

ಹೈದರಾಬಾದ್: ಕನ್ನಡದಲ್ಲಿ ಸಿನಿ ವೃತ್ತಿ ಬದುಕನ್ನು ಆರಂಭಿಸಿ, ಇಂದು ತೆಲುಗು ಚಿತ್ರರಂಗದಲ್ಲಿ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿರುವ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಭಗವಂತ ಕೇಸರಿ ಚಿತ್ರದಲ್ಲಿ ಸೂಪರ್ಸ್ಟಾರ್ ಬಾಲಕೃಷ್ಣ ಅವರ ಮಗಳ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಸದ್ಯ ಆದಿಕೇಶವ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.
ತಮ್ಮ ಪಾತ್ರ ಡಿಮ್ಯಾಂಡ್ ಮಾಡಿದರೆ ಲಿಪ್ಲಾಕ್ ದೃಶ್ಯಗಳಲ್ಲಿ ನಟಿಸುವಿರಾ? ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಶ್ರೀಲೀಲಾ ಅವರಿಗೆ ವರದಿಗಾರರೊಬ್ಬರಿಂದ ಪ್ರಶ್ನೆ ಎದುರಾಗಿತ್ತು. ಈ ವೇಳೆ ಉತ್ತರ ನೀಡಿದ್ದ ಶ್ರೀಲೀಲಾ, ನಾನು ಲಿಪ್ಲಾಕ್ ದೃಶ್ಯಗಳಲ್ಲಿ ನಟಿಸುವುದಿಲ್ಲ ಮತ್ತು ಯಾವುದೇ ನಟರ ಜತೆ ಲಿಪ್ಲಾಕ್ ಮಾಡುವುದಿಲ್ಲ ಎಂದಿದ್ದರು. ಒಂದು ವೇಳೆ ನಾನು ಮೊದಲ ಬಾರಿಗೆ ಲಿಪ್ಕಿಸ್ ನೀಡಿದರೆ ಅವರು ನನ್ನ ಪತಿಯಾಗಿರುತ್ತಾರೆ ಎಂದು ಹೇಳಿದ್ದರು.
ಲಿಪ್ಕಿಸ್ ಬಗ್ಗೆ ಶ್ರೀಲೀಲಾ ನೀಡಿರುವ ಹೇಳಿಕೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಾಮೆಂಟ್ಗಳ ಮೂಲಕ ನಾಯಕಿಯ ಸಹಹ ಗುಣವನ್ನು ಬಹಿರಂಗಪಡಿಸಿದ್ದಾರೆ. ಮೊದಲ ಮೊದಲು ಹೀಗೇ ಹೇಳುತ್ತಾರೆ. ದಿನಗಳ ಕಳೆಯುತ್ತಾ ಹೋದಂತೆ ಸ್ಕ್ರಿಪ್ಟ್ ಬೇಡಿಕೆಯಿದೆ, ದೃಶ್ಯಕ್ಕೆ ಬೇಡಿಕೆಯಿದೆ ಮತ್ತು ಸಂಭಾವನೆ ಹೆಚ್ಚು ಎಂದೆಲ್ಲಾ ಹೇಳುತ್ತಾರೆ. ಈ ಹಿಂದೆ ಅನೇಕ ಜನರು ಇದನ್ನೇ ಹೇಳಿದ್ದಾರೆ. ಆ ಬಳಿಕ ಲಿಪ್ಲಾಕ್ ದೃಶ್ಯಗಳು ಮಾತ್ರವಲ್ಲದೆ, ಅಶ್ಲೀಲ ದೃಶ್ಯಗಳಲ್ಲೂ ನಟಿಸಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಇದರ ನಡುವೆ ಶ್ರೀಲೀಲಾ, ಲಿಪ್ಲಾಕ್ ಮಾಡಿರುವ ವಿಡಿಯೋವೊಂದನ್ನು ನೆಟ್ಟಿಗರು ಇದೀಗ ವೈರಲ್ ಮಾಡುತ್ತಿದ್ದಾರೆ. ಕಿಸ್ ಹೆಸರಿನ ಚಿತ್ರದ ಮೂಲಕವೇ ಶ್ರೀಲೀಲಾ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಲ್ಲದೆ, ಸಿನಿ ವೃತ್ತಿಬದುಕನ್ನು ಆರಂಭಿಸಿದರು. ಇದೇ ಕಿಸ್ ಚಿತ್ರ ತೆಲುಗಿನಲ್ಲಿ ಐ ಲವ್ ಯು ಈಡಿಯಟ್ ಹೆಸರಿನಲ್ಲಿ ಬಿಡುಗಡೆ ಆಯಿತು. ಈ ಚಿತ್ರದ ಹಾಡೊಂದರಲ್ಲಿ ಶ್ರೀಲೀಲಾ ನಾಯಕನ ಜತೆ ಲಿಪ್ಲಾಕ್ ಮಾಡುತ್ತಾರೆ.
ಇದೀಗ ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ, ನಾನು ಯಾರಿಗೂ ಸಿನಿಮಾದಲ್ಲಿ ಲಿಪ್ ಕಿಸ್ ಮಾಡುವುದಿಲ್ಲ ಎಂದು ಹೇಳಿಬಿಟ್ಟು ತಮ್ಮ ಮೊದಲ ಸಿನಿಮಾದಲ್ಲೇ ಶ್ರೀಲೀಲಾ ಲಿಪ್ ಕಿಸ್ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. (ಏಜೆನ್ಸೀಸ್)