಲೂ, ಬಹಳಷ್ಟು ಸಿನಿಮಾಗಳು ಹಾಗೂ ಒಳ್ಳೊಳ್ಳೆಯ ವೆಬ್​ ಸಿರೀಸ್​ಗಳಲ್ಲಿ ನಟಿಸುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಇನ್ನು, ಹಲವು ರಿಯಾಲಿಟಿ ಶೋಗಳಲ್ಲಿ ನಟಿ ಪ್ರಿಯಾಮಣಿ ಅವರು ಜಡ್ಜ್ ಕೂಡಾ ಆಗಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸರಣಿ ಮತ್ತು ಅದರ ಎರಡನೇ ಸೀಸನ್​ನಲ್ಲೂ ನಟಿಯ ಪಾತ್ರಕ್ಕೆ ಹೆಚ್ಚು ಮಹತ್ವ ಸಿಕ್ಕಿದ್ದು, ‘ಭಾಮಾ ಕಲಾಪಂ’ ಸಿನಿಮಾ​ ಕೂಡಾ ಅವರ ಖ್ಯಾತಿಯನ್ನು ಹೆಚ್ಚಿಸಿದೆ. ಹೀಗಾಗಿ, ನಟಿ ಪ್ರಿಯಾಮಣಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಹೀಗಿರುವಾಗ ನಟಿಯ ಸಂಭಾವನೆ ಎಷ್ಟು ಎಂಬ ಕುತೂಹಲ ಹಲವರಲ್ಲಿ ಮೂಡಿದೆ.
ಅಂದಹಾಗೆ, ತಮ್ಮ ಡಿಮ್ಯಾಂಡ್ ಹೆಚ್ಚಿದ ಕಾರಣ ನಟಿ ಪ್ರಿಯಾಮಣಿ ಅವರ ಸಂಭಾವನೆಯನ್ನು ಇತ್ತೀಚೆಗೆ ಏರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು, ನಟಿ ಪ್ರಿಯಾಮಣಿ ಅವರ ಒಂದು ದಿನಕ್ಕೆ ಪಡೆಯುವ ಸಂಭಾವನೆ ಡಬಲ್ ಆಗಿದೆ ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಹಲವು ವರದಿಗಳ ಪ್ರಕಾರ, ನಟಿ ಪ್ರಿಯಾಮಣಿ ಅವರು ಈ ಹಿಂದೆ ಒಂದು ದಿನಕ್ಕೆ 1.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ.
ಆದರೆ, ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಮತ್ತು ‘ಭಾಮಾ ಕಲಾಪಂ’ ಸಿನಿಮಾ ಹಿಟ್​ ಆದ ನಂತರ ಅವರ ಸಂಭಾವನೆ ಈಗ ಒಂದು ದಿನಕ್ಕೆ ಬರೋಬ್ಬರಿ 3 ರಿಂದ 4 ಲಕ್ಷ ರೂಪಾಯಿಗೆ ಏರಿಕೆಯಾಗಿದೆಯಂತೆ. ಈ ಮೂಲಕ ಮದುವೆ ಆದ ಬಳಿಕವೂ ವೃತ್ತಿಜೀವನವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ಹಲವು ನಟಿಮಣಿಯರ ಸಾಲಿಗೆ 'ಪರುತ್ತಿವೀರನ್' ಎಂಬ ತಮಿಳು ಚಿತ್ರಕ್ಕೆ 2007 ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಪ್ರಿಯಾಮಣಿ ಕೂಡ ಸೇರಿಕೊಂಡಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net