ತಾರೆಯರ ನವರಾತ್ರಿ | ಮದುವೆಯ ಬಳಿಕ ಗೊಂಬೆ ಕೂರಿಸುತ್ತೇನೆ: ಪ್ರಿಯಾಂಕಾ ತಿಮ್ಮೇಶ್​

Star Dasara
Published on

ನಮ್ಮೂರು ಭದ್ರಾವತಿ. ಗಣೇಶ ಹಬ್ಬ, ದೀಪಾವಳಿ, ದಸರಾ ಹೀಗೆ ಪ್ರತಿ ಹಬ್ಬವನ್ನೂ ಆಚರಿಸುತ್ತೇವೆ. ಮನೆಯಲ್ಲಿ ಸಿಹಿ ಊಟ, ಹೊಸ ಬಟ್ಟೆ ಸರಳ ಆಚರಣೆ ಇರುತ್ತದೆ. ಆಯುಧ ಪೂಜೆಯ ದಿನ ಗಾಡಿಗಳಿಗೆ ಪೂಜೆ ಮಾಡುತ್ತೇವೆ. ಮೈಸೂರಿನ ಬಗ್ಗೆ ನನಗೆ ಅಷ್ಟು ಪರಿಚಯವಿರಲಿಲ್ಲ.

ನಟಿ ಅನುಷಾ ರೈ ನನಗೆ ಒಳ್ಳೆಯ ಗೆಳತಿ. ಮಾರ್ಚ್​ನಲ್ಲಿ ಒಮ್ಮೆ ಆಕೆಯ ಜತೆ ಚಾಮುಂಡಿ ತಾಯಿಯ ದರ್ಶನಕ್ಕೆ ಹೋಗಿದ್ದೆ. ಈಗ ದಸರಾ ಹಬ್ಬದ ಸಮಯದಲ್ಲೂ ದಿಢೀರನೇ ಪ್ಲಾ$ನ್​ ಮಾಡಿಕೊಂಡು ಹೋಗಿದ್ದೆವು. ತಾಯಿಯ ಗರ್ಭಗುಡಿಯ ಬಳಿ ನಿಂತರೆ ಏನೋ ಸಮಾಧಾನ.

ಕಳೆದ ವರ್ಷ ದಸರಾ ಹಬ್ಬದ ಸಮಯದಲ್ಲಿ ಪರಿಚಯದವರ ಮನೆಗೆ ಹೋಗಿದ್ದೆ. ಅವರ ಮನೆಯ ತುಂಬ ಗೊಂಬೆಗಳನ್ನು ಕೂರಿಸಿ ಗೊಂಬೆಗಳ ಮನೆ ಮಾಡಿದ್ದರು. ನನಗೂ ಗೊಂಬೆಗಳನ್ನು ಕೂರಿಸಬೇಕು ಅಂತ ತುಂಬ ಆಸೆ. ಆದರೆ ಈಗ ಸಿನಿಮಾ, ಶೂಟಿಂಗ್​ ಅಂತ ಸಾಧ್ಯವಾಗುತ್ತಿಲ್ಲ. ಮದುವೆಯ ಬಳಿಕ ಗೊಂಬೆಗಳನ್ನು ಕೂರಿಸುವುದನ್ನು ರೂಢಿ ಮಾಡಿಕೊಳ್ಳುತ್ತೇನೆ. ದಸರಾ ಸಮಯದಲ್ಲಿ ರಜೆಯಿರುವ ಕಾರಣ ಸಾಮಾನ್ಯವಾಗಿ ಸಿನಿಮಾಗಳ ಶೂಟಿಂಗ್​ ಇರುವುದಿಲ್ಲ. ಹೀಗಾಗಿ ಇವತ್ತಿನಿಂದ ನಾನು ಏಳು ದಿನಗಳ ಕಾಲ ಲಂಡನ್​ಗೆ ಸೋಲೋಟ್ರಿಪ್​ ಹೋಗುತ್ತಿದ್ದೇನೆ. ಇದೇ ಈ ಬಾರಿಯ ನನ್ನ ದಸರಾ ವಿಶೇಷ.

| ಪ್ರಿಯಾಂಕಾ ತಿಮ್ಮೇಶ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net