ದಯವಿಟ್ಟು ಅದನ್ನು ಕೇಳ್ಬೇಡಿ... ನಗ್ನ ವಿಡಿಯೋ ಸೋರಿಕೆ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಶ್ರುತಿ! Shruti Narayanan

Shruti Narayanan
Published on

Shruti Narayanan : ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನಗ್ನ ವಿಡಿಯೋ ಬಗ್ಗೆ ಕಾಲಿವುಡ್​ ನಟಿ ಹಾಗೂ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಶ್ರುತಿ ನಾರಾಯಣನ್ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್​ ವಿಡಿಯೋ ಎಐನಿಂದ ಸೃಷ್ಟಿಸಲಾಗಿದೆ ಎಂದಿದ್ದಾರೆ.

ನಟಿ ಶ್ರುತಿ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿ ಮೂಲಕ ಪ್ರತಿಕ್ರಿಯಿಸಿದ್ದಾರೆ. ಶ್ರುತಿ ಅವರದ್ದು ಎನ್ನಲಾದ 14 ನಿಮಿಷದ ನಗ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ವಿಡಿಯೋವನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಸೃಷ್ಟಿಸಲಾಗಿದೆ ಎಂದು ನಟಿ ಶ್ರುತಿ ಸ್ಪಷ್ಟಪಡಿಸಿದ್ದಾರೆ. ಖಾಸಗಿ ಆಡಿಷನ್​ ಸಮಯದಲ್ಲಿ ಈ ವಿಡಿಯೋ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋ ತಮಿಳು ಚಲನಚಿತ್ರೋದ್ಯಮದಲ್ಲಿನ ಕಾಸ್ಟಿಂಗ್ ಕೌಚ್‌ನ ಕರಾಳ ಮುಖವನ್ನು ಬಹಿರಂಗಪಡಿಸುತ್ತದೆ ಎಂಬ ಆರೋಪಗಳೂ ಕೇಳಿಬರುತ್ತಿದೆ. ಆದರೆ, ಇದು ಎಐ ಸೃಷ್ಟಿಯ ನಕಲಿ ವಿಡಿಯೋ ಅನ್ನೋ ಮಾತುಗಳು ಕೂಡ ಕೇಳಿಬರುತ್ತಿದೆ.

ಇನ್ನು ನಗ್ನ ವಿಡಿಯೋ ವೈರಲ್ ಆದ ಬೆನ್ನಲ್ಲೇ ಶ್ರುತಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಪ್ರೈವೆಟ್​ ಮಾಡಿಕೊಂಡಿದ್ದರು. ಇದೀಗ ಖಾತೆಯನ್ನು ಮತ್ತೆ ಸಾರ್ವಜನಿಕಗೊಳಿಸಿದ್ದು, ವೈರಲ್​ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಶೇರ್​ ಮಾಡಿರುವ ಮೊದಲ ಇನ್​ಸ್ಟಾ ಸ್ಟೋರಿಯಲ್ಲಿ, ವೈರಲ್​ ಆಗುತ್ತಿರುವ ವಿಡಿಯೋವನ್ನು AI ಕ್ಲೋನಿಂಗ್ ಮೂಲಕ ಮಾಡಲಾಗಿದೆ ಎಂದಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋವನ್ನೂ ಅಟ್ಯಾಚ್​ ಮಾಡಿದ್ದಾರೆ.

Shruti Narayanan 1

ಎರಡನೇ ಸ್ಟೋರಿಯಲ್ಲಿ ಯಾರೂ ಕೂಡ ಕಾಡ್ಗಿಚ್ಚಿನಂತೆ ಆ ವಿಡಿಯೋ ಲಿಂಕ್​ಗಳನ್ನು ಹರಡಬಾರದು ಎಂದು ಶ್ರುತಿ ಮನವಿ ಮಾಡಿಕೊಂಡಿದ್ದಾರೆ. ನಿಮಗೆ ಇಂತಹ ವಿಡಿಯೋಗಳು ತಮಾಷೆಯಾಗಿ ಕಾಣಿಸಬಹುದು ಆದರೆ, ಅದು ನನಗೆ ಮತ್ತು ನನ್ನ ಹತ್ತಿರದವರಿಗೆ ತುಂಬಾ ತೊಂದರೆಗಳನ್ನು ಉಂಟುಮಾಡುತ್ತದೆ ಎಂದು ಶ್ರುತಿ ನೋವು ತೋಡಿಕೊಂಡಿದ್ದಾರೆ. ಅಲ್ಲದೆ, ಒಂದು ವೇಳೆ ನೋಡುವುದಾದರೆ, ನಿಮ್ಮ ತಾಯಿ, ಸಹೋದರಿ ಅಥವಾ ಗೆಳತಿಯ ವಿಡಿಯೋಗಳನ್ನು ನೋಡಿ ಏಕೆಂದರೆ ಅವರು ಕೂಡ ಹುಡುಗಿಯರು ಮತ್ತು ಅವರಿಗೂ ನನ್ನಂತೆಯೇ ದೇಹವಿದೆ. ಆದ್ದರಿಂದ ಹೋಗಿ ಅವರ ವಿಡಿಯೋಗಳನ್ನು ಆನಂದಿಸಿ ಎಂದಿದ್ದಾರೆ.

Shruti Narayanan 2

ಮೂರನೇ ಇನ್​ಸ್ಟಾ ಸ್ಟೋರಿಯಲ್ಲಿ ಇದು ಮಾನವ ಜೀವನ, ನಿಮ್ಮ ಮನರಂಜನೆಯಲ್ಲ. ಸಂತ್ರಸ್ತರನ್ನು ದೂಷಿಸುವ ಅನೇಕ ಕಾಮೆಂಟ್‌ಗಳು ಮತ್ತು ಪೋಸ್ಟ್‌ಗಳನ್ನು ನಾನು ನೋಡಿದ್ದೇನೆ. ಆದರೆ, ಪುರುಷರಲ್ಲಿ ನಾನೊಂದನ್ನು ಕೇಳಲು ಬಯಸುತ್ತೇನೆ. ಏಕೆ ಯಾವಾಗಲೂ ಮಹಿಳೆಯರ ಮೇಲೆಯೇ ಜಡ್ಜ್​ ಮಾಡುತ್ತೀರಿ? ಅಂತಹ ವಿಡಿಯೋಗಳನ್ನು ಸೋರಿಕೆ ಮಾಡುವವರು ಮತ್ತು ನೋಡುವವರ ವಿರುದ್ಧ ಏಕೆ ಪ್ರಶ್ನಿಸುವುದಿಲ್ಲ? ಜನರು ಈ ವಿಚಾರದಲ್ಲಿ ಪ್ರತಿಕ್ರಿಯಿಸುವ ರೀತಿ ನಿಜಕ್ಕೂ ಅಸಹ್ಯಕರವಾಗಿದೆ. ಎಲ್ಲಾ ಮಹಿಳೆಯರಿಗೆ ನಿಮ್ಮ ತಾಯಿ, ಅಜ್ಜಿ, ಸಹೋದರಿ ಅಥವಾ ಹೆಂಡತಿಯಂತೆಯೇ ಒಂದೇ ರೀತಿಯ ದೇಹದ ಭಾಗಗಳಿವೆ. ಇದೇನು ದೊಡ್ಡ ವಿಷಯವಲ್ಲ. ಇದು ಕೇವಲ ವಿಡಿಯೋ ವಿಚಾರವಲ್ಲ, ಯಾರೊಬ್ಬರ ಮಾನಸಿಕ ಆರೋಗ್ಯ ಮತ್ತು ಜೀವನ. ಎಐ ರಚಿತ ಡೀಪ್‌ಫೇಕ್‌ಗಳು ಜೀವನವನ್ನು ಹಾಳುಮಾಡುತ್ತಿವೆ ಮತ್ತು ನೀವು ಅವುಗಳೊಂದಿಗೆ ತೊಡಗಿಸಿಕೊಂಡರೆ, ನೀವು ಸಮಸ್ಯೆಯ ಭಾಗವಾಗಿದ್ದೀರಿ ಎಂದರ್ಥ. ಮೊದಲು ಲಿಂಕ್​ಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿ. ಅಲ್ಲದೆ, ಲಿಂಕ್‌ಗಳನ್ನು ಕೇಳುವುದನ್ನೂ ನಿಲ್ಲಿಸಿ ಎಂದಿರುವ ಶ್ರುತಿ, ಲೀಕ್​ ಆದ ವಿಡಿಯೋಗಳನ್ನು ಅದು ನಿಜವಾಗಿರಲಿ ಅಥವಾ ಡೀಪ್​ಫೇಕ್​ ಆಗಿರಲಿ ಅದನ್ನು ಕೇಳುವುದು, ಶೇರ್​ ಮಾಡುವುದು ಭಾರತದಲ್ಲಿ ಕ್ರಿಮಿನಲ್​ ಅಪರಾಧ ಎಂದಿದ್ದಾರೆ. ಅಲ್ಲದೆ, ಅದಕ್ಕೆ ಸಂಬಂಧಿಸಿದ ಐಪಿಸಿ ಹಾಗೂ ಐಟಿ ಕಾಯ್ದೆಯ ಸೆಕ್ಷನ್​ಗಳನ್ನು ಸಹ ಹಂಚಿಕೊಂಡಿದ್ದಾರೆ.

Shruti Narayanan 3

ಯಾರು ಈ ಶ್ರುತಿ ನಾರಾಯಣ್​?

ಅಂದಹಾಗೆ ಶ್ರುತಿ, 24ನೇ ವಯಸ್ಸಿನಲ್ಲಿ ತಮಿಳು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಸಿರಗಡಿಕ್ಕ ಆಸೈನಂತಹ ಕಾರ್ಯಕ್ರಮಗಳಿಂದಾಗಿ ಜನಪ್ರಿಯತೆ ಗಳಿಸಿದರು. ಯಾವಾಗ ಸಿನಿಮಾಗಳನ್ನು ಮಾಡಲು ಆರಂಭಿಸಿದರೋ ಆಗ ಉತ್ತಮ ಯಶಸ್ಸನ್ನು ಗಳಿಸಲು ಆರಂಭಿಸಿದರು. ಮನರಂಜನಾ ಲೋಕದ ಹೊರತಾಗಿ ಶ್ರುತಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಯಮಿತವಾಗಿ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net