ಇದುವರೆಗೂ ನೋಡದ ಬೋಲ್ಡ್​ ಅವತಾರದಲ್ಲಿ ಶ್ರುತಿ ಹಾಸನ್​! ಹಾಲಿವುಡ್​ ಚಿತ್ರದ ಟ್ರೈಲರ್​ನಲ್ಲಿ ಹಸಿಬಿಸಿ ದೃಶ್ಯಗಳು | Shruti Haasan

Shruti Haasan
Published on

Shruti Haasan : ಸಕಲಕಲಾವಲ್ಲಭ ಕಮಲ್ ಹಾಸನ್ ಅವರ ಮಗಳಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರುತಿ ಹಾಸನ್, ನಾಯಕಿಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಾಯಕಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಬಹುಭಾಷಾ ನಟಿ ಎಂಬ ಹೆಸರು ಗಳಿಸಿದ್ದಾರೆ. ಕೇವಲ ನಟಿ ಮಾತ್ರವಲ್ಲ, ಗಾಯಕಿ ಮತ್ತು ಸಂಗೀತ ನಿರ್ದೇಶಕಿಯಾಗಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಶ್ರುತಿ ಹಾಸನ್, ಹಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಶ್ರುತಿ ಹಾಸನ್ ಮತ್ತು ಮಾರ್ಕ್ ರೌಲಿ ಅಭಿನಯದ 'ದಿ ಐ' ಹೆಸರಿನ ಹಾಲಿವುಡ್‌ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ಫಿಂಗರ್‌ಪ್ರಿಂಟ್ ಕಂಟೆಂಟ್ ಬ್ಯಾನರ್ ಅಡಿಯಲ್ಲಿ ಡ್ಯಾಫ್ನೆ ಸ್ಕಾಮನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ಫೆಬ್ರವರಿ 27ರಂದು ಮುಂಬೈ ವೆಂಚ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಇದು ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

'ದಿ ಐ' ಸಿನಿಮಾದ ಪ್ರಚಾರದಲ್ಲಿ ಸಾವು ಜೀವನದ ಅಂತ್ಯವಲ್ಲ ಎಂಬ ಉಲ್ಲೇಖವಿದೆ. ಟ್ರೇಲರ್ ನೋಡಲು ತುಂಬಾ ಕುತೂಹಲಕಾರಿಯಾಗಿದೆ. ಈ ಸಿನಿಮಾ ಥ್ರಿಲ್ಲರ್ ಸಿನಿಮಾ ಆಗಿರಲಿದೆ ಎಂದು ತಿಳಿದುಬಂದಿದೆ. ಶ್ರುತಿ ಹಾಸನ್ ಅವರ ಸಂಗಾತಿ ಪಾತ್ರ ಸತ್ತರೆ ಏನಾಗುತ್ತದೆ ಎಂಬುದರ ಬಗ್ಗೆ ಕಥಾವಸ್ತು ಇರಲಿದೆ.

ಇನ್ನು ಈ ಸಿನಿಮಾದಲ್ಲಿ ಶ್ರುತಿ ಕೂಡ ತುಂಬಾ ಬೋಲ್ಡ್​ ಆಗಿ ನಟಿಸಿದ್ದಾರೆ. ಟ್ರೈಲರ್​​ನಲ್ಲಿಯೇ ಹಸಿಬಿಸಿ ದೃಶ್ಯಗಳು ತುಂಬಿವೆ. ಇದುವರೆಗೂ ಕಾಣಿಸಿಕೊಳ್ಳದಷ್ಟು ಬೋಲ್ಡ್​ ಆಗಿ ಈ ಸಿನಿಮಾದಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net