ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾ ಗರ್ಭಿಣಿಯಾಗಿದ್ರಾ? ಇದೇ ವಿಚಾರಕ್ಕೆ ನಡೆದಿತ್ತಾ ಜಗಳ?

Disha 1
Published on

ಮುಂಬೈ: ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳಲ್ಲಿ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಹ ನೇಣಿಗೆ ಶರಣಾಗಿದ್ದರಿಂದ ಸಾಕಷ್ಟು ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಆತ್ಮಹತ್ಯೆ ಪ್ರಕರಣಗಳಲ್ಲಿ ನಟ ಸೂರಜ್​ ಪಾಂಚೋಲಿ ಹಾಗೂ ಸಲ್ಮಾನ್​ ಖಾನ್​ ಹೆಸರು ತಳುಕು ಹಾಕಿಕೊಂಡಿದೆ.

ದಿಶಾ ಸಾಲಿಯಾನ್​ ಈ ಮುಂಚೆ ಗರ್ಭಿಣಿಯಾಗಿದ್ದರು. ಅದಕ್ಕೆ ಕಾರಣ ಸೂರಜ್​ ಪಾಂಚೋಲಿ. ಹೀಗಾಗಿ ಇದೇ ವಿಚಾರವಾಗಿ ಬಹು ವರ್ಷಗಳಿಂದ ಸುಶಾಂತ್​ ಮತ್ತು ಸೂರಜ್​ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ, ಸೂರಜ್​ ಬೆನ್ನಿಗೆ ನಟ ಸಲ್ಮಾನ್​ ಖಾನ್ ನಿಂತಿದ್ದರು ಎಂಬ ಹೊಸ ಸುದ್ದಿಯೊಂದು ಬಾಲಿವುಡ್​ ಗಲ್ಲಿಯಲ್ಲಿ ಹರಿದಾಡುತ್ತಿದೆ.​

ಈ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿರುವ ಸೂರಜ್​, ಸುಶಾಂತ್​ರೊಂಗಿಗೆ ಯಾವಾಗ ಗಲಾಟೆ ನಡೆದಿತ್ತು? ನಾನು ಎಂದಿಗೂ ಅವರೊಂದಿಗೆ ವಾಗ್ವಾದ ಮಾಡಿಯೇ ಇಲ್ಲ. ಈ ಮುಂಚೆಯೂ ನಾನಿದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಇನ್ನು ಸಲ್ಮಾನ್​ ಖಾನ್​ ಅವರು ನನ್ನ ಜೀವನದಲ್ಲೇಕೆ ಮಧ್ಯಸ್ಥಿಕೆ ವಹಿಸಬೇಕು? ಅವರಿಗೆ ಮಾಡಲು ಬೇರೆ ಕೆಲಸವಿಲ್ಲವೇ? ನಿಜ ಹೇಳಬೇಕೆಂದರೆ ದಿಶಾ ಯಾರೆಂದು ನನಗೆ ಗೊತ್ತೇ ಇಲ್ಲ. ನನ್ನ ಜೀವನದಲ್ಲಿ ನಾನೆಂದು ಅವರನ್ನು ಭೇಟಿ ಮಾಡಿಯೇ ಇಲ್ಲ ಎಂದು ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿರುವ ಸೂರಜ್​, ಸುಶಾಂತ್​ ಸಾವಿನ ಬಳಿಕವಷ್ಟೇ ದಿಶಾ ಯಾರೆಂದು ನನಗೆ ಗೊತ್ತಾಯಿತು. ಈ ಪ್ರಕರಣಗಳಲ್ಲಿ ಇನ್ನೊಬ್ಬರ ಕುಟುಂಬವನ್ನು ಎಳೆದು ತರುವುದು ಸರಿಯಿಲ್ಲ. ಯಾರೋ ಒಬ್ಬ ತನ್ನ ವ್ಯಯಕ್ತಿಕ ಫೇಸ್​ಬುಕ್​ ಖಾತೆಯಲ್ಲಿ ಕೆಲಸಕ್ಕೆ ಬಾರದ ವಿಚಾರಗಳನ್ನು ಬರೆದುಕೊಳ್ಳುತ್ತಾರೆ. ಇದನ್ನು ಸಿನಿಮಾ ಕತೆಗೆ ಬಳಸಿಕೊಳ್ಳಿ ಎಂದು ಅಪಪ್ರಚಾರ ಮಾಡುವವರ ವಿರುದ್ಧ ಸೂರಜ್​ ಕಿಡಿಕಾರಿದ್ದಾರೆ.

ಯಾರೋ ಒಬ್ಬರು ನಿನ್ನ ವಿರುದ್ಧ ಕೆಟ್ಟದಾಗಿ ಬರೆದು ಆನ್​ಲೈನ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ನಿನ್ನನ್ನು ವಿಲನ್​ ಆಗಿ ಬಿಂಬಿಸುತ್ತಿದ್ದಾರೆ ಎಂದು ತಂದೆಯೇ ಹೇಳಿದಾಗ ನಾನು ಜಗತ್ತಿಗೆ ವಿರುದ್ಧವಾಗಿರಬಹುದೇನೋ ಎಂದು ಭಾವಿಸುತ್ತದೆ. ಮೊದಲೇ ಸುಶಾಂತ್​ ಇನ್ನಿಲ್ಲ ಎಂಬ ನೋವು ಕಾಡುತ್ತಿರುವಾಗ, ಕೆಲ ಮಂದಿ ಅವನ ಹೆಸರನ್ನು ತಪ್ಪು ಕಾರಣಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಯಾರೂ ಏನೇ ಬರೆಯಲಿ ಇಂದು ಕೆಲವೇ ಕ್ಷಣಗಳಲ್ಲಿ ವೈರಲ್​ ಆಗಿಬಿಡುತ್ತದೆ. ಆದರೆ, ಜನರು ಸತ್ಯ ಹುಡುಕುವ ಗೋಜಿಗೆ ಹೋಗುವುದಿಲ್ಲ. ಬದಲಾಗಿ ಬರೆದಿದ್ದೇ ಸತ್ಯವೆಂದು ತಿಳಿದುಬಿಡುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ನನಗೆ ಬೆಂಬಲ ವ್ಯಕ್ತವಾದ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಧೈರ್ಯವಾಗಿರಿ, ಊಹಾಪೋಹಗಳಿಗೆ ಕುಗ್ಗದಿರಿ, ಇದೊಂದು ಕಷ್ಟದ ಸಮಯವಾಗಿದ್ದು, ಕೆಲಸವಿಲ್ಲದ ಮಂದಿ ವದಂತಿಗಳನ್ನು ಹರಿಬಿಡುತ್ತಿದ್ದಾರೆ ಎಂದು ಧೈರ್ಯ ತುಂಬಿದಂತಹ ಒಳ್ಳೆಯ ಮಂದಿಯು ಇದ್ದಾರೆ ಎಂದು ಸೂರಜ್​ ಹೇಳಿಕೊಂಡಿದ್ದಾರೆ.

ಮುಂಚಿನಿಂದಲೂ ನನಗೂ ಸುಶಾಂತ್​ಗೂ ಆಗಿ ಬರುತ್ತಿಲ್ಲ ಎಂಬುದು ಅಕ್ಷರಶಃ ಸುಳ್ಳು. ಸುಶಾಂತ್​ ನನಗಿಂತಲೂ ಹಿರಿಯ ಹಾಗೂ ಹೆಚ್ಚು ಯಶಸ್ಸು ಕಂಡವರು. ನಾನು ಅವರೊಂದಿಗೆ ಸ್ಪರ್ಧೆಗೂ ಇಳಿಯುವಷ್ಟು ಇರಲಿಲ್ಲ. ಏಕೆಂದರೆ ಆಗಲೇ ಸುಶಾಂತ್​ ಮೀರಿ ಬೆಳೆದಿದ್ದರು. ಅವರಿಗೆ ನಾನು ಎಲ್ಲಿಯೂ ಬೆದರಿಕೆ ಹಾಕಿಲ್ಲ. ಅವರು ನನ್ನನ್ನು ಕಿರಿಯ ಸಹೋದರನಂತೆ ಕಾಣುತ್ತಿದ್ದರು. ಭೇಟಿಯಾದಾಗಲೆಲ್ಲ ಸಿನಿಮಾ ಮತ್ತು ಫಿಟ್​ನೆಶ್​ ಬಗ್ಗೆ ಮಾತ್ರ ಮಾತನಾಡುತ್ತಿದ್ದೆವು ಎಂದು ಸೂರಜ್​ ವಿವಾದಕ್ಕೆ ತೆರೆ ಎಳೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net