ಭಾರತಕ್ಕೆ ಬರೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರಂತೆ ಸನ್ನಿ ...

Sunny Leone - Final
Published on

ಕಳೆದ ತಿಂಗಳು ಲಾಕ್‌ಡೌನ್ ಸ್ವಲ್ಪ ಸಡಿಲವಾಗುತ್ತಿದ್ದಂತೆಯೇ ಗಂಡ-ಮಕ್ಕಳೊಂದಿಗೆ ಅಮೇರಿಕಾಗೆ ಹಾರಿದ್ದರು ಮಾಜಿ ನೀಲಿ ನಟಿ ಸನ್ನಿ ಲಿಯೋನ್. ಲಾಸ್ ಆ್ಯಂಜಲೀಸ್‌ನ ಸೀಕ್ರೆಟ್ ಗಾರ್ಡನ್‌ಲ್ಲಿದ್ದ ಅವರು, ಆಗಾಗ ಅಲ್ಲಿ ಕಳೆಯುತ್ತಿರುವ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆದರೆ, ಇದೀಗ ಅವರಿಗೆ ಭಾರತಕ್ಕೆ ವಾಪಸ್ಸು ಬರುವಾಸೆಯಾಗಿದೆ. ಸದ್ಯಕ್ಕೆ ಅಂತಾರಾಷ್ಟ್ರೀಯ ಫ್ಲೈಟುಗಳನ್ನು ನಿಲ್ಲಿಸಿರುವುದರಿಂದ ಅವರಿಗೆ ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲವಂತೆ. ಒಮ್ಮೆ ಅವಕಾಶ ಸಿಗುತ್ತಿದ್ದಂತೆಯೇ, ತಕ್ಷಣ ವಾಪಸ್ಸಿಗೆ ಬರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಸನ್ನಿ, ಭಾರತ ಬಿಟ್ಟು ಹೋಗಿದ್ದೇಕೆ ಮತ್ತು ಈಗ ವಾಪಸ್ಸು ಬರುವುದಕ್ಕೆ ಒದ್ದಾಡುತ್ತಿರುವುದೇಕೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಮಕ್ಕಳ ಸುರಕ್ಷತೆಗಾಗಿ ಭಾರತ ಬಿಟ್ಟು ಅಮೆರಿಕಾಗೆ ಬಂದಿದ್ದಾಗಿ ಸನ್ನಿ ಲಿಯೋನ್ ಹೇಳಿಕೊಂಡಿದ್ದರು. ಕರೊನಾ ವೈರಸ್ ಎಂಬ ಆಗುಂತಕ ಕಿಲ್ಲರ್‌ನಿಂದ ಸುರಕ್ಷಿತವಾಗಿರುವುದಕ್ಕೆ ಇದು ಒಳ್ಳೆಯ ಸ್ಥಳ ಎಂದು ನಮಗನ್ನಿಸಿದ್ದರಿಂದ, ಅಮೇರಿಕಾಗೆ ಹೋಗುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು.

ಆದರೆ, ಸನ್ನಿ ಈಗ ಹೇಳುತ್ತಿರುವುದು ಬೇರೆ. ‘ನಿಜ ಹೇಳಬೇಕೆಂದರೆ, ನನಗೆ ಮುಂಬೈ ಬಿಡುವುದಕ್ಕೇ ಇಷ್ಟವಿರಲಿಲ್ಲ. ನಾವು ಇಲ್ಲಿಗೆ ಯಾವತ್ತೋ ಬರಬೇಕಿತ್ತು. ಆದರೆ, ನನಗೆ ಬರುವುದಕ್ಕೆ ಮನಸ್ಸಿರಲಿಲ್ಲ. ಡೇನಿಯಲ್ ಕುಟುಂಬದವರಿಗೋಸ್ಕರ ಇಲ್ಲಿಗೆ ಬಂದೆವು. ಮುಂಬೈಗೆ ವಾಪಸ್ಸಾಗುವುದಕ್ಕೆ ಮನಸ್ಸಾಗುತ್ತಿದೆ. ಆದರೆ, ಅಂತಾರಾಷ್ಟ್ರೀಯ ಫ್ಲೈಟ್​ಗಳು ಸದ್ಯಕ್ಕಿಲ್ಲ. ಶುರುವಾಗುತ್ತಿದ್ದಂತೆಯೇ, ಇಂಡಿಯಾಗೆ ವಾಪಸ್ಸಾಗುತ್ತೀವಿ’ ಎಂದು ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ.

ಹಾಗಾದರೆ, ಸನ್ನಿ ಭಾರತಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆಯು, ಅಂತಾರಾಷ್ಟ್ರೀಯ ಫ್ಲೈಟುಗಳ ಹಾರಾಟದ ಮೇಲೆ ಅವಲಂಬಿತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net