ಮತ್ತೆ ಒಂದಾಯ್ತು 'ಕೃಷ್ಣ ಲೀಲಾ' ಜೋಡಿ; ಮತ್ತೊಂದು ತೆಲುಗು ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್​

Shraddha
Published on

ಬೆಂಗಳೂರು: ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್​ ಇದೀಗ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಮಿಳಿನ ಮಾರಾ ಸಿನಿಮಾ ಅಮೆಜಾನ್​ ಪ್ರೈಂನಲ್ಲಿ ಬಿಡುಗಡೆಗೆ ಸಿದ್ಧವಾದರೆ, ತೆಲುಗಿನಲ್ಲಿ ಹೊಸ ಪ್ರಾಜೆಕ್ಟ್​ವೊಂದನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಶೀರ್ಷಿಕೆಯೂ ಅನಾವರಣಗೊಂಡಿದ್ದು, ‘ನರುಡಿ ಬ್ರತುಕೆ ನಟನಾ’ ಎಂದಿಡಲಾಗಿದೆ.

ವಿಶೇಷ ಏನೆಂದರೆ, ಈ ಹಿಂದೆ ‘ಕೃಷ್ಣ ಆ್ಯಂಡ್​ ಹೀಸ್​ ಲೀಲಾ’ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿತ್ತು. ಆ ಚಿತ್ರದಲ್ಲಿ ಶ್ರದ್ಧಾಗೆ ಸಿದ್ದು ಜೊನ್ನಲಗದ್ದ ನಾಯಕನಾಗಿ ನಟಿಸಿದ್ದರು. ಇದೀಗ ‘ನರುಡಿ ಬ್ರತುಕೆ ನಟನಾ’ ಚಿತ್ರದಲ್ಲಿಯೂ ಈ ಜೋಡಿ ಮತ್ತೆ ಒಂದಾಗುತ್ತಿದೆ.

ರೊಮ್ಯಾಂಟಿಕ್​ ಕಾಮಿಡಿ ಶೈಲಿಯ ಈ ಸಿನಿಮಾಕ್ಕೆ ವಿಮಲ್​ ಕೃಷ್ಣ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸಗಳು ನಡೆಯುತ್ತಿದ್ದು, ನವೆಂಬರ್​ ಮೊದಲ ವಾರದಲ್ಲಿ ಚಿತ್ರೀಕರಣಕ್ಕೆ ತಂಡ ಚಾಲನೆ ನೀಡಲಿದೆ. ಸೂರ್ಯದೇವರ ನಾಗ ವಂಶಿ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net