

ಬೆಂಗಳೂರು: ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಗೌಡ ನಿರ್ದೇಶನ ಮಾಡುತ್ತಿರುವ ಮದಗಜ ಸಿನಿಮಾ ಇದೀ ಎರಡನೇ ಹಂತದ ಶೂಟಿಂಗ್ ಮುಗಿಸಿಕೊಂಡ ಖುಷಿಯಲ್ಲಿದೆ. ಮೈಸೂರಿನಲ್ಲಿ ಭರ್ಜರಿ ಸೆಟ್ಗಳನ್ನು ಹಾಕಿ ಸಾಹಸ ದೃಶ್ಯಗಳು ಮತ್ತು ಮಾತಿನ ಭಾಗದ ಒಂದಷ್ಟು ಚಿತ್ರೀಕರಣವನ್ನೂ ಇದೀಗ ಮುಗಿಸಿಕೊಂಡು ಬೆಂಗಳೂರಿಗೆ ಮರಳಿದೆ.
ಇದನ್ನೂ ಓದಿ: ಅನ್ಲಾಕ್ ಬಳಿಕ ಈಗ ಸಿನಿಮಾಗಳ ಮರುಬಿಡುಗಡೆ ಪರ್ವ!
ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಘಟಾನುಘಟಿ ಕಲಾವಿದರ ದಂಡೇ ಇದೆ. ಅದರಲ್ಲೂ ಟಾಲಿವುಡ್ನ ಖ್ಯಾತ ಖಳ ನಟರೊಬ್ಬರನ್ನು ಕರೆದು ತಂದು ಚಿತ್ರೀಕರಣ ಮಾಡಿಕೊಂಡಿದ್ದಾರೆ.
ಹಾಗಾದರೆ, ಮುಂದಿನ ಶೂಟಿಂಗ್ ಯಾವಾಗ? ಸಿನಿಮಾ ಮುಗೀತಾ? ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಮಹೇಶ್, ‘ಮೈಸೂರಲ್ಲಿ 20 ದಿನದ ಶೂಟಿಂಗ್ ಮುಗಿಯಿತು. ಈ ಮೂಲಕ ಒಟ್ಟಾರೆ ಶೇ. 70 ಭಾಗದ ಸಿನಿಮಾ ಮುಗಿದಂತಾಗಿದೆ. ಇನ್ನುಳಿದ ಶೇ. 30 ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಮಹಾನವಮಿ ಬಳಿಕ ಶೂಟಿಂಗ್ ಶುರುವಾಗಲಿದೆ.