‘ಶುಗರ್ ಫ್ಯಾಕ್ಟರಿ’ಗಾಗಿ ಗೋವಾದಲ್ಲಿ ಸೋನಲ್!

Sonal Monthero
Published on

ಬೆಂಗಳೂರು: ‘ಡಾರ್ಲಿಂಗ್’ ಕೃಷ್ಣ, ಸೋನಲ್ ಮೊಂತೆರೋ, ಅದ್ವಿತಿ ಶೆಟ್ಟಿ ಸದ್ಯ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ. ಅರೇ ಇವರೇನು ಅಲ್ಲಿಗೆ ಜಾಲಿ ಟ್ರಿಪ್​ಗೆ ಹೋದ್ರಾ? ಎಂಬ ಪ್ರಶ್ನೆ ಬರಬಹುದು. ಹಾಗೇನು ಇಲ್ಲ. ಅವರು ಹೋಗಿದ್ದು ‘ಶುಗರ್ ಫ್ಯಾಕ್ಟರಿ’ಗೆ! ‘ಶುಗರ್ ಫ್ಯಾಕ್ಟರಿ’ ಚಿತ್ರದ ಚಿತ್ರೀಕರಣ ಗೋವಾದ ಹಲವೆಡೆ ನಡೆಯುತ್ತಿದೆ.

ಅಲ್ಲಿನ ಕಲರ್​ಫುಲ್ ಲೊಕೇಷನ್ ಮತ್ತು ಕಡಲ ತೀರದಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಮೂರು ಹಾಡುಗಳು, ಒಂದು ಸಾಹಸ ದೃಶ್ಯ ಮತ್ತೊಂದಿಷ್ಟು ಮಾತಿನ ಭಾಗದ ಶೂಟಿಂಗ್ ನಡೆಯಲಿದೆ. ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿರ್ದೇಶನದಲ್ಲಿ ‘ಶುಗರ್ ಫ್ಯಾಕ್ಟರಿ’ ಚಿತ್ರ ಸಿದ್ಧವಾಗುತ್ತಿದ್ದು, ಒಟ್ಟು ಏಳು ಹಾಡುಗಳ ಪೈಕಿ ಮುರು ಹಾಡುಗಳನ್ನು ಗೋವಾದಲ್ಲಿ ಚಿತ್ರೀಕರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net