ಹೈದರಾಬಾದ್: ಸಾಮಾನ್ಯ ವ್ಯಕ್ತಿ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಗಬೇಕು ಅಂದರೆ ಅದು ಅಷ್ಟು ಸುಭವಲ್ಲ. ಆದರೆ, ಸಿನಿತಾರೆಯರ ಮಕ್ಕಳು ಮಾತ್ರ ಚಿತ್ರರಂಗಕ್ಕೆ ಕಾಲಿಡೋದು ಸುಲಭ. ಹೀಗಿದ್ದರೂ, ಅಂತಹ ಸಿನಿತಾರೆಯರ ಎಲ್ಲಾ ಮಕ್ಕಳಿಗೂ ಅವರ ತಂದೆ-ತಾಯಿಯಂತೆ ಟ್ಯಾಲೆಂಟ್ ಇದ್ದು ಸಿನಿರಂಗಕ್ಕೆ ಬಂದಿದ್ದಾರೆ, ಜತೆಗೆ ಉಳಿದುಕೊಂಡಿದ್ದಾರೆ, ಹೆಸರು ಮಾಡುತ್ತಿದ್ದಾರೆ ಎನ್ನಲು ಸಾಧ್ಯವಿಲ್ಲ. ಇನ್ನು, ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿ ಮಕ್ಕಳು ಬಾಲ ಕಲಾವಿದರಾಗಿ ಗುರುತಿಸಿಕೊಂಡು, ಬಳಿಕ ನಾಯಕ-ನಾಯಕಿಯರಾಗಿ ಮಿಂಚುತ್ತಿರುವದು ಹೆಚ್ಚಾಗಿದೆ.