ಮದ್ವೆ ಮುಗಿಸಿ ಮನೆಗೆ ಮರಳುತ್ತಿದ್ದ ಐವರು ಹುಡುಗಿಯರ ಮೇಲೆ 18 ಅಪ್ರಾಪ್ತರಿಂದ ಗ್ಯಾಂಗ್​ರೇಪ್: ಜಾರ್ಖಂಡ್​ನಲ್ಲಿ ಶಾಕಿಂಗ್​​ ಘಟನೆ! Jharkhand shocker​

Jharkhand shocker
Published on

Jharkhand shocker : ಜಾರ್ಖಂಡ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮದುವೆ ಸಮಾರಂಭವನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಬುಡಕಟ್ಟು ಜನಾಂಗದ ಐವರು ಹುಡುಗಿಯರ ಮೇಲೆ 18 ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಆತಂಕಕಾರಿ ಘಟನೆ ರಾನಿಯಾ ಏರಿಯಾದಲ್ಲಿ ನಡೆದಿದೆ.

ಸಂತ್ರಸ್ತ ಹುಡುಗಿಯರು ಮದುವೆ ಸಮಾರಂಭವನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಈ ಕೃತ್ಯದಲ್ಲಿ ಭಾಗಿಯಾದ 18 ಮಂದಿಯನ್ನು ಬಂಧಿಸಲಾಗಿದೆ.

16 ವರ್ಷಕ್ಕಿಂತ ಮೇಲ್ಪಟ್ಟ ಹುಡುಗರನ್ನು ವಯಸ್ಕರಂತೆ ಪರಿಗಣಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನಾವು 18 ಜನರನ್ನು ಬಂಧಿಸಿದ್ದೇವೆ. ಎಲ್ಲರೂ ಅಪ್ರಾಪ್ತ ವಯಸ್ಕರು. ಈ ಪ್ರಕರಣದ ಸಂತ್ರಸ್ತೆಯರಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಜಾರ್ಖಂಡ್ ಡಿಜಿಪಿ ಅನುರಾಗ್ ಗುಪ್ತಾ ಹೇಳಿದರು.

ನಮ್ಮ ಸಮಾಜದಲ್ಲಿ ಹುಡುಗರು ಇಂತಹ ಹೇಯ ಕೆಲಸಗಳನ್ನು ಮಾಡುವುದನ್ನು ತಡೆಯಲು, 16 ವರ್ಷಕ್ಕಿಂತ ಮೇಲ್ಪಟ್ಟವರನ್ನು ವಯಸ್ಕರಂತೆ ಪರಿಗಣಿಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಗುಪ್ತಾ ತಿಳಿಸಿದರು. ಅಲ್ಲದೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ 12 ರಿಂದ 17 ವರ್ಷ ವಯಸ್ಸಿನ ಎಲ್ಲ ಆರೋಪಿಗಳನ್ನು ಬಾಲಾಪರಾಧಿ ಮನೆಗೆ ಕಳುಹಿಸಲಾಗಿದೆ ಎಂದರು.

ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹುಡುಗಿಯರನ್ನು ಸೋಮವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಘಟನೆ ಕಳೆದ ಶುಕ್ರವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ಹುಡುಗಿಯರು ರಾನಿಯಾದಲ್ಲಿ ಮದುವೆಗೆ ಹೋಗಿ ಮನೆಗೆ ಹಿಂತಿರುಗುತ್ತಿದ್ದರು. ಅವರ ಕುಟುಂಬಸ್ಥರು ರಾನಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಭಾನುವಾರ ಈ ವಿಷಯ ಬೆಳಕಿಗೆ ಬಂದಿದೆ ಎಂದು ಖುಂತಿ ಎಸ್ಪಿ ಅಮನ್ ಕುಮಾರ್ ತಿಳಿಸಿದ್ದಾರೆ.

ಹುಡುಗಿಯರ ಹೇಳಿಕೆಯ ಆಧಾರದ ಮೇಲೆ, ರಾನಿಯಾ ಪೊಲೀಸರು ಆರೋಪಿ ಹುಡುಗರ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 126 (2) (ತಪ್ಪಾಗಿ ನಿರ್ಬಂಧಿಸುವುದು), 127 (2) (ತಪ್ಪಾಗಿ ಸೆರೆ ಹಿಡಿಯುವುದು), 115 (2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 109 (1) (ಕೊಲೆಗೆ ಪ್ರಯತ್ನ) ಮತ್ತು 70 (2) (18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ) ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 4 (ಲೈಂಗಿಕ ದೌರ್ಜನ್ಯ) ಮತ್ತು 8 (ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net