

ಬೆಂಗಳೂರು: ವಿನಯ್ ರಾಜಕುಮಾರ್ ಅಭಿನಯದ '10' ಬಿಡುಗಡೆಯಾಗಿದೆ. 'ಪೆಪೆ', 'ಅಂದೊಂದಿತ್ತು ಕಾಲ' ಚಿತ್ರಗಳು ಬಿಡುಗಡೆಯಾಗುವುದಕ್ಕೆ ತಯಾರಿ ನಡೆಸಿವೆ. ಈ ಮಧ್ಯೆ, ವಿನಯ್ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಉತ್ತರ ಸಿಕ್ಕಿದೆ.
ಇದನ್ನೂ ಓದಿ: ಈ ವರ್ಷ ನಂದೇ … ಹಾಗಂತ ಭೂಮಿ ಪೆಡ್ನೇಕರ್ ಹೇಳಿದ್ಯಾಕೆ?
ವಿನಯ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಈ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದಾರಂತೆ. ಈ ಚಿತ್ರಕ್ಕೆ ಪ್ರಸನ್ನ ಕಥೆ ಬರೆದಿದ್ದು, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.
ಮೈಸೂರು ರಮೇಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದು, ಸಭಾ ಕುಮಾರ್ ಛಾಯಾಗ್ರಹಣ ಮಾಡಲಿದ್ದಾರೆ.
ಇದನ್ನೂ ಓದಿ: ‘ದಿಲ್’ ರಾಜು ನಿರ್ಮಾಣದ ಚಿತ್ರದಲ್ಲಿ ಯಶ್?
ಸದ್ಯ ಸುನಿ, 'ಗತವೈಭವ' ಎಂಬ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರ ಮುಗಿಸಿ, ಸದ್ಯದಲ್ಲೇ ವಿನಯ್ ಭಿನಯದ ಹೊಸ ಚಿತ್ರವೊಂದನ್ನು ಕಥಗೆತ್ತಿಕೊಳ್ಳಲಿದ್ದಾರೆ.