ಸೋಷಿಯಲ್​ ಮೀಡಿಯಾದಲ್ಲೇ ಕಂಬನಿ ಮಿಡಿದ ಸ್ಟಾರ್​ ನಟರು​ ...

Sanchari Vijay - Final
Published on

ಬೆಂಗಳೂರು: ಕನ್ನಡ ಚಿತ್ರರಂಗ ಪ್ರತಿಭಾವಂತ ನಟ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್​ ಅವರ ಅಂತ್ಯಕ್ರಿಯೆ ಇದೀಗ ಅವರ ಹುಟ್ಟೂರಾದ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಮುಗಿದಿದೆ. ಕಡೂರು ಮತ್ತು ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಮತ್ತು ಅಭಿಮಾನಿಗಳು ಸಂಚಾರಿ ವಿಜಯ್​ಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಸಂಚಾರಿ ವಿಜಯ್​ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಶಿವರಾಜಕುಮಾರ್​, ಧನಂಜಯ್​, ಸತೀಶ್​ ನೀನಾಸಂ, ಪಾರುಲ್​ ಯಾದವ್​, ರಂಗಾಯಣ ರಘು, ರಾಜೇಶ್​ ನಟರಂಗ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಕೆಲವರು ಭಾಗವಹಿಸಿದ್ದು ಬಿಟ್ಟರೆ, ಮಿಕ್ಕಂತೆ ಕನ್ನಡ ಚಿತ್ರರಂಗದ ಬಹಳಷ್ಟು ಸ್ಟಾರ್​ ನಟ-ನಟಿಯರು ಕಾಣಿಸಲೇ ಇಲ್ಲ.

ಈ ಸಂದರ್ಭದಲ್ಲಿ ಸುದೀಪ್​, ದರ್ಶನ್, ಪುನೀತ್​ ರಾಜಕುಮಾರ್​, ರಕ್ಷಿತ್​ ಶೆಟ್ಟಿ, ಗಣೇಶ್​, ಧ್ರುವ ಸರ್ಜಾ ಮುಂತಾದವರು ಅಂತಿಮ ದರ್ಶನ ಪಡೆಯಬಹುದು ಎಂಬ ನಿರೀಕ್ಷಿಸಲಾಗಿತ್ತಾದರೂ, ಯಾವೊಬ್ಬ ಸ್ಟಾರ್​ ನಟ ಸಹ ಅಂತಿಮ ದರ್ಶನದಲ್ಲಿ ಕಾಣಲಿಲ್ಲ. ಬದಲಿಗೆ, ಹಲವರು ಸೋಷಿಯಲ್​ ಮೀಡಿಯಾದಲ್ಲೇ ಸಂಚಾರಿ ವಿಜಯ್​ ನಿಧನಕ್ಕೆ ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net