ಬಿಗ್​ಬಾಸ್​ ಮನೆಯ ಬೆಡ್​ರೂಮ್​ ಒಳಗೆ ಹಾವು ಎಂಟ್ರಿ... ಗಾರ್ಡನ್​ ಏರಿಯಾಗೆ ಓಡಿದ ಸ್ಪರ್ಧಿಗಳು! Bigg Boss house

Bigg Boss house
Published on

Bigg Boss house : ಬಿಗ್ ಬಾಸ್ ಎಂಬುದು ಒಂದು ಜನಪ್ರಿಯ ರಿಯಾಲಿಟಿ ಶೋ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ವರ್ಷಕ್ಕೊಮ್ಮೆ ಪ್ರಸಾರವಾಗುತ್ತದೆ. ಅಪರಿಚಿತರು ಒಟ್ಟಿಗೆ ವಾಸಿಸುವುದು ಮತ್ತು ಅವರಿಗೆ ನೀಡಲಾದ ಕೆಲಸಗಳನ್ನು ಮಾಡುವುದು ಈ ಕಾರ್ಯಕ್ರಮ ಥೀಮ್​.

ತಾಜಾ ಸಂಗತಿ ಏನೆಂದರೆ, ಹಿಂದಿ ಆವೃತ್ತಿಯ ಬಿಗ್ ಬಾಸ್ ಸೀಸನ್ 19ರ ಕುರಿತಾದ ವರದಿಯೊಂದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅದು ಕೂಡ ಬಿಗ್ ಬಾಸ್ ಮನೆಗೆ ಆಗಮಿಸಿದ ವಿಶೇಷ ಅತಿಥಿಯ ಬಗ್ಗೆ. ಅಷ್ಟಕ್ಕೂ ದೊಡ್ಮನೆ ಪ್ರವೇಶಿಸಿದ ಅತಿಥಿ ವೈಲ್ಡ್ ಕಾರ್ಡ್ ಎಂಟ್ರಿ ಏನಲ್ಲ. ಹಾಗಾದರೆ, ಆ ಅತಿಥಿ ಯಾರು? ಯಾರೆಂದರೆ, ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ದೊಡ್ಮನೆಗೆ ಬಂದು ಅತಿಥಿ ಹಾವು.

ಹೌದು, ಬಿಗ್​ಬಾಸ್​ ಸೀಸನ್​-19ನ ದೊಡ್ಮನೆಗೆ ಹಾವು ಪ್ರವೇಶಿಸಿದೆ. ಮನೆಯ ಮಲಗುವ ಕೋಣೆಯಲ್ಲಿ ಹಾವು ಕಂಡುಬಂದಿದೆ ಎಂದು ವರದಿಯಾಗಿದೆ. ಸ್ಪರ್ಧಿ ಗೌರವ್ ಖನ್ನಾ ಮೊದಲು ಹಾವನ್ನು ಗುರುತಿಸಿದರು. ತಕ್ಷಣ ಇತರರಿಗೆ ಮಾಹಿತಿ ನೀಡಿದರು. ಸುರಕ್ಷತಾ ದೃಷ್ಟಿಯಿಂದ ಎಲ್ಲರೂ ಉದ್ಯಾನಕ್ಕೆ ತೆರಳುವಂತೆ ಬಿಗ್​ಬಾಸ್​ ಇದೇ ಸಮಯದಲ್ಲಿ ಹೇಳಿತು. ಈ ವೇಳೆ ಸ್ಪರ್ಧಿ ಮೃದುಲ್ ತಿವಾರಿ ಅವರು ಹಾವನ್ನು ಹಿಡಿದು ಬಾಟಲಿಯಲ್ಲಿ ಹಾಕಿಕೊಂಡರು.

ಅಂದಹಾಗೆ, ಬಿಗ್ ಬಾಸ್ ಮನೆಗೆ ಹಾವು ಪ್ರವೇಶಿಸಿದ ವರದಿಗಳು ಬಂದಿರುವುದು ಇದೇ ಮೊದಲಲ್ಲ. ಹಿಂದಿನ ಸೀಸನ್‌ಗಳಲ್ಲಿಯೂ ಇದೇ ರೀತಿ ಹಾವುಗಳು ಕಾಣಿಸಿಕೊಂಡಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆದರೆ, ವಿಡಿಯೋಗಳು ನಕಲಿ ಮತ್ತು ಸ್ಪರ್ಧಿಗಳೆಲ್ಲರು ಸುರಕ್ಷಿತವಾಗಿದ್ದಾರೆ ಎಂದು ಬಿಗ್ ಬಾಸ್ ಈ ಹಿಂದೆ ಸ್ಪಷ್ಟಪಡಿಸಿತ್ತು.

ಇನ್ನು ಈ ಸೀಸನ್‌ನಲ್ಲಿ ಮನೆಗೆ ಹಾವು ಪ್ರವೇಶಿಸಿದ ವರದಿಗಳ ಬಗ್ಗೆ ಹಿಂದಿಯ ಬಿಗ್ ಬಾಸ್ ತಂಡ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net