More

    ರಾಮಾಯಣ, ಮಹಾಭಾರತದ ಬಳಿಕ 90ರ ದಶಕದ ಸೂಪರ್ ಹೀರೋ ಶಕ್ತಿಮಾನ್ ಬರ್ತಿದ್ದಾನೆ! ಸ್ವಾಗತಿಸಿ..

    ದೂರದರ್ಶನ ವಾಹಿನಿಯಲ್ಲಿ ಮೂರು ದಶಕದ ಹಿಂದಿನ ಎಪಿಕ್ ಧಾರಾವಾಹಿಗಳು ಕರೊನಾ ಕ್ವಾರಂಟೈನ್ ಹಿನ್ನೆಲೆಯಲ್ಲಿ ಮರು ಪ್ರಸಾರ ಆರಂಭಿಸಿವೆ. 80ರ ದಶಕದವರ ಜತೆಗೆ ಈಗಿನ ಪೀಳಿಗೆಯವರು ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಅಚ್ಚರಿ ಎಂಬಂತೆ ವೀಕ್ಷಿಸುತ್ತಿದ್ದಾರೆ. ಅದೇ ರೀತಿ ಈಗ ಶಕ್ತಿಮಾನ್‌ನ ಸಾಹಸಗಳನ್ನು ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ಮರುಪ್ರಸಾರವಾಗುತ್ತಿದ್ದಂತೆ ಶಕ್ತಿಮಾನ್ ಧಾರಾವಾಹಿ ಪ್ರಸಾರಕ್ಕೂ ಬೇಡಿಕೆ ಹೆಚ್ಚಿದ್ದು, ಶೀಘ್ರದಲ್ಲಿ ಅದರ ಪ್ರಸಾರದ ಸಮಯ ಘೋಷಣೆ ಆಗಲಿದೆ.

    ಶಕ್ತಿಮಾನ್ ಪಾತ್ರ ನಿಭಾಯಿಸಿದ್ದ ಮುಖೇಶ್ ಖನ್ನಾ ಧಾರಾವಾಹಿ ಮರು ಪ್ರಸಾರದ ಬಗ್ಗೆ ಟ್ವಿಟರ್‌ನಲ್ಲಿಯೂ ಸಣ್ಣ ಸುಳಿವು ನೀಡಿದ್ದಾರೆ. ‘ಕ್ವಾರಂಟೈನ್ ಹೊತ್ತಿನಲ್ಲಿ ದೇಶದ 130 ಕೋಟಿ ಜನರಿಗೆ ಏಕಕಾಲದಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳ ಮರು ಪ್ರಸಾರ ಆಗುತ್ತಿರುವುದು ಖುಷಿಯ ವಿಚಾರ. ಈ ಖುಷಿಯ ಹೊತ್ತಲ್ಲಿ ನಾನೂ ಒಂದು ಸಿಹಿ ಸುದ್ದಿಯನ್ನು ನೀಡಲಿದ್ದೇನೆ. ಶೀಘ್ರದಲ್ಲಿ ಶಕ್ತಿಮಾನ್ ಧಾರಾವಾಹಿ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಯಾವಾಗಿನಿಂದ ಮತ್ತು ಎಷ್ಟೊತ್ತಿಗೆ ಶುರುವಾಗಲಿದೆ ಎಂಬುದನ್ನು ತಿಳಿಸುವೆ’ ಎಂದಿದ್ದಾರೆ.

    ಅಂದಹಾಗೆ, 1997ರ ಸೆಪ್ಟೆಂಬರ್ 13ರಲ್ಲಿ ಶುರುವಾದ ಶಕ್ತಿಮಾನ್ ಧಾರಾವಾಹಿ ಸುದೀರ್ಘ ಎಂಟು ವರ್ಷ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗಿತ್ತು. 90ರ ಕಾಲಘಟ್ಟದ ಮಕ್ಕಳನ್ನೂ ಬಹಳ ಆಕರ್ಷಿಸಿತ್ತು. 30 ನಿಮಿಷದ ಅವಧಿಯ ಈ ಧಾರಾವಾಹಿ ಒಟ್ಟು 520 ಸಂಚಿಕೆಗಳನ್ನು ಪೂರೈಸಿತ್ತು. ಆ್ಯಕ್ಷನ್ ಹೀರೋ ಶೈಲಿಯ ಈ ಸೀರಿಯಲ್‌ಗೆ ಮುಖೇಶ್ ಖನ್ನಾ ನಿರ್ಮಾಪಕರಾಗಿಯೂ ಬಂಡವಾಳ ಹೂಡಿದ್ದರು. ವೈಷ್ಣವಿ ಮಹಾಂತ್, ಕಿಟ್ಟು ಗಿದ್ವಾನಿ ಸೇರಿ ಹಲವರು ಪಾತ್ರವರ್ಗದಲ್ಲಿದ್ದರು. (ಏಜೆನ್ಸೀಸ್‌)

    ರಾಮಾಯಣದ ಜತೆಗೆ ಮಹಾಭಾರತ ಪ್ರಸಾರವೂ ಶುರು; ಪ್ರತಿದಿನ ಮಧ್ಯಾಹ್ನ 12 ಮತ್ತು ಸಂಜೆ 7ಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts