26ಕ್ಕೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಟ ಸಿಂಹ-ಹರಿಪ್ರಿಯಾ ಮದುವೆ

Vasishta Simha - Haripriya - Ashrama 4 - Final
Published on

ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಎಂಗೇಜ್​ಮೆಂಟ್​ ಆಗುತ್ತಿದ್ದಂತೆಯೇ, ಅವರಿಬ್ಬರ ಮದುವೆ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆದರೆ, ಈ ಜೋಡಿ ಮದುವೆ ಯಾವಾಗ ಎಂಬ ವಿಷಯವನ್ನು ರಹಸ್ಯವಾಗಿಟ್ಟಿತ್ತು. ಈಗ ರಹಸ್ಯ ಕೊನೆಗೂ ಹೊರಬಿದ್ದಿದ್ದು, ಜ.26ರಂದು ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಮದುವೆ ನಡೆಯಲಿದೆ.

ಇಂದು ವಸಿಷ್ಠ ಮತ್ತು ಹರಿಪ್ರಿಯಾ, ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮೀಜಿ‌ಯವರ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಪ್ರತಾಪ ಸಿಂಹ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಸಾಥ್​ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಮದುವೆಯಾದ ಸೆಲೆಬ್ರಿಟಿಗಳೆಲ್ಲ ಅರಮನೆ ಮೈದಾನದಲ್ಲಿ ಅಥವಾ ಐಷಾರಾಮಿ ರೆಸಾರ್ಟ್​ಗಳಲ್ಲಿ ಮದುವೆ ಆಗುತ್ತಿದ್ದರು. ಈಗ ವಸಿಷ್ಠ ಮತ್ತು ಹರಿಪ್ರಿಯಾ, ಆ ಸಂಪ್ರದಾಯವನ್ನು ಒಡೆದು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸರಳವಾಗಿ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮದುವೆಯಲ್ಲಿ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗವಹಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net