ವಾವ್​... ನನ್ನ ಟೀ-ಶರ್ಟ್​ ಮೇಲೇಕೆ ನಿಮ್ಮ ಲುಕ್​ : ಸನ್ನಿ ಲಿಯೋನ್​ ಅವರ ಒಗಟಿನ ಮಾತಿಗೂ ಲಾಕ್​ಡೌನ್​ಗೂ ಇದೆ ಲಿಂಕ್!​

Sunny Leone
Published on

ಮುಂಬೈ: ವಾವ್​.. ಅವರು ನನ್ನ ಟೀ-ಶರ್ಟ್​ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಂತ ಬಾಲಿವುಡ್​ ನಟಿ ಹಾಗೂ ಮಾಜಿ ಬ್ಲೂ ಫಿಲ್ಮ್​ ಸ್ಟಾರ್​ ಸನ್ನಿ ಲಿಯೋನ್​ ಹೇಳಿದ್ಯಾಕೆ ಗೊತ್ತಾ? ಗೊತ್ತಿಲ್ಲವೆಂದರೆ ಮುಂದೆ ಓದಿ...

ಜಾಗತಿಕವಾಗಿ ಮರಣಮೃದಂಗ ಬಾರಿಸುತ್ತಿರುವ ಕರೊನಾ ವೈರಸ್​ ಹಡರುವುದನ್ನು ತಡೆಗಟ್ಟಲು ಬಹುತೇಕ ರಾಷ್ಟ್ರಗಳು ಲಾಕ್​ಡೌನ್​ ಆಶ್ರಯಿಸಿವೆ. ಅದರಲ್ಲಿ ನಮ್ಮ ರಾಷ್ಟ್ರವು ಒಂದು. ಏಪ್ರಿಲ್​ 14ರವರೆಗೆ ಇಡೀ ಭಾರತಕ್ಕೆ ಬೀಗಮುದ್ರೆ ಬಿದ್ದಿದೆ.

ಇಂತಹ ಸಮಯದಲ್ಲಿ ಮನೆಯಲ್ಲೇ ಉಳಿದಿರುವ ಕೋಟ್ಯಾಂತರ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ 80ರ ದಶಕದಲ್ಲಿ ಹೆಚ್ಚು ಜನರನ್ನು ಆಕರ್ಷಿಸಿದ್ದ ರಾಮಾಯಣ, ಮಹಾಭಾರತ ಹಾಗೂ ಶಕ್ತಿಮಾನ್​ ಧಾರವಾಹಿಗಳನ್ನು ದೂರದರ್ಶನ ಮರುಪ್ರಸಾರ ಮಾಡುತ್ತಿದೆ.

ಇದನ್ನು ಗಮನಿಸಿರುವ ಸನ್ನಿ ಲಿಯೋನ್​ ಇಂದು ಸಂಜೆ ಟ್ವೀಟ್​ ಮಾಡಿ, ವಾವ್​... ಅವರು(ದೂರದರ್ಶನ) ನನ್ನ ಟೀ-ಶರ್ಟ್ಸ್​ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ದೂರದರ್ಶನದಲ್ಲಿ ಮರಳಿ ಬಂದಿರುವುದೇನೆಂದು ಊಹಿಸಿ? ಎಂದು ಟೀ-ಶರ್ಟ್​ ಹಾಗೂ ಅದರ ಮೇಲೊಂದು ಜಾಕೆಟ್​ ಧರಿಸಿ ಕ್ಯಾಮರಾಗೆ ಪೋಸ್​ ನೀಡಿರುವ ಮಾದಕ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಫೋಟೋವನ್ನು ಗಮನಿಸಿದರೆ ಅದರೆ ಮೇಲೆ 90ರ ದಶಕವನ್ನು ಮರಳಿ ತನ್ನಿ(Bring Back the 90s) ಎಂದು ಬರೆಯಲಾಗಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹ್ಯಾಷ್​ಟ್ಯಾಗ್​ನಲ್ಲಿ ರಾಮಾಯಣ, ಮಹಾಭಾರತ ಮತ್ತು ಶಕ್ತಿಮಾನ್​ ಅನ್ನು ಉಲ್ಲೇಶಿಸಿರುವುದು ಸನ್ನಿ ಲಿಯೋನ್​ ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net