

ಕನ್ನಡದ ‘ಕಿಸ್’ ಚಿತ್ರದ ಮೂಲಕ 2019ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಹುಡುಗಿ ಶ್ರೀಲೀಲಾ. ಬಳಿಕ ‘ಭರಾಟೆ’, ‘ಬೈಟು ಲವ್’ ಸಿನಿಮಾಗಳಲ್ಲಿ ಮಿಂಚಿದ್ದರು. ಅದರ ನಡುವೆ 2021ರಲ್ಲಿ ‘ಪೆಳ್ಳಿ ಸಂಡಾಡಿ’ ಚಿತ್ರದ ಮೂಲಕ ಟಾಲಿವುಡ್‌ಗೆ ಹಾರಿದ್ದ ಅವರು, ಇದೀಗ ಅಲ್ಲಿಯೇ ಬಿಜಿಯಾಗಿದ್ದಾರೆ. ಈ ವರ್ಷ ರವಿತೇಜ ಜತೆ ಹಿಟ್ ‘ಧಮಾಕಾ’ ಚಿತ್ರದಲ್ಲಿ ನಟಿಸಿದ್ದ ಶ್ರೀಲೀಲಾ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ : ಸಾವಿನ ವದಂತಿಗೆ ತೆರೆ ಎಳೆದ ಕಿರುತೆರೆ ನಟಿ ಜಿಜ್ಞಾಸಾ ಸಿಂಗ್
ನಾಳೆ ರಾಮ್ ಪೋತಿನೇನಿಗೆ ನಾಯಕಿಯಾಗಿರುವ ಪ್ಯಾನ್ ಇಂಡಿಯಾ ‘ಸ್ಕಂದ’ ತೆರೆಗೆ ಬರಲಿದೆ. ಬಳಿಕ ಅ. 19ರಂದು ಬಾಲಯ್ಯ ಮಗಳಾಗಿ ನಟಿಸಿರುವ ‘ಭಗವಂತ್ ಕೇಸರಿ’ ರಿಲೀಸ್ ಆಗಲಿದೆ. ವೈಷ್ಣವ್ ತೇಜ್‌ಗೆ ಜೋಡಿಯಾಗಿ ‘ಆದಿಕೇಶವ’, ಮಹೇಶ್ ಬಾಬು ಜತೆ ‘ಗುಂಟೂರು ಕಾರಂ’, ಪವನ್ ಕಲ್ಯಾಣ್ ನಾಯಕನಾಗಿರುವ ‘ಉಸ್ತಾದ್ ಭಗತ್ ಸಿಂಗ್’, ನಿತಿನ್ ಜತೆ ‘ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ : ನಟ ರವಿತೇಜ ಫ್ಯಾನ್ಸ್ಗೆ ಇಲ್ಲಿದೆ ಸಿಹಿ ಸುದ್ದಿ!
ಹಾಗೇ ವಿಜಯ್ ದೇವರಕೊಂಡ ಹೊಸ ಚಿತ್ರ, ನವೀನ್ ಪೊಲಿಶೆಟ್ಟಿ ಜತೆ ‘ಅನಗನಗಾ ಒಕ ರಾಜು’ ಚಿತ್ರಗಳಿಗೂ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಪ್ರಭಾಸ್ ಮತ್ತು ‘ಸೀತಾರಾಮಂ’ ಖ್ಯಾತಿಯ ನಿರ್ದೇಶಕ ಹನು ರಾಘವಪುಡಿ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಹೊಸ ಚಿತ್ರಕ್ಕೂ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಬೇಕಿದೆ.
-ಏಜೆನ್ಸೀಸ್