ಹುಣಸೇಮರದಲ್ಲಿ ಕೋತಿಗಳಿಗೆ ನೇಣು; 2 ಮಂಗಗಳ ಸಾವು, ಇನ್ನೆರಡು ಬಚಾವು: ಇದೆಂಥ ವಿಕೃತಿ?

Monkey
ಕೋತಿಗಳನ್ನು ನೇತು ಹಾಕಲಾಗಿದ್ದ ಮರದ ಬಳಿ ಜಮಾಯಿಸಿದ್ದ ಜನರು
Published on

ಬೀದರ್: ಹುಣಸೇಮರವೊಂದರಲ್ಲಿ ನಾಲ್ಕು ಕೋತಿಗಳಿಗೆ ನೇಣು ಹಾಕಿ ವಿಕೃತಿ ಮೆರೆದಂಥ ಪ್ರಕರಣವೊಂದು ಬೆಳಕಿಗೆ ಬಂದಿದೆ. ನೇಣು ಹಾಕಲಾಗಿದ್ದ ಕೋತಿಗಳ ಪೈಕಿ ಎರಡು ಸಾವಿಗೀಡಾಗಿದ್ದರೆ, ಇನ್ನೆರಡು ಬಚಾವಾಗಿವೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮುರಾಳ ಗ್ರಾಮದಲ್ಲಿ ಈ ಪ್ರಕರಣ ಕಂಡುಬಂದಿದೆ. ಇಲ್ಲಿನ ಹುಣಸೆ ಮರಯೊಂದಕ್ಕೆ ಯಾರೋ ನಾಲ್ಕು ಕೋತಿಗಳಿಗೆ ನೇಣು ಹಾಕಿದ್ದರು. ಮಂಗಗಳನ್ನು ಹಿಡಿದು ಹೊಡೆದು ನೇಣು ಹಾಕಲಾಗಿದ್ದು, ಆ ಪೈಕಿ ಎರಡು ಸಾವಿಗೀಡಾಗಿದ್ದರೆ, ಇನ್ನೆರಡು ತಪ್ಪಿಸಿಕೊಂಡು ಪರಾರಿಯಾಗಿವೆ.

ಗ್ರಾಮದ ಹೊಲದಲ್ಲಿ ಮಂಗಗಳನ್ನು ಹೂಡೆದು ನೇತು ಹಾಕಿದ್ದ ಕಿಡೀಗೆಡಿಗಳ ವಿರುಧ್ಧ ಕಠಿಣವಾದ ಕ್ರಮಕೈಗೂಳ್ಳಬೇಕು ಎಂದು ಬೀದರ್ ಬಜರಂಗದಳ, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಗ್ರಾಮದ ಯುವಕರು ಸಾವಿಗೀಡಾದ ಕೋತಿಗಳ ಅಂತ್ಯಸಂಸ್ಕಾರ ನೆರವೇರಿಸಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net