More

    ‘ದಿಲ್​’ ರಾಜು ನಿರ್ಮಾಣದ ಚಿತ್ರದಲ್ಲಿ ಯಶ್​?

    ಹೈದರಾಬಾದ್​: ಯಶ್​ ಅಭಿನಯದ ‘ಕೆಜಿಎಫ್​ 2’ ಚಿತ್ರ ಬಿಡುಗಡೆಯಾಗಿ ಎಂಟೂವರೆ ತಿಂಗಳುಗಳಾಗಿವೆ. ಈ ಎಂಟೂವರೆ ತಿಂಗಳಲ್ಲಿ ಯಶ್​ ಮುಂದಿನ ನಡೆಯೇನು ಎಂಬ ವಿಷಯವಾಗಿ ಸಾಕಷ್ಟು ಚರ್ಚೆಗಳಾಗಿವೆ. ಆದರೆ, ಇದುವರೆಗೂ ಇದಕ್ಕೆ ಉತ್ತರ ಮಾತ್ರ ಸಿಕ್ಕಿಲ್ಲ.

    ಇದನ್ನೂ ಓದಿ: ಹೊಸ ವರ್ಷದ ಮೊದಲ ಶುಕ್ರವಾರ ಎಂಟು ಚಿತ್ರಗಳ ಬಿಡುಗಡೆ …

    ಹೀಗಿರುವಾಗಲೇ, ತೆಲುಗಿನ ಬಿಗ್​ಶಾಟ್​ ನಿರ್ಮಾಪಕ ‘ದಿಲ್​’ ರಾಜು ನಿರ್ಮಾಣದ ಚಿತ್ರವೊಂದರಲ್ಲಿ ಯಶ್​ ನಟಿಸುವ ಸಾಧ್ಯತೆ ಇದೆ ಎಂಬ ಮಾತೊಂದು ಇದೀಗ ಕೇಳಿಬರುತ್ತಿದೆ. ಇತ್ತೀಚೆಗೆ, ಅವರಿಬ್ಬರ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಯಶ್​ಗೆ ರಾಜು ದೊಡ್ಡ ಅಡ್ವಾನ್ಸ್​ ಕೊಟ್ಟಿದ್ದಾರೆ ಎಂಬ ಮಾತಿದೆ.

    2003ರಲ್ಲಿ ಬಿಡುಗಡೆಯಾದ ‘ದಿಲ್​’ ಚಿತ್ರದ ಮೂಲಕ ನಿರ್ಮಾಪಕರಾದ ರಾಜು, ಇದುವರೆಗೂ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ತೆಲುಗಿನ ಸ್ಟಾರ್​ ನಟರ ಚಿತ್ರಗಳನ್ನು ನಿರ್ಮಿಸಿರುವ ಅವರು, ‘ಜೆರ್ಸಿ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ವಿಜಯ್​ ಅಭಿನಯದ ‘ವಾರಸುಡು’ ಮೂಲಕ ತಮಿಳಿಗೂ ಎಂಟ್ರಿ ಕೊಟ್ಟಿರುವ ಅವರು, ದೊಡ್ಡ ಬಜೆಟ್​ನ ಪ್ಯಾನ್​ ಇಂಡಿಯಾ ಚಿತ್ರವೊಂದು ನಿರ್ಮಿಸುವ ಯೋಚನೆಯಲ್ಲಿದ್ದಾರಂತೆ. ಈ ಚಿತ್ರಕ್ಕೆ ಯಶ್​ರಂತಹ ಪ್ಯಾನ್​ ಇಂಡಿಯಾ ನಟ ಸರಿ ಎಂಬ ತೀರ್ಮಾನಕ್ಕೆ ಬಂದಿರುವ ಅವರು, ಯಶ್​ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರಂತೆ. ಆದರೆ, ಈ ಕುರಿತು ಯಶ್​ ಆಗಲೀ, ‘ದಿಲ್​’ ರಾಜು ಆಗಲೀ ಎಲ್ಲೂ ಮಾತನಾಡಿಲ್ಲ.

    ಇದನ್ನೂ ಓದಿ: ನೆಗೆಟಿವಿಟಿ ಬಂದಾಗ ಸ್ವೀಕರಿಸಬೇಕು; ರಶ್ಮಿಕಾಗೆ ಕಿಚ್ಚನ ಸಲಹೆ …

    ಇನ್ನು, ಸರಿಯಾಗಿ ನಾಲ್ಕು ದಿನಗಳಿಗೆ ಅಂದರೆ, ಜನವರಿ 8ಕ್ಕೆ ಯಶ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಾದರೂ ಯಶ್​ ಅಭಿನಯದ ಹೊಸ ಚಿತ್ರದ ಮಾಹಿತಿ ಸಿಗಬಹುದಾ ಎಂದು ಅವರ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

    ಜಾಸ್ತಿ ಮಾತಾಡಬೇಡಿ, ಜನ ಕಲ್ಲು ಹೊಡೆಯಬಹುದು … ನಾಸಿರುದ್ದೀನ್​ ಷಾಗೆ ಪತ್ನಿ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts