'ಯುವರತ್ನ' ಪರವಹಿಸಿದ ಕಿಚ್ಚ ಸುದೀಪ್​, ಯಶ್​; ಚಿತ್ರಮಂದಿರಗಳಿಗೆ ಶೇ. 50 ಆಸನ ಭರ್ತಿ ನಿರ್ಬಂಧ ವಿರುದ್ಧ ದನಿಗೂಡಿಸುತ್ತಿರುವ ಸ್ಯಾಂಡಲ್​ವುಡ್​

Feature
Published on

ಬೆಂಗಳೂರು: ಗುರುವಾರವಷ್ಟೇ ಬಿಡುಗಡೆ ಆಗಿರುವ 'ಯುವರತ್ನ' ಸಿನಿಮಾ ಇದೀಗ ಪೈರಸಿ ಬಳಿಕ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದು, 'ಯುವರತ್ನ' ಪರ ಈಗ ಚಿತ್ರರಂಗದ ಘಟಾನುಘಟಿಗಳು ದನಿ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕರೊನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗಷ್ಟೇ ಅವಕಾಶ ನೀಡಿ ಸರ್ಕಾರ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ, 'ಯುವರತ್ನ' ಪರ ಅಭಿಯಾನವೊಂದು ಆರಂಭಗೊಂಡಿದ್ದು, ಟ್ಟಿಟರ್​ನಲ್ಲಿ ಅದೀಗ ಇಂಡಿಯಾ ಟ್ರೆಂಡಿಂಗ್​ನಲ್ಲಿ ಮುಂಚೂಣಿಯಲ್ಲಿದೆ.

ಶೇ. 50 ಆಸನ ಭರ್ತಿಗಷ್ಟೇ ಅವಕಾಶ ನೀಡಿ ನಿರ್ಬಂಧ ಹೇರಿರುವುದು ಈ ವಾರವಷ್ಟೇ ಬಿಡುಗಡೆ ಆಗಿರುವ ಯುವರತ್ನ ಸಿನಿಮಾಗಷ್ಟೇ ಅಲ್ಲದೇ ಇಡೀ ಚಿತ್ರರಂಗಕ್ಕೇ ಮಾರಕ ಎಂದು ಖ್ಯಾತ ನಟರಾದ ಶಿವರಾಜ್​ಕುಮಾರ್, ಕಿಚ್ಚ ಸುದೀಪ್​, ಯಶ್​, ಜಗ್ಗೇಶ್​ ಅವರು ದನಿ ಎತ್ತಿದ್ದಾರೆ. ಜತೆಗೆ ಸಿನಿರಂಗಕ್ಕೆ ಅನುಕೂಲವಾಗುವಂತೆ ನಿರ್ಬಂಧವನ್ನು ಸಡಿಲಗೊಳಿಸಬೇಕು ಎಂಬುದಾಗಿ ಕನ್ನಡ ಚಿತ್ರರಂಗದ ಖ್ಯಾತ ನಟರು, ನಿರ್ಮಾಪಕರೆಲ್ಲ ಸೋಷಿಯಲ್ ಮೀಡಿಯಾ ಮೂಲಕ ಒತ್ತಾಯಿಸಲಾರಂಭಿಸಿದ್ದಾರೆ. ಈ ಅಭಿಯಾನ ಈಗ ಟ್ರೆಂಡಿಂಗ್​ನಲ್ಲಿದ್ದು, ಸಿನಿಪ್ರಿಯರ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net