

Zodiac Signs : ವೈದಿಕ ಜ್ಯೋತಿಷ್ಯದ ಪ್ರಕಾರ, ಕರ್ಮವನ್ನು ನೀಡುವ ಶನಿ ದೇವರು ಒಂದು ನಿರ್ದಿಷ್ಟ ಮಧ್ಯಂತರದಲ್ಲಿ ತನ್ನ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತಾನೆ. ಶನಿ ತನ್ನ ಸ್ಥಾನವನ್ನು ಬದಲಿಸಿದಾಗ, ಅದರ ಪರಿಣಾಮವು ಎಲ್ಲ 12 ರಾಶಿಚಕ್ರ ಚಿಹ್ನೆಗಳ ಮೇಲೆ ಬೀರುತ್ತದೆ.
ಅದರಂತೆ, ಶನಿ ದೇವನು ಪ್ರಸ್ತುತ ತನ್ನ ಮೂಲದ್ರಿಕೋನ ರಾಶಿಯಾದ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಅದೇ ರೀತಿ, ಅವನು ಪೂರ್ವ ಭಾದ್ರಪದ ನಕ್ಷತ್ರದಲ್ಲಿಯೂ ಸಹ ಸಾಗುತ್ತಿದ್ದಾನೆ.
ಗುರು ಗ್ರಹದ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿಯು ಸಂಚಾರ ಮಾಡುತ್ತಿರುವುದರಿಂದ, ಕೆಲವರ ಜೀವನ ಚೆನ್ನಾಗಿರುತ್ತದೆ. ಏಪ್ರಿಲ್ 3ರಂದು, ಬುದ್ಧಿಶಕ್ತಿಯ ಅಧಿಪತಿ ಬುಧ ಗ್ರಹವು ಸಹ ಪೂರ್ವ ಭಾದ್ರಪ್ರದ ನಕ್ಷತ್ರದಲ್ಲಿ ಸಂಚಾರ ಮಾಡುತ್ತದೆ. ಹೀಗಾಗಿ, ಶನಿ-ಬುಧ ಸಂಯೋಗವು ಪೂರ್ವ ಭಾದ್ರಪ್ರದ ನಕ್ಷತ್ರದಲ್ಲಿ ನಡೆಯುತ್ತದೆ.
ಹಾಗಾದರೆ, ಶನಿ-ಬುಧ ಸಂಯೋಗದಿಂದ ಯಾವ ರಾಶಿಚಕ್ರದವರಿಗೆ ಶುಭ ಫಲಗಳು ಸಿಗುತ್ತವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಪೂರ್ವ ಭಾದ್ರಪ್ರದ ನಕ್ಷತ್ರದಲ್ಲಿ ಶನಿ ಮತ್ತು ಬುಧನ ಸಂಯೋಗದಿಂದಾಗಿ, ವೃಷಭ ರಾಶಿಯಲ್ಲಿ ಜನಿಸಿದ ಜನರು ತಮ್ಮ ವೃತ್ತಿಜೀವನದಿಂದ ಲಾಭ ಪಡೆಯುತ್ತಾರೆ. ಅವರಿಗೆ ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಇದರೊಂದಿಗೆ ಸಂಬಂಧದಲ್ಲಿ ಪ್ರಯಾಣದ ಸಾಧ್ಯತೆ ಇದೆ. ಯಾವುದೇ ಸಮಸ್ಯೆ ಇದ್ದರೆ, ಅದನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯ ನಿಮಗಿರುತ್ತದೆ. ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಆದರೆ, ಪ್ರತಿಯೊಂದು ಕೆಲಸದಲ್ಲೂ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುವಿರಿ. ಈ ರಾಶಿಯವರಿಗೆ ಬಹಳ ದಿನಗಳಿಂದ ಬರಬೇಕಾಗಿದ್ದ ಹಣ ಬಂದು ಕೈ ಸೇರುತ್ತದೆ.
ಪೂರ್ವ ಭಾದ್ರಪ್ರದ ನಕ್ಷತ್ರದಲ್ಲಿ ಶನಿ ಮತ್ತು ಬುಧನ ಸಂಯೋಗದಿಂದಾಗಿ, ಮಿಥುನ ರಾಶಿಯಲ್ಲಿ ಜನಿಸಿದವರು ತಮ್ಮ ಕಠಿಣ ಪರಿಶ್ರಮದ ಲಾಭವನ್ನು ಪಡೆಯುತ್ತಾರೆ. ಶನಿಯ ಆಶೀರ್ವಾದದಿಂದ ಜೀವನದಲ್ಲಿ ಸಂತೋಷ ಸಿಗುತ್ತದೆ. ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಪ್ರೀತಿಯಿಂದ ವರ್ತಿಸುವಿರಿ. ಬಹುಕಾಲದಿಂದ ಈಡೇರದೆ ಉಳಿದಿರುವ ಆಸೆಗಳು ಈಡೇರುತ್ತವೆ. ಏನೇ ಕೆಲಸವನ್ನು ಮಾಡಿದರೂ ಬಹಳ ಎಚ್ಚರಿಕೆಯಿಂದ ಮಾಡಬೇಕು.
ಪೂರ್ವ ಭಾದ್ರಪ್ರದ ನಕ್ಷತ್ರದಲ್ಲಿ ಶನಿ ಮತ್ತು ಬುಧನ ಸಂಯೋಗದಿಂದಾಗಿ, ತುಲಾ ರಾಶಿಯಲ್ಲಿ ಜನಿಸಿದವರು ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಕೆಲಸದಲ್ಲಿ ಲಾಭ ಪಡೆಯಲು ಹಲವು ಅವಕಾಶಗಳಿವೆ. ನೀವು ನಿಮ್ಮ ಶತ್ರುಗಳ ವಿರುದ್ಧ ಪರಿಣಾಮಕಾರಿಯಾಗಿ ಸೇಡು ತೀರಿಸಿಕೊಳ್ಳುವಿರಿ. ಸೋಮಾರಿತನವನ್ನು ತ್ಯಜಿಸಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ವ್ಯವಹಾರದಲ್ಲಿ ಈ ರಾಶಿಯವರಿಗೆ ಎರಡು ಪಟ್ಟು ಲಾಭ ಸಿಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.