More

    ರಾಮಾಯಣದ ಜತೆಗೆ ಮಹಾಭಾರತ ಪ್ರಸಾರವೂ ಶುರು; ಪ್ರತಿದಿನ ಮಧ್ಯಾಹ್ನ 12 ಮತ್ತು ಸಂಜೆ 7ಕ್ಕೆ

    ದೆಹಲಿ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಶನಿವಾರದಿಂದ ದೂರದರ್ಶನ ನ್ಯಾಶನಲ್ ವಾಹಿನಿಯಲ್ಲಿ ಮೂರು ದಶಕದ ಹಿಂದಿನ ರಾಮಾಯಣ ಧಾರಾವಾಹಿ ಮರು ಪ್ರಸಾರ ಆರಂಭಿಸಿದೆ. ಈಗ ಮಹಾಭಾರತದ ಸರದಿ. ಹೌದು, ಪ್ರೇಕ್ಷಕರ ಒತ್ತಾಯದ ಮೇರೆಗೆ ಮಹಾಭಾರತ ಧಾರಾವಾಹಿಯನ್ನು ಶನಿವಾರದಿಂದಲೇ ಪ್ರಸಾರ ಆರಂಭಿಸಲಾಗಿದೆ. ಅಂದರೆ, ಪ್ರತಿದಿನ ಬೆಳಗ್ಗೆ 9ಕ್ಕೆ ರಾಮಾಯಣ ಬಿತ್ತರವಾದರೆ, ಮಧ್ಯಾಹ್ನ 12 ಮತ್ತು ಸಂಜೆ 7ಕ್ಕೆ ಡಿಡಿ ಭಾರತಿಯಲ್ಲಿ ಮಹಾಭಾರತ ಮೂಡಿಬರಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
    80ರ ದಶಕದಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ನೋಡಲು ಇಡೀ ಭಾರತವೇ ಕಾದು ಕುಳಿತಿರುತ್ತಿತ್ತು. ಆ ಮಟ್ಟಿಗಿನ ಪ್ರೇಕ್ಷಕರನ್ನು ಆ ಎರಡು ಧಾರಾವಾಹಿಗಳು ಸೆಳೆದಿದ್ದವು. ಬಿ.ಆರ್. ಚೋಪ್ರಾ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಹಾಭಾರತ ಧಾರಾವಾಹಿಯಲ್ಲಿ ಕೃಷ್ಣನಾಗಿ ನಿತೀಶ್ ಭಾರದ್ವಾಜ್, ದ್ರೌಪದಿಯಾಗಿ ರೂಪಾ ಗಂಗೂಲಿ, ಗಜೇಂದ್ರ ಚೌಹಾಣ್, ಪ್ರವೀಣ್ ಕುಮಾರ್, ಅರ್ಜುನ್, ಸಮೀರ್ ಚಿತ್ರೆ, ಸಂಜೀವ್ ಚಿತ್ರೆ ಪಾಂಡವರಾಗಿದ್ದರು. ಪುನೀತ್ ಇಸ್ಸಾರ್ ದುರ್ಯೋದನನಾಗಿ ನಟಿಸಿದ್ದ ಈ ಧಾರಾವಾಹಿ, 1988 ಅಕ್ಟೋಬರ್ 2ರ ಗಾಂಧಿ ಜಯಂತಿ ಪ್ರಯುಕ್ತ ಪ್ರಸಾರವಾಗಿತ್ತು. 1990 24 ಜೂನ್‌ನಲ್ಲಿ ಮುಕ್ತಾಯಗೊಂಡಿತ್ತು. ಇದೀಗ ಕರೊನಾ ಹಿನ್ನೆಲೆಯಲ್ಲಿ 3 ದಶಕದ ಬಳಿಕ ಮರು ಪ್ರಸಾರ ಕಾಣುತ್ತಿದೆ. (ಏಜೆನ್ಸೀಸ್)

    ‘ರಾಮಾಯಣ’ದ ಸೀತೆ ಈಗ ಹೇಗಿದ್ದಾರೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts