ಗೊಂಬೆ ಕೂರಿಸುವುದು ನನಗಿಷ್ಟ: ತಾರೆಯರ ನವರಾತ್ರಿ

Star Dasara
Published on

ನಮ್ಮ ಮನೆಯಲ್ಲಿ ಗೌರಿ-ಗಣೇಶ ಜತೆಗೆ ದಸರಾ ಹಬ್ಬವನ್ನು ಬಹಳ ಗ್ರಾಂಡ್ ಆಗಿ ಆಚರಿಸುತ್ತೇವೆ. ಗೊಂಬೆ ಕೂರಿಸುವ ಸಂಪ್ರದಾಯ ನಮ್ಮ ಮನೆಯಲ್ಲಿದೆ. ನಾನು ಪ್ರತೀ ವರ್ಷ ಒಂದೊಂದು ರೀತಿ ಗೊಂಬೆ ಕೂರಿಸುವ ಪರಿಪಾಠ ಇಟ್ಟುಕೊಂಡಿದ್ದೇನೆ. ಒಮ್ಮೆ ನಕ್ಷತ್ರದ ಆಕಾರದಲ್ಲಿ, ಇನ್ನೊಮ್ಮೆ ತಾವರೆ ಹೂವಿನ ಆಕಾರದಲ್ಲಿ ...

ಹೀಗೆ ಪ್ರತೀ ವರ್ಷ ಒಂದೊಂದು ಆಕಾರದಲ್ಲಿ ಇಡುವುದರ ಜತೆಗೆ, ಹೊಸ ಗೊಂಬೆ ಖರೀದಿಸಿ, ನನ್ನ ಗೊಂಬೆ ಕಲೆಕ್ಷನ್ ಹೆಚ್ಚು ಮಾಡಿಕೊಳ್ಳುತ್ತಿದ್ದೇನೆ. ಗೊಂಬೆಗಳನ್ನು ಕೊಳ್ಳುವುದಷ್ಟೇ ಅಲ್ಲ, ಅದನ್ನು ಕಾಪಾಡೋದು ಸಹ ಬಹಳ ಮುಖ್ಯ. ಹೀಗೆ ಒಂದು ವರ್ಷ ಸುರಕ್ಷಿತವಾಗಿಟ್ಟಿರುವ ಗೊಂಬೆಗಳನ್ನು ತೆಗೆದು ಈ ನವರಾತ್ರಿಯ ಸಂದರ್ಭದಲ್ಲಿ ಸಿಂಗರಿಸಿ ಪ್ರದರ್ಶನಕ್ಕಿಡುವುದು ನನಗೆ ಬಹಳ ಇಷ್ಟವಾದ ಕೆಲಸ.

ಇನ್ನು, ಪ್ರತೀ ವರ್ಷ ನಮ್ಮ ಸೂರ್ಯ ಕಲಾವಿದರಿಂದ ದಸರಾ ಸಂದರ್ಭದಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ‘ಮೋಹಿನಿ ಭಸ್ಮಾಸುರ’ ಬ್ಯಾಲೇ ಪ್ರದರ್ಶನ ಮಾಡುತ್ತಾ ಬಂದಿದ್ದೇವೆ. ಈ ವರ್ಷ ಬೆಂಗಳೂರು, ಮೈಸೂರಲ್ಲದೆ ಇಂದು ಹುಳಿಯಾರಿನಲ್ಲಿ ಕಾರ್ಯಕ್ರಮ ಕೊಡುತ್ತಿದ್ದೇವೆ. ಎಲ್ಲರಿಗೂ ಗೊತ್ತಿರುವಂತೆ ಮೋಹಿನಿ, ವಿಷ್ಣುವಿನ ಅವತಾರ. ಮೋಹಿನಿ ಪಾತ್ರದಲ್ಲಿ ನಾನು ಈ ಬ್ಯಾಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.

| ನಮಿತಾ ರಾವ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net