

ಸುದೀಪ್ ಮತ್ತು ಪ್ರಿಯಾ ದಂಪತಿಯ ಮುದ್ದಿನ ಮಗಳು ಸಾನ್ವಿ, ನಿನ್ನೆ ಮೇ 20ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. 16ನೇ ವರ್ಷದ ಜನ್ಮದಿನಕ್ಕೆ ಸುದೀಪ್, ಮಗಳಿಗೆ ಭಾವನಾತ್ಮವಾಗಿ ಶುಭ ಹಾರೈಸುವುದರ ಜತೆಗೆ, ಸಾನ್ವಿ ಪುಟ್ಟ ಮಗುವಾಗಿದ್ದಾಗಿನಿಂದ ಇಲ್ಲಿಯವರೆಗಿನ ಫೋಟೋಗಳನ್ನು ಕೊಲಾಜ್ ಮಾಡಿ, ‘ಮತ್ತೆ ಮಗುವಾಗು ನೀನು ...’ ಎಂದು ಕವನ ಬರೆದು ಅದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು.
ಇದಲ್ಲದೆ, ಸುದೀಪ್ ತಮ್ಮ ಮಗಳಿಗೆ ಬೆಲೆ ಕಟ್ಟಲಾಗದ ಒಂದು ಗಿಫ್ಟ್ ಕೊಟ್ಟಿದ್ದಾರೆ. ಒಂದು ವಿಡಿಯೋ ಮಾಡಿಸಿ, ಅದನ್ನು ಯೂಟ್ಯೂಬ್‌ನ ತಮ್ಮ ಕಿಚ್ಚ ಕ್ರಿಯೇಷನ್ಸ್ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಏನು ಗೊತ್ತಾ? ಈ ಹಾಡನ್ನು ಸುದೀಪ್ ಮತ್ತು ಪ್ರಿಯಾ ಅವರೇ ಹಾಡಿದ್ದಾರೆ.
ಈ ಹಾಡನ್ನು ಬರೆದು ಕಂಪೋಸ್ ಮಾಡಿರುವುದು ವಾಸುಕಿ ವೈಭವ್. ‘ಬಿಗ್ ಬಾಸ್’ನಲ್ಲಿ ತಮ್ಮ ಪ್ರತಿಭೆಯಿಂದ, ಸುದೀಪ್‌ಗೆ ಬಹಳ ಇಷ್ಟವಾದ ವಾಸುಕಿ, ಒಂದು ಹಾಡು ಬರೆದು ಅದನ್ನು ಕಂಪೋಸ್ ಮಾಡಿದ್ದಾರೆ. ಇನ್ನು ನಿರ್ದೇಶಕ ಅನೂಪ್ ಭಂಡಾರಿ, ಸಾನ್ವಿಯ ಹಲವು ಫೋಟೋಗಳನ್ನಿಟ್ಟುಕೊಂಡು ಒಂದು ವಿಡಿಯೋ ಮಾಡಿದ್ದಾರೆ.ಈ ಹಾಡನ್ನು ಸುದೀಪ್, ತಮ್ಮ ಮಗಳಿಗೆ ಗ್‌ಟಿ ಕೊಟ್ಟಿದ್ದಾರೆ. ಈಗಾಗಲೇ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹಿಟ್ ಆಗಿದ್ದು, ಹಲವು ಲೈಕ್‌ಗಳನ್ನು ಕಂಡಿದೆ.
ಅಷ್ಟೇ ಅಲ್ಲ, ಈ ಹಾಡನ್ನು ಮಾಡುವುದಕ್ಕೆ ಕಾರಣರಾದ ವಾಸುಕಿ, ಅನೂಪ್ ಮತ್ತು ವಿಜಯ್‌ಗೆ ಸುದೀಪ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಆ ಮೂವರು ಇಲ್ಲದಿದ್ದರೆ, ಇಂಥದ್ದೊಂದು ಗ್‌ಟಿ ಕೊಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇನ್ನು ಸುದೀಪ್ ಮಗಳ ಹುಟ್ಟುಹಬ್ಬಕ್ಕೆ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ.