ಸಾವಿನ ವದಂತಿಗೆ ತೆರೆ ಎಳೆದ ಕಿರುತೆರೆ ನಟಿ ಜಿಜ್ಞಾಸಾ ಸಿಂಗ್

Untitled design - 2023-09-27T205319.919
Published on

ನವದೆಹಲಿ: ಕಿರುತೆರೆಯ ಜನಪ್ರಿಯ ಧಾರಾವಾಹಿ 'ಥಪಕಿ ಪ್ಯಾರ್ ಕಿ' ವಾಣಿ ಪಾತ್ರಕ್ಕಾಗಿ ಖ್ಯಾತಿ ಗಳಿಸಿದ್ದ ಜಿಜ್ಞಾಸಾ ಸಿಂಗ್ ಇತ್ತೀಚೆಗೆ ನಟನೆಯಿಂದ ದೂರವಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿರುವುದು ಮತ್ತೆ ಆಕೆ ಪ್ರಚಾರದ ಮುನ್ನೆಲೆಗೆ ಬಂದಿದ್ದಾರೆ.

ಜಿಜ್ಞಾಸಾ ಸಿಂಗ್​ ಆನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ಅವರು ಧಾರಾವಾಹಿಯ 2ನೇ ಸೀಸನ್‌ನಿಂದ ನಿರ್ಗಮಿಸಬೇಕಾಯಿತು. ಇವರಿಗೆ ಬದಲಾಗಿ ಪ್ರಾಚಿ ಬನ್ಸಾಲ್ ವಾಣಿ ಪಾತ್ರಕ್ಕೆ ಜೀವ ತುಂಬಿದ್ದರು. ಬಳಿಕ ಜಿಜ್ಞಾಸಾ ಸಿಂಗ್ 'ಶಕ್ತಿ - ಅಸ್ತಿತ್ವ ಕೆ ಎಹಸಾಸ್ ಕಿ' ಸೇರಿದಂತೆ ಇತರ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಒಂದೆರಡು ಸಂಗೀತ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಸ್ವಲ್ಪ ಸಮಯದವರೆಗೆ ಉದ್ಯಮದಿಂದ ದೂರವಿದ್ದ ಕಾರಣಕ್ಕೆ ಜಿಜ್ಞಾಸಾ ಸಿಂಗ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಲಾಗಿತ್ತು. ಈ ಸುದ್ದಿ ಹಲವರು ಶೇರ್​ ಮಾಡಿದ್ದರಿಂದ ವೈರಲ್​ ಆಗಿತ್ತು. ನಂತರ ನೆಟ್ಟಿಗರು ಅಂತಿಮ ನಮನ ಸಲ್ಲಿಸಿದರು. 'ರೆಸ್ಟ್ ಇನ್ ಪೀಸ್', 'ಆರ್‌ಐಪಿ ಜಿಜ್ಞಾಸ' ಮತ್ತು 'ಓಂ ಶಾಂತಿಸೇರಿದಂತೆ ಕೆಲವು ಕಾಮೆಂಟ್‌ಗಳನ್ನು ಹಾಕಿ ಸಂತಾಪ ಸೂಚಿಸಲಾಗಿತ್ತು.

ತನ್ನ ವಿರುದ್ಧದ ಅಪಪ್ರಚಾರಕ್ಕೆ ಪ್ರತಿಕ್ರಿಯಿಸಿರುವ ನಟಿ ತನ್ನ ಪೋಸ್ಟ್‌ನಲ್ಲಿ, ಈ ವೀಡಿಯೊಗಳು ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಅಂತಹ ಸುಳ್ಳು ಮಾಹಿತಿಯನ್ನು ಹರಡುವ ವ್ಯಕ್ತಿಗಳನ್ನು ಪ್ರಶ್ನಿಸಿದ್ದಾರೆ. ಯಾರು ಇದನ್ನು ಹರಡುತ್ತಿದ್ದಾರೆ? ಗೆಳೆಯರೇ, ನಾನು ಬದುಕಿದ್ದೇನೆ. ಈ ನಕಲಿ ಸುದ್ದಿಗಳನ್ನು ಚಾನೆಲ್‌ಗಳಲ್ಲಿ ಹರಡುವುದನ್ನು ನಿಲ್ಲಿಸಿ ಎಂದು ಅವರು ಬರೆದುಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net