ಬೆಂಗಳೂರು: ನಟಿ ಹಾಗೂ ಬಿಕಿನಿ ಕ್ರೀಡಾಪಟು ಆಗಿರುವ ಚಿತ್ರಾಲ್ ರಂಗಸ್ವಾಮಿ ಅವರು ತಮ್ಮ ಇತ್ತೀಚಿನ ಬಿಕಿನಿ ಉಡುಗೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಚಿತ್ರಾಲ್ ರಂಗಸ್ವಾಮಿ ಅವರು ಮೊದಲ ಬಾರಿಗೆ ಬಿಕಿನಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕುರಿತಾಗಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅವರು ಇದು ನನ್ನ ಮೊದಲ ರಾಜ್ಯ ಮಟ್ಟದ ಬಿಕಿನಿ ಬಾಡಿ ಬಿಲ್ಡಿಂಗ್ ಸ್ಪರ್ಧೆ. ಇತ್ತೀಚೆಗೆ ಬಿಕಿನಿ ವರ್ಗ ಮಹಿಳೆಯರನ್ನು ಗುರಿಯಾಗಿರಿಸಿಕೊಂಡಿದೆ. ಓರ್ವ ನಟಿಯಾಗಿ ನಾನಿದನ್ನು ವೃತ್ತಿಪರಳಾಗಿ ಮಾಡಲಾಗುತ್ತಿಲ್ಲ. ಇಂದಿನ ಕೆಳಮಟ್ಟದ ಆಲೋಚನೆ ಇರುವ ಜನರ ನಡುವೆ ಬಿಕಿನಿ ಸ್ಪರ್ಧಾಳು ಆಗಲು ನಿರ್ಧರಿಸುವುದು ತುಂಬಾನೇ ಕಷ್ಟ ಎಂದಿದ್ದಾರೆ.
ನಮ್ಮ ಸಂಪ್ರದಾಯದಲ್ಲಿ ಮಗಳು ಬಿಕಿನಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಾಳೆ ಅಂದರೆ ಯಾರು ಸಹ ಒಪ್ಪುವುದಿಲ್ಲ. ಆದರೆ, ನನ್ನ ತಾಯಿ ಮತ್ತು ಸಹೋದರಿ ಇತರರಿಗಿಂತ ತುಂಬಾ ವಿಭಿನ್ನರು. ನನ್ನ ಇಚ್ಛೆಗೆ ಅಡ್ಡಿಪಡಿಸಲದೇ ಬೆಂಬಲವಾಗಿ ನಿಂತರು. ಜನರು ಏನೇ ಮಾತನಾಡಿದರೂ ಅದರ ಬಗ್ಗೆ ಯೋಚಿಸದೇ ನನಗೆ ಪ್ರೋತ್ಸಾಹ ನೀಡಿದ ತಾಯಿ ಮತ್ತು ಸಹೋದರಿಗೆ ಧನ್ಯವಾದಗಳು ಮತ್ತು ನನಗೆ ತರಬೇತಿ ನೀಡಿದ ನನ್ನ ಕೋಚ್ ರಘು ದಮುತಂತ್ರಿಗೂ ಧನ್ಯವಾದಗಳು ಎಂದು ಚಿತ್ರಾಲ್ ಹೇಳಿದ್ದಾರೆ.
ಅಲ್ಲದೆ, ಬಿಕಿನಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬಾಡಿ ಶೇಪ್ ಮತ್ತು ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ ಎಂದಿದ್ದಾರೆ. ಅದರಲ್ಲೂ ದೇಹದ ಕೆಳಭಾಗ ವೀ ಶೇಪ್ನಲ್ಲೇ ಇರಬೇಕೆಂದು ಹೇಳಿದ್ದು, ಸಾಕಷ್ಟು ವಿಚಾರಗಳನ್ನು ಇನ್ಸ್ಟಾಗ್ರಾಂನಲ್ಲಿ ಚಿತ್ರಾಲ್ ಹಂಚಿಕೊಂಡಿದ್ದಾರೆ.

ಸಿಕ್ಕಾಪಟ್ಟೆ ಟ್ರೋಲ್ ಆದ ಚಿತ್ರಾಲ್
ಇನ್ನು ಚಿತ್ರಾಲ್ ಅವರ ಉಡುಗೆ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಕೆಲವೇ ಮಂದಿ ಟ್ರೋಲ್ ಮಾಡಿದ್ದು, ಇನ್ನು ಏನೇನು ತೋರಿಸ್ತೀರೋ ಆ ದೇವರಿಗೆ ಗೊತ್ತು. ಅಷ್ಟಾದ್ರೂ ಯಾಕ್ ಹಾಕೋಂಡಿದ್ದೀಯಾ ತಾಯಿ ಎಂದು ನೆಟ್ಟಿನಗೊಬ್ಬ ಕಾಮೆಂಟ್ ಮಾಡಿದ್ದಾರೆ. ಆದರೆ, ಹೆಚ್ಚು ಮಂದಿ ಚಿತ್ರಾಲ್ ಅವರ ಬೆನ್ನಿಗೆ ನಿಂತಿದ್ದಾರೆ. ನಿಮ್ಮ ಧೈರ್ಯ ಮೆಚ್ಚಲೇಬೇಕು. ಯಾರು ಏನೆ ಅಂದರೂ ನಿಮ್ಮ ಪ್ರಯತ್ನವನ್ನು ಮಾತ್ರ ನಿಲ್ಲಿಸಿಬೇಡಿ ಸಹೋದರಿ, ಹೀಗೆ ಮುಂದುವರಿಯಿರಿ ಮತ್ತಷ್ಟು ಯಶಸ್ಸು ನಿಮ್ಮ ಬೆನ್ನ ಹಿಂದೆ ಬರಲಿ ಎಂದು ಆಶಿಸಿದ್ದಾರೆ. ನಿಮ್ಮ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹಾರೈಸಿದ್ದಾರೆ.