ಬಿಗ್ ಬಾಸ್ ಪ್ರೋಮೋ ಶೂಟ್​ನಲ್ಲಿ ಸುದೀಪ್

Bigboss
Published on

ಬೆಂಗಳೂರು: ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಪ್ರತೀವರ್ಷ ಅಕ್ಟೋಬರ್​ನಲ್ಲಿ ಪ್ರಾರಂಭವಾಗಬೇಕಿದ್ದ ‘ಬಿಗ್ ಬಾಸ್’, ಜನವರಿಗೆ ಮುಂದೂಡಲ್ಪಟ್ಟಿತ್ತು. ಆದರೆ, ಜನವರಿ ಮುಗಿಯುವುದಕ್ಕೆ ಬಂದರೂ, ‘ಬಿಗ್ ಬಾಸ್’ನ ಎಂಟನೇ ಸೀಸನ್ ಶುರುವಾಗಲಿಲ್ಲ ಎಂದು ಆ ಕಾರ್ಯಕ್ರಮದ ಮತ್ತು ಸುದೀಪ್ ಅವರ ಅಭಿಮಾನಿಗಳು ಬೇಸರಪಟ್ಟುಕೊಳ್ಳುವಷ್ಟರಲ್ಲಿ, ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಪ್ರೋಮೋ ಶೂಟ್​ನಲ್ಲಿ ಭಾಗವಹಿಸಿರುವ ಫೋಟೋ ಹಂಚಿಕೊಂಡಿರುವ ಸುದೀಪ್, ಸದ್ಯದಲ್ಲೇ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಕಲರ್ಸ್ ಕನ್ನಡದ ಬಿಜಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಈ ಪ್ರೋಮೋಗಳನ್ನು ನಿರ್ದೇಶಿಸಿದ್ದು, ಸದ್ಯದಲ್ಲೇ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net